ಗಾನಜೀವನೆ – ಡಿವಿಜಿ

ಕವಿ – ಡಿವಿಜಿ -ಅಂತಃಪುರ ಗೀತೆಗಳು
ಗಾಯಕಿ: ಅಶ್ವಿನಿ
ಸಂಗೀತ – ವಿಶ್ವೇಶ್ ಭಟ್
ಆಲ್ಬಮ್ – ಘಮ ಘಮ

ಹಾಡು ಕೇಳಿ

ಆವ ರಾಗವ ಪಾಡುವೇ – ಓ ಚೆಲುವೇ
ಎನ್ನೊಲವೇ ಬಾಳ್ಗೆಲವೇ – ನೀನಾವ – ರಾಗವ ಪಾಡುವೇ|| ಪ||

ಆವರಾಗವ ಪಾಡಿ – ಆವ ಮಾಟವ ಮಾಡಿ |
ಆವ ಜೀವವ ಕಾಡಿ – ನೀನಿಂತು ನಲಿಯುವೆ || ಅನು ಪಲ್ಲವಿ||

ಕಲಹಂಸೆ ಲಲಿತಸ್ವರೆ – ಓ ಮನೋಹರೆ|
ವಿಲಸಿತ ವಿವರಾಧರೇ – ಓ ಚದುರೇ ||
ಮನಸಿನ ಗುಹೆಯಲಿ – ಮಲಗಿರ್ಪ ದನಿಗಳ |
ಹೊನಲಾಗಿ ಹರಿಸಿ ಜಾ-ಲಿಸುವೆ ನಮ್ಮಸುಗಳ ||

ಮಧುರ ಗೀತಾಯುಧದೆ ನಮ್ಮಯ |
ಚದುರ ಚೆನ್ನಿಗ ಕೇಶವೇಶನ ||
ಹೃದಯರಾಜ್ಯವ ಸೂರೆಗೊಳ್ಳುವ |
ಮದನಬಲ ಪಟ್ಟಾಧಿಕಾರಿಣಿ ||

***

2 thoughts on “ಗಾನಜೀವನೆ – ಡಿವಿಜಿ”

  1. Sn says:

    ಮಧುರ ಗೀತಾಯುಧದಿಂದ ಚದುರ ಚೆನ್ನಿಗ ಕೇಶವೇಶನ ಹೃದಯರಾಜ್ಯವ ಸೂರೆಗೊಳ್ಳುವ ಮದನಬಲ ಪಟ್ಟಾಧಿಕಾರಿಣಿ ! ಏನು ಅಧ್ಬುತ ಕಲ್ಪನೆ ನೋಡಿ ನಮ್ಮ ಡಿ.ವಿ.ಗುಂಡಪ್ಪನವರದು. ಹಾಡು ಕೇಳಿ ಆನಂದವಾಯಿತು.

  2. kaaloo says:

    ಎಷ್ಟೋ ಸಾರಿ ಈ ಹಾಡು ಕೇಳಿದ್ರೂ ಪೂರ್ಣ ಸಾಹಿತ್ಯ ಇಲ್ಲದ ಕೊರತೆ ಇತ್ತು, ಧನ್ಯವಾದ. ನಮ್ಮ ಗುಂಡಪ್ಪನವರ ಬರಹದ ಗತ್ತೇ ಗತ್ತು…ಏನೀ ಮಹಾನಂದವೇ ಹಾಡೂ ಚೆನ್ನಾಗಿದೆ.

Leave a Reply to kaaloo Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ನಿಜದ ಸಂತಸದಲ್ಲಿ – ಕೆ.ಎಸ್.ನರಸಿಂಹಸ್ವಾಮಿನಿಜದ ಸಂತಸದಲ್ಲಿ – ಕೆ.ಎಸ್.ನರಸಿಂಹಸ್ವಾಮಿ

ಹಾಡು ಕೇಳಿ ನಿಜದ ಸಂತಸದಲ್ಲಿ ಬಿರಿದ ಮಲ್ಲಿಗೆಯಿಂದ ಬರುವ ಕಂಪಿನ ಹೆಸರು ಪ್ರೇಮವೆಂದು ನೀಲಾಂತರಿಕ್ಷದಲಿ ಹೊಳೆವ ನಕ್ಷತ್ರಗಳ ಕಣ್ಣಸನ್ನೆಯ ಹೆಸರು ಪ್ರೇಮವೆಂದು ಹಸಿರು ಬಯಲಿಗೆ ಇಳಿದ ಬಿಳಿಬಿಳಿಯ ಹಕ್ಕಿಗಳ ದೂರದಿಂಪಿನ ಹೆಸರು ಪ್ರೇಮವೆಂದು ಮಾಲಗಣ್ಣಿನ ಹೆಣ್ಣೆ ನಿನ್ನ ತುಟಿಯಿಕ್ಕೆಲದಿ ಮಂದಹಾಸದ ಹೆಸರು

ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರ

ಕವಿ : ಅಂಬಿಕಾತನಯದತ್ತ ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರ ಮಿಂಚು ಬಳಗ ತೆರೆತೆರೆಗಳಾಗಿ ಅಲೆಯುವುದು ಪುಟ್ಟಪೂರ ಅದು ನಮ್ಮ ಊರು ಇದು ನಿಮ್ಮ ಊರು ತಂತಮ್ಮ ಊರು ಧೀರ ಅದರೊಳಗೆ ನಾವು ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರ

ಕೃಷ್ಣನ ಕಂಡಿರಾ? – ಬನ್ನಂಜೆ ಗೋವಿಂದಾಚಾರ್ಯಕೃಷ್ಣನ ಕಂಡಿರಾ? – ಬನ್ನಂಜೆ ಗೋವಿಂದಾಚಾರ್ಯ

ರಚನೆ : ಬನ್ನಂಜೆ ಗೋವಿಂದಾಚಾರ್ಯ ಗಾಯನ : ವಿದ್ಯಾಭೂಷಣ ಹಾಡು ಕೇಳಿ ಉಡುಪಿಯ ಕಂಡೀರಾ? ಉಡುಪಿಯ ಕೃಷ್ಣನ ಕಂಡೀರಾ? ಕೃಷ್ಣನ ಕಂಡೀರಾ? ಕೃಷ್ಣನ ಉಡುಪಿಯ ಕಂಡೀರಾ? ಜಗದೊಡೆಯ ಬಂದ ಉಡುಪಿಯಲಿ ನಿಂದ ಪಡುಗಡಲ ದಾರಿಯಿಂದ ಮಿಗಿಲುಂಟೇ ಚಂದ ಕಣ್ಗಳಾನಂದ ಆನಂದಕಂದನಿಂದ ದ್ವಾರಕೆಯ