ಸೃಷ್ಟಿ! – ನಿಜವಾಗಿ ಆ ಮಗು ಜಗತ್ತಿನ ಒಂದು ಅದ್ಭುತ ಸೃಷ್ಟಿಯೇ! ಅವಳ ಚುರುಕುತನ, ಮುದ್ದು ಮಾತಿಗೆ ಸುದೀಪ ಬೆರಗಾಗಿದ್ದ. ಸೃಷ್ಟಿಯ ಬುದ್ಧಿ ಶಕ್ತಿ ಅಸಾಧಾರಣವಾಗಿರುವುದನ್ನು ಸುದೀಪ ಗಮನಿಸಿದ. ಅವಳ ಮಾತಿನಲ್ಲಿ ವಯಸ್ಸಿಗೆ ಮೀರಿದ ಪ್ರೌಢತೆ ಇತ್ತು. ಬಿಳುಪಾದ ಗುಂಡು ಮುಖದಲ್ಲಿ ಗಾಜಿನ ಗೋಲಿಯಂತಹ ನೀಲಿ ಕಣ್ಣುಗಳು! ಅರೆ ಈ ನೀಲಿ ಕಣ್ಣುಗಳು ಎಲ್ಲಿಂದ ಬಂದವು? ಯಾಮಿನಿ ಕಪ್ಪು ಕಂಗಳ ಚೆಲುವೆ. ಬಹುಶಃ ತಂದೆಯಿಂದ? ಉಹುಂ.. ಯಾಮಿನಿಯನ್ನು ಇನ್ನೊಬ್ಬನೊಡನೆ ಕಲ್ಪಿಸಿಕೊಳ್ಳುವುದೂ ಅವನಿಂದಾಗಲಿಲ್ಲ
 
 ತಟ್ಟನೆ ಅವನಿಗೊಂದು ಘಟನೆ ನೆನಪಾಯಿತು. ಒಂದು ದಿನ ಯಾಮಿನಿ ಇನ್ನೂ ಅಫೀಸಿಗೆ ಬಂದಿರಲಿಲ್ಲ. ಆಗ ಯಾಮಿನಿಯನ್ನು ಕೇಳಿಕೊಂಡು ಯಾವುದೋ ಅನಾಥಾಶ್ರಮದವರು ಬಂದಿದ್ದರು. ಆಮೇಲೆ ಹಲವಾರು ಬಾರಿ ಅವರನ್ನು ಯಾಮಿನಿಯೊಡನೆ ಕಂಡಂತಿತ್ತು. ಯಾಮಿನಿ ಹಲವಾರು ಬಾರಿ ದೂರವಾಣಿಯಲ್ಲಿ ಆಡುತ್ತಿದ್ದ ಮಾತುಗಳು ಅಸ್ಪಷ್ಟವಾಗಿ ನೆನಪಿಗೆ ಬಂದಿತು. ಮನಸ್ಸಿನಲ್ಲಿ ಚದುರಿ ಬಿದ್ದಿದ್ದ ಎಳೆಗಳನ್ನೆಲ್ಲ ಒಂದೊಂದಾಗಿ ಜೋಡಿಸುತ್ತಾ ಹೋದ. ಖುಷಿಯಿಂದ ಚೀರುವಂತಾಯಿತು ಅವನಿಗೆ. 

ಸೃಷ್ಟಿ ಯಾಮಿನಿಯ ಮಗಳಲ್ಲ! ದತ್ತು ಪುತ್ತಿ? “ನನ್ನ ಮಗಳುಎಂದು ಹೆಮ್ಮೆಯಿಂದ ನುಡಿದಳಲ್ಲಾ? ಯಾಮಿನಿಯಂತಹ ವಿಶಾಲ ಹೃದಯದ ಹೆಣ್ಣಿಗೆ ಪ್ರೀತಿ ಧಾರೆ ಎರೆಯಲು ಆ ಮಗು ತನ್ನದೇ ಆಗಿರಬೇಕಾಗಿಲ್ಲ. ಇರಬಹುದೇನೋ ಅಂದಿತು ಒಂದು ಮನಸ್ಸು. ಆಧಾರವಿಲ್ಲದೆ ನಂಬೆನೆಂದು ಸಾರಾಸಗಟಾಗಿ ನಿರಾಕರಿಸಿತು ಇನ್ನೊಂದು ಮನಸ್ಸು! ಯಾಮಿನಿಯನ್ನೇ ಕೇಳಲೇ? ಏನೆಂದಾಳು? ಉತ್ತರಿಸಿಯಾಳೇ? ಯಾಕಿಲ್ಲ? ಯಾಮಿನಿ ಇರುವುದೇ ಹಾಗೆ. ಅವಳ ಮಾತು, ಮನಸ್ಸು ಎಲ್ಲಾ ನೇರ….ನೇರ! 

ಅಷ್ಟರಲ್ಲೇ ಯಾಮಿನಿ ಹೊರಗೆ ಬಂದು, “ಬನ್ನಿ ಸುದೀಪ್, ಬಾರೇ ಚಿನ್ನ, ಊಟ ರೆಡಿ. ಕೈಕಾಲು ತೊಳೆದು ಒಳಗೆ ಬನ್ನಿ, ಊಟ ಬಡಿಸುತ್ತೇನೆ” ಅಂದಳು. ಸೃಷ್ಟಿ ಜಿಗಿಯುತ್ತಾ ಒಳಗೋಡಿದರೆ ತಾನೂ ಹಾಗೇ ಓಡುವ ಮನಸ್ಸಾಯಿತು ಇವನಿಗೆ; ಆದರೂ ಗಂಭೀರವಾಗಿಯೇ ಒಳನಡೆದ.

ಊಟದ ಮೇಜಿನ ಮುಂದೆ ಕೇಳಲೋ, ಬೇಡವೋ, ಹೇಗೆ ಕೇಳಲಿ, ಇಲ್ಲಿ ಕೇಳಲೇ, ಆಫೀಸಿನಲ್ಲೇ ಕೇಳಲೇ… ಏನೆಲ್ಲ ಗೊಂದಲಗಳ ನಡುವೆ ಮೊಸರನ್ನದ ಜೊತೆಗಿನ ಬಾಳಕದ ಮೆಣಸು ನೆತ್ತಿ ಹತ್ತಿತು. “ನಿಧಾನಕ್ಕೆ, ಮೇಲೆ ನೋಡಿ, ನೀರು ಕುಡೀರಿ…” ಅನ್ನುತ್ತಾ ನೀರಿನ ಲೋಟ ಕೈಗಿತ್ತವಳ ಕಣ್ಣಿನಲ್ಲಿ ಕಂಡ ಸ್ನೇಹಕ್ಕೆ ಮತ್ತೆ ಕೆಮ್ಮಿದ. ಊಟ ಮುಗಿಸಿದಾಗ ಯಾಮಿನಿಯ ಅಪ್ಪ, ತಾನೂ ತಾಂಬೂಲ ಹಾಕಿಕೊಂಡು ಇವನತ್ತ ತಟ್ಟೆ ಚಾಚಿದರು. ಸಂಕೋಚದಿಂದ “ಅಭ್ಯಾಸ ಇಲ್ಲ, ಕ್ಷಮಿಸಿ” ಅಂದ. ಸಣ್ಣದಾಗಿ ನಗುತ್ತಾ, “ಸಿಗರೇಟು ಬೇಕಾಗಿತ್ತಾ? ಹೊರಗೆ ಹೋಗಬೇಕಾ?” ಅಂದರು. “ಅವೆಲ್ಲ ಏನೂ ಇಲ್ಲ” ಅಂದವನ ಮುಖವನ್ನೇ ನೋಡಿ “ಹ್ಞೂಂ” ಎಂದು ಗೋಣು ಹಾಕಿದ್ದರಲ್ಲಿ ಇವನಿಗೇನೋ ವಿಶಿಷ್ಟ ಅರ್ಥ ಕಂಡಿತ್ತು.

ಮತ್ತೊಂದರ್ಧ ಘಂಟೆ ರಾಯರ ಜೊತೆ ಅದೂ ಇದೂ ಹರಟೆ ಹೊಡೆದು ಹೊರಟು ನಿಂತವನನ್ನು ತಡೆದದ್ದು ಯಾಮಿನಿ ಮಗಳಿಗೆ ಹಾಡುತ್ತಿದ್ದ ಜೋಗುಳ… “ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು, ನಿದ್ದೆ ಬರುವಳು ಹೊದ್ದು, ಮಲಗು ಮಗುವೆ, ಜೋ…. ಜೋ ಜೋ ಜೋ….”“ಎರಡೇ ನಿಮಿಷ ಇರಿ, ಈ ಹಾಡು ಹಾಡಿದ್ರೆ ಪುಟ್ಟಿಗೆ ಕ್ಷಣದಲ್ಲೇ ನಿದ್ದೆ ಬರುತ್ತೆ. ಯಾಮಿನಿಗೂ ಹೇಳಿ ಹೊರಟೀರಂತೆ. ಕೂತಿರಿ. ನನಗೂ ಹೊತ್ತು ಹೋಗತ್ತೆ” ಅಂದ ರಾಯರ ಮಾತಿಗೆ ಎದುರಾಡದಾದ.

ಅವರೆಂದಂತೆ ಎರಡೇ ನಿಮಿಷಗಳಲ್ಲಿ ಯಾಮಿನಿ ಕೋಣೆಯಿಂದ ಹೊರಗೆ ಬಂದಳು. “ನಾನಿನ್ನು ಬರ್ತೀನಿ” ಸುದೀಪ ಹೊರಟು ನಿಂತ. “ನಾಳೆ ಊಟಕ್ಕೂ ಇಲ್ಲೇ ಬನ್ನಿ” ಅಂದರು ರಾಯರು. “ಅಪ್ಪ! ಅವರಿಗೇನು ಕೆಲಸಗಳು ಇರುತ್ವೋ… ಹೇಳದೆ ಕೇಳದೆ ಅಪ್ಪಣೆ ಕೊಡಿಸ್ತೀರಲ್ಲ, ಸರಿಯಾ?” ಗದರಿಸುವಂತೆ ನುಡಿದರೂ ಅವಳ ಕಣ್ಣುಗಳು ಇವನ ಉತ್ತರ ಹುಡುಕುವಂತೆ ಅವನಿಗನ್ನಿಸಿತು. “ನಾಳೆ ತಾನೇ, ನಾಳೆ ನೋಡೋಣ” ಅನ್ನುತ್ತಾ ಮೆಟ್ಟಲಿಳಿದ ಸುದೀಪ. ಗೇಟಿನ ಬಳಿ ಬಂದವಳು ಏನೋ ಹೇಳಲು ಕಾಯುತ್ತಿದ್ದಾಳೆ ಎನ್ನಿಸಿ “ಏನು?” ಅಂದೇ ಬಿಟ್ಟ, ತಕ್ಷಣ ನಾಲಗೆ ಕಚ್ಚಿಕೊಂಡ. ಹದವಾದ ಬೆಳದಿಂಗಳಲ್ಲಿ ಯಾಮಿನಿಯ ಮುಖ ಮಿನುಗಿದ್ದನ್ನು ಗಮನಿಸಿಯೂ ಗೇಟಿನ ಕಡೆ ಬೆನ್ನು ಹಾಕಿ ಬೈಕಿನತ್ತ ನಡೆದ.
  ಸುದೀಪ ಮನೆಗೆ ಮರಳಿದಾಗ ಬಾಗಿಲ ತೆಳಗೆ ಅಂಚೆ ಪಾಕೀಟನ್ನು ಕಂಡು ತೆರೆದು ನೋಡಿದ. ತಾಯಿಯ ಪತ್ರ ಬಂದಿತ್ತು. ಕನ್ನಿಕಾಳ ತಂದೆ ಹಾಗು ತಾಯಿ ಮತ್ತೆ ಮತ್ತೆ ಕೇಳುತ್ತಿದ್ದಾರೆ. ನನಗೂ ಸಹ ಕನ್ನಿಕಾಳ ಮೇಲೆ ಮನಸ್ಸಿದೆ. ನೀನು ಬೇಗನೆ ಇಲ್ಲಿ ಬಂದು ಮುಂದಿನ ಕಾರ್ಯಕ್ಕೆ ಅನುಕೂಲ ಮಾಡಿಕೊಡು ಎನ್ನುವ ಸಾರಾಂಶ ಅದರಲ್ಲಿತ್ತು.
ಸುದೀಪ ತನ್ನಷ್ಟಕ್ಕೆ ನಕ್ಕು ಶಯ್ಯೆಗೆ ಉರುಳಿದ. ಕನಸಿನ ಕನ್ಯೆ ಕನಸಿನಲ್ಲಿ ಮೂಡಿದಳು. ಒಂದು ಎತ್ತರವಾದ ಶಿಖರದ ಮೇಲೆ ಯಾಮಿನಿ ನಿಂತುಕೊಂಡಿದ್ದಾಳೆ. ಕೆಳಗೆ ನಿಂತ ಸುದೀಪನನ್ನು ನೋಡಿ ಅವಳು ನಕ್ಕಳು. ಆ ನಗೆ ಅವನಿಗೊಂದು ಆಹ್ವಾನವಾಗಿತ್ತು. ‘ಸುದೀಪ, ನೀನು ನನ್ನ ಹತ್ತಿರ ಬರಬೇಕಾದರೆ ಈ ಎತ್ತರವನ್ನು ಏರಬೇಕಾಗುತ್ತದೆ. ಇದು ಸುಲಭವಲ್ಲ, ತಿಳಿಯಿತೇ?’ ಸುದೀಪ ತೇಕುತ್ತ, ತೇಕುತ್ತ ಮೇಲೇರತೊಡಗಿದ. ಕೊನೆಗೊಮ್ಮೆ ಅವಳ ಹತ್ತಿರ ಬಂದಾಗ ಅವಳು ಹಕ್ಕಿಯಂತೆ ಮೇಲೆ ಹಾರಿದಳು. ಸುದೀಪ ಹಾರಹೋಗಿ ದೊಪ್ಪನೆ ನೆಲಕ್ಕೆ ಬಿದ್ದ. ಅವಳು ನಕ್ಕು ಕೆಳಗೆ ಬಂದು ಇವನ ಕೈ ಹಿಡಿದು ಮೇಲೆಬ್ಬಿಸಿ, ಇವನ ಕಣ್ಣಲ್ಲಿ ಕಣ್ಣಿಟ್ಟು ನೋಡಿದಳು. ಇಡೀ ವಿಶ್ವವನ್ನೇ ತೊಯ್ಯಿಸುವ ಪ್ರೀತಿಯ ಧಾರೆ ಅವಳ ಕಣ್ಣುಗಳಲ್ಲಿ ಸುದೀಪನಿಗೆ ಕಂಡಿತು. ಇವಳು ಸಾಮಾನ್ಯ ಹೆಣ್ಣಲ್ಲ, ಇವಳಲ್ಲಿ ಮಾನವ ಸ್ನೇಹ ಹಾಗೂ ಆದರ್ಶ ಮೈಗೂಡಿವೆ. ಇವಳ ಕೈಹಿಡಿವವನು ಇವಳಂತಹ ಆದರ್ಶವಾದಿಯೇ ಆಗಬೇಕು ಎಂದುಕೊಂಡ ಸುದೀಪ.
…………………………………………………………………………     …………………………………………………………………………………

2 thoughts on “ಆಕಾಶ ದೀಪವು ನೀನು – 4”

 1. ಅಷ್ಟರಲ್ಲೇ ಯಾಮಿನಿ ಹೊರಗೆ ಬಂದು, “ಬನ್ನಿ ಸುದೀಪ್, ಬಾರೇ ಚಿನ್ನ, ಊಟ ರೆಡಿ. ಕೈಕಾಲು ತೊಳೆದು ಒಳಗೆ ಬನ್ನಿ, ಊಟ ಬಡಿಸುತ್ತೇನೆ” ಅಂದಳು. ಸೃಷ್ಟಿ ಜಿಗಿಯುತ್ತಾ ಒಳಗೋಡಿದರೆ ತಾನೂ ಹಾಗೇ ಓಡುವ ಮನಸ್ಸಾಯಿತು ಇವನಿಗೆ; ಆದರೂ ಗಂಭೀರವಾಗಿಯೇ ಒಳನಡೆದ.

  ಊಟದ ಮೇಜಿನ ಮುಂದೆ ಕೇಳಲೋ, ಬೇಡವೋ, ಹೇಗೆ ಕೇಳಲಿ, ಇಲ್ಲಿ ಕೇಳಲೇ, ಆಫೀಸಿನಲ್ಲೇ ಕೇಳಲೇ… ಏನೆಲ್ಲ ಗೊಂದಲಗಳ ನಡುವೆ ಮೊಸರನ್ನದ ಜೊತೆಗಿನ ಬಾಳಕದ ಮೆಣಸು ನೆತ್ತಿ ಹತ್ತಿತು. “ನಿಧಾನಕ್ಕೆ, ಮೇಲೆ ನೋಡಿ, ನೀರು ಕುಡೀರಿ…” ಅನ್ನುತ್ತಾ ನೀರಿನ ಲೋಟ ಕೈಗಿತ್ತವಳ ಕಣ್ಣಿನಲ್ಲಿ ಕಂಡ ಸ್ನೇಹಕ್ಕೆ ಮತ್ತೆ ಕೆಮ್ಮಿದ. ಊಟ ಮುಗಿಸಿದಾಗ ಯಾಮಿನಿಯ ಅಪ್ಪ, ತಾನೂ ತಾಂಬೂಲ ಹಾಕಿಕೊಂಡು ಇವನತ್ತ ತಟ್ಟೆ ಚಾಚಿದರು. ಸಂಕೋಚದಿಂದ “ಅಭ್ಯಾಸ ಇಲ್ಲ, ಕ್ಷಮಿಸಿ” ಅಂದ. ಸಣ್ಣದಾಗಿ ನಗುತ್ತಾ, “ಸಿಗರೇಟು ಬೇಕಾಗಿತ್ತಾ? ಹೊರಗೆ ಹೋಗಬೇಕಾ?” ಅಂದರು. “ಅವೆಲ್ಲ ಏನೂ ಇಲ್ಲ” ಅಂದವನ ಮುಖವನ್ನೇ ನೋಡಿ “ಹ್ಞೂಂ” ಎಂದು ಗೋಣು ಹಾಕಿದ್ದರಲ್ಲಿ ಇವನಿಗೇನೋ ವಿಶಿಷ್ಟ ಅರ್ಥ ಕಂಡಿತ್ತು.

  ಮತ್ತೊಂದರ್ಧ ಘಂಟೆ ರಾಯರ ಜೊತೆ ಅದೂ ಇದೂ ಹರಟೆ ಹೊಡೆದು ಹೊರಟು ನಿಂತವನನ್ನು ತಡೆದದ್ದು ಯಾಮಿನಿ ಮಗಳಿಗೆ ಹಾಡುತ್ತಿದ್ದ ಜೋಗುಳ… “ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು, ನಿದ್ದೆ ಬರುವಳು ಹೊದ್ದು, ಮಲಗು ಮಗುವೆ, ಜೋ…. ಜೋ ಜೋ ಜೋ….”
  “ಎರಡೇ ನಿಮಿಷ ಇರಿ, ಈ ಹಾಡು ಹಾಡಿದ್ರೆ ಪುಟ್ಟಿಗೆ ಕ್ಷಣದಲ್ಲೇ ನಿದ್ದೆ ಬರುತ್ತೆ. ಯಾಮಿನಿಗೂ ಹೇಳಿ ಹೊರಟೀರಂತೆ. ಕೂತಿರಿ. ನನಗೂ ಹೊತ್ತು ಹೋಗತ್ತೆ” ಅಂದ ರಾಯರ ಮಾತಿಗೆ ಎದುರಾಡದಾದ.

  ಅವರೆಂದಂತೆ ಎರಡೇ ನಿಮಿಷಗಳಲ್ಲಿ ಯಾಮಿನಿ ಕೋಣೆಯಿಂದ ಹೊರಗೆ ಬಂದಳು. “ನಾನಿನ್ನು ಬರ್ತೀನಿ” ಸುದೀಪ ಹೊರಟು ನಿಂತ. “ನಾಳೆ ಊಟಕ್ಕೂ ಇಲ್ಲೇ ಬನ್ನಿ” ಅಂದರು ರಾಯರು. “ಅಪ್ಪ! ಅವರಿಗೇನು ಕೆಲಸಗಳು ಇರುತ್ವೋ… ಹೇಳದೆ ಕೇಳದೆ ಅಪ್ಪಣೆ ಕೊಡಿಸ್ತೀರಲ್ಲ, ಸರಿಯಾ?” ಗದರಿಸುವಂತೆ ನುಡಿದರೂ ಅವಳ ಕಣ್ಣುಗಳು ಇವನ ಉತ್ತರ ಹುಡುಕುವಂತೆ ಅವನಿಗನ್ನಿಸಿತು. “ನಾಳೆ ತಾನೇ, ನಾಳೆ ನೋಡೋಣ” ಅನ್ನುತ್ತಾ ಮೆಟ್ಟಲಿಳಿದ ಸುದೀಪ. ಗೇಟಿನ ಬಳಿ ಬಂದವಳು ಏನೋ ಹೇಳಲು ಕಾಯುತ್ತಿದ್ದಾಳೆ ಎನ್ನಿಸಿ “ಏನು?” ಅಂದೇ ಬಿಟ್ಟ, ತಕ್ಷಣ ನಾಲಗೆ ಕಚ್ಚಿಕೊಂಡ. ಹದವಾದ ಬೆಳದಿಂಗಳಲ್ಲಿ ಯಾಮಿನಿಯ ಮುಖ ಮಿನುಗಿದ್ದನ್ನು ಗಮನಿಸಿಯೂ ಗೇಟಿನ ಕಡೆ ಬೆನ್ನು ಹಾಕಿ ಬೈಕಿನತ್ತ ನಡೆದ.

 2. ಸುದೀಪ ಮನೆಗೆ ಮರಳಿದಾಗ ಬಾಗಿಲ ತೆಳಗೆ ಅಂಚೆ ಪಾಕೀಟನ್ನು ಕಂಡು ತೆರೆದು ನೋಡಿದ. ತಾಯಿಯ ಪತ್ರ ಬಂದಿತ್ತು. ಕನ್ನಿಕಾಳ ತಂದೆ ಹಾಗು ತಾಯಿ ಮತ್ತೆ ಮತ್ತೆ ಕೇಳುತ್ತಿದ್ದಾರೆ. ನನಗೂ ಸಹ ಕನ್ನಿಕಾಳ ಮೇಲೆ ಮನಸ್ಸಿದೆ. ನೀನು ಬೇಗನೆ ಇಲ್ಲಿ ಬಂದು ಮುಂದಿನ ಕಾರ್ಯಕ್ಕೆ ಅನುಕೂಲ ಮಾಡಿಕೊಡು ಎನ್ನುವ ಸಾರಾಂಶ ಅದರಲ್ಲಿತ್ತು.
  ಸುದೀಪ ತನ್ನಷ್ಟಕ್ಕೆ ನಕ್ಕು ಶಯ್ಯೆಗೆ ಉರುಳಿದ. ಕನಸಿನ ಕನ್ಯೆ ಕನಸಿನಲ್ಲಿ ಮೂಡಿದಳು. ಒಂದು ಎತ್ತರವಾದ ಶಿಖರದ ಮೇಲೆ ಯಾಮಿನಿ ನಿಂತುಕೊಂಡಿದ್ದಾಳೆ. ಕೆಳಗೆ ನಿಂತ ಸುದೀಪನನ್ನು ನೋಡಿ ಅವಳು ನಕ್ಕಳು. ಆ ನಗೆ ಅವನಿಗೊಂದು ಆಹ್ವಾನವಾಗಿತ್ತು. ‘ಸುದೀಪ, ನೀನು ನನ್ನ ಹತ್ತಿರ ಬರಬೇಕಾದರೆ ಈ ಎತ್ತರವನ್ನು ಏರಬೇಕಾಗುತ್ತದೆ. ಇದು ಸುಲಭವಲ್ಲ, ತಿಳಿಯಿತೇ?’ ಸುದೀಪ ತೇಕುತ್ತ, ತೇಕುತ್ತ ಮೇಲೇರತೊಡಗಿದ. ಕೊನೆಗೊಮ್ಮೆ ಅವಳ ಹತ್ತಿರ ಬಂದಾಗ ಅವಳು ಹಕ್ಕಿಯಂತೆ ಮೇಲೆ ಹಾರಿದಳು. ಸುದೀಪ ಹಾರಹೋಗಿ ದೊಪ್ಪನೆ ನೆಲಕ್ಕೆ ಬಿದ್ದ. ಅವಳು ನಕ್ಕು ಕೆಳಗೆ ಬಂದು ಇವನ ಕೈ ಹಿಡಿದು ಮೇಲೆಬ್ಬಿಸಿ, ಇವನ ಕಣ್ಣಲ್ಲಿ ಕಣ್ಣಿಟ್ಟು ನೋಡಿದಳು. ಇಡೀ ವಿಶ್ವವನ್ನೇ ತೊಯ್ಯಿಸುವ ಪ್ರೀತಿಯ ಧಾರೆ ಅವಳ ಕಣ್ಣುಗಳಲ್ಲಿ ಸುದೀಪನಿಗೆ ಕಂಡಿತು. ಇವಳು ಸಾಮಾನ್ಯ ಹೆಣ್ಣಲ್ಲ, ಇವಳಲ್ಲಿ ಮಾನವ ಸ್ನೇಹ ಹಾಗೂ ಆದರ್ಶ ಮೈಗೂಡಿವೆ. ಇವಳ ಕೈಹಿಡಿವವನು ಇವಳಂತಹ ಆದರ್ಶವಾದಿಯೇ ಆಗಬೇಕು ಎಂದುಕೊಂಡ ಸುದೀಪ.
  …………………………………………………………………………
  ಬೆಳಗಿನ ಸೂರ್ಯನ ಕಿರಣಗಳು ಕಿಟಕಿಯ ಒಳಗೆ ತೂರಿ ಸುದೀಪನನ್ನು ಎಚ್ಚರಗೊಳಿಸಿದವು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.