ಗಾನಜೀವನೆ – ಡಿವಿಜಿ

ಕವಿ – ಡಿವಿಜಿ -ಅಂತಃಪುರ ಗೀತೆಗಳು
ಗಾಯಕಿ: ಅಶ್ವಿನಿ
ಸಂಗೀತ – ವಿಶ್ವೇಶ್ ಭಟ್
ಆಲ್ಬಮ್ – ಘಮ ಘಮ

ಹಾಡು ಕೇಳಿ

ಆವ ರಾಗವ ಪಾಡುವೇ – ಓ ಚೆಲುವೇ
ಎನ್ನೊಲವೇ ಬಾಳ್ಗೆಲವೇ – ನೀನಾವ – ರಾಗವ ಪಾಡುವೇ|| ಪ||

ಆವರಾಗವ ಪಾಡಿ – ಆವ ಮಾಟವ ಮಾಡಿ |
ಆವ ಜೀವವ ಕಾಡಿ – ನೀನಿಂತು ನಲಿಯುವೆ || ಅನು ಪಲ್ಲವಿ||

ಕಲಹಂಸೆ ಲಲಿತಸ್ವರೆ – ಓ ಮನೋಹರೆ|
ವಿಲಸಿತ ವಿವರಾಧರೇ – ಓ ಚದುರೇ ||
ಮನಸಿನ ಗುಹೆಯಲಿ – ಮಲಗಿರ್ಪ ದನಿಗಳ |
ಹೊನಲಾಗಿ ಹರಿಸಿ ಜಾ-ಲಿಸುವೆ ನಮ್ಮಸುಗಳ ||

ಮಧುರ ಗೀತಾಯುಧದೆ ನಮ್ಮಯ |
ಚದುರ ಚೆನ್ನಿಗ ಕೇಶವೇಶನ ||
ಹೃದಯರಾಜ್ಯವ ಸೂರೆಗೊಳ್ಳುವ |
ಮದನಬಲ ಪಟ್ಟಾಧಿಕಾರಿಣಿ ||

***

2 thoughts on “ಗಾನಜೀವನೆ – ಡಿವಿಜಿ”

  1. Sn says:

    ಮಧುರ ಗೀತಾಯುಧದಿಂದ ಚದುರ ಚೆನ್ನಿಗ ಕೇಶವೇಶನ ಹೃದಯರಾಜ್ಯವ ಸೂರೆಗೊಳ್ಳುವ ಮದನಬಲ ಪಟ್ಟಾಧಿಕಾರಿಣಿ ! ಏನು ಅಧ್ಬುತ ಕಲ್ಪನೆ ನೋಡಿ ನಮ್ಮ ಡಿ.ವಿ.ಗುಂಡಪ್ಪನವರದು. ಹಾಡು ಕೇಳಿ ಆನಂದವಾಯಿತು.

  2. kaaloo says:

    ಎಷ್ಟೋ ಸಾರಿ ಈ ಹಾಡು ಕೇಳಿದ್ರೂ ಪೂರ್ಣ ಸಾಹಿತ್ಯ ಇಲ್ಲದ ಕೊರತೆ ಇತ್ತು, ಧನ್ಯವಾದ. ನಮ್ಮ ಗುಂಡಪ್ಪನವರ ಬರಹದ ಗತ್ತೇ ಗತ್ತು…ಏನೀ ಮಹಾನಂದವೇ ಹಾಡೂ ಚೆನ್ನಾಗಿದೆ.

Leave a Reply to Sn Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಕೃಷ್ಣನ ಕಂಡಿರಾ? – ಬನ್ನಂಜೆ ಗೋವಿಂದಾಚಾರ್ಯಕೃಷ್ಣನ ಕಂಡಿರಾ? – ಬನ್ನಂಜೆ ಗೋವಿಂದಾಚಾರ್ಯ

ರಚನೆ : ಬನ್ನಂಜೆ ಗೋವಿಂದಾಚಾರ್ಯ ಗಾಯನ : ವಿದ್ಯಾಭೂಷಣ ಹಾಡು ಕೇಳಿ ಉಡುಪಿಯ ಕಂಡೀರಾ? ಉಡುಪಿಯ ಕೃಷ್ಣನ ಕಂಡೀರಾ? ಕೃಷ್ಣನ ಕಂಡೀರಾ? ಕೃಷ್ಣನ ಉಡುಪಿಯ ಕಂಡೀರಾ? ಜಗದೊಡೆಯ ಬಂದ ಉಡುಪಿಯಲಿ ನಿಂದ ಪಡುಗಡಲ ದಾರಿಯಿಂದ ಮಿಗಿಲುಂಟೇ ಚಂದ ಕಣ್ಗಳಾನಂದ ಆನಂದಕಂದನಿಂದ ದ್ವಾರಕೆಯ

ಯುಗಾದಿಯ ಹಾಡುಯುಗಾದಿಯ ಹಾಡು

ಕವಿ – ಜಿ. ಎಸ್. ಶಿವರುದ್ರಪ್ಪ ಗಾಯಕ – ಡಾ. ಶಶಿನಾಥ್ ಗೌಡ ಹಾಡು ಕೇಳಿ ಬಂದ ಚೈತ್ರದ ಹಾದಿ ತೆರೆದಿದೆ ಬಣ್ಣ-ಬೆಡಗಿನ ಮೋಡಿಗೆ ಹೊಸತು ವರ್ಷದ ಹೊಸತು ಹರ್ಷದ ಬೇವು-ಬೆಲ್ಲದ ಬೀಡಿಗೆ. ಕೊಂಬೆ ಕೊಂಬೆಯ ತುಂಬ ಪುಟಿದಿದೆ ಅಂತರಂಗದ ನಂಬಿಕೆ

ನೆರಳು – ಪುತಿನನೆರಳು – ಪುತಿನ

ಕವನ – ನೆರಳು ಕವಿ – ಪು.ತಿ.ನರಸಿಂಹಾಚಾರ್ (ಪುತಿನ) ಮೇಲೊಂದು ಗರುಡ ಹಾರುತಿಹುದು ಕೆಳಗದರ ನೆರಳು ಓಡುತಿಹುದು ಅದಕೆ ಅದರಿಚ್ಚೆ ಹಾದಿ ಇದಕು ಹರಿದತ್ತ ಬೀದಿ ನೆಲನೆಲದಿ ಮನೆಮನೆಯ ಮೇಲೆ ಕೊಳ ಬಾವಿ ಕಂಡು ಕಾಣದೋಲೆ ಗಿಡ ಗುಲ್ಮ ತೆವರು ತಿಟ್ಟು ಎನ್ನದಿನಕೊಂದೆ