ಎಲ್ಲಿರುವುದು ನಾ ಸೇರುವ ಊರು ?

ಕವಿ – ಕುವೆಂಪು

ಎಲ್ಲಿರುವುದು ನಾ ಸೇರುವ ಊರು
ಬಲ್ಲಿದರರಿಯದ ಯಾರೂ ಕಾಣದ
ಎಲ್ಲಿಯೂ ಇರದ ಊರು

ಭವಭಯವಿಲ್ಲದ ಊರಂತೆ
ದಿವಿಜರು ಬಯಸುವ ಊರಂತೆ
ತವರೂರಂತೆ ಬಹುದೂರಂತೆ
ಕವಿಗಳು ಕಂಡಿಹ ಊರಂತೆ

ಜ್ಞಾನಿಗಳಿರುವುದೇ ಆ ಊರು
ಜ್ಞಾನದ ಮೇರೆಯೇ ಆ ಊರು
ನಾನಿಹ ಊರು ಸಮೀಪದ ಊರು
ಮೌನತೆಯಾಳುವ ತವರೂರು

ಎಲ್ಲಿರುವುದು ನಾ ಸೇರುವ ಊರು
ಬಲ್ಲಿದರರಿತ ಎಲ್ಲರೂ ಕಾಣುವ
ಎಲ್ಲಿಯೂ ಇರದ ಊರು

*******************

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ತೂಗು ಮಂಚ – ಎಚ್.ಎಸ್.ವೆಂಕಟೇಶ್ ಮೂರ್ತಿತೂಗು ಮಂಚ – ಎಚ್.ಎಸ್.ವೆಂಕಟೇಶ್ ಮೂರ್ತಿ

ಕವಿ – ಎಚ್.ಎಸ್.ವೆಂಕಟೇಶ್ ಮೂರ್ತಿ ಸಂಗೀತ – ಸಿ. ಅಶ್ವಥ್ ಗಾಯಕಿ – ರತ್ನಮಾಲಾ ಪ್ರಕಾಶ್ ಆಲ್ಬಂ – “ತೂಗು ಮಂಚ”  ಹಾಡು ಕೇಳಿ  ತೂಗು ಮಂಚದಲ್ಲಿ ಕೂತು ಮೇಘಶಾಮ ರಾಧೆಗಾತು ಆಡುತಿಹನು ಏನೋ ಮಾತು ರಾಧೆ ನಾಚುತಿದ್ದಳು ಸೆರಗ ಬೆರಳಿನಲ್ಲಿ

ಯಾವ ಜನ್ಮದ ಮೈತ್ರಿ – Yava Janmada maitri – kuvempuಯಾವ ಜನ್ಮದ ಮೈತ್ರಿ – Yava Janmada maitri – kuvempu

ರಚನೆ – ಕುವೆಂಪುಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದುನಮ್ಮಿಬ್ಬರನು ಮತ್ತೆ ಬಂಧಿಸಿಹುದೋ ಕಾಣೆ ! ಎಲ್ಲಿದ್ದರೇನಂತೆ ನಿನ್ನನೊಲಿಯದೆ ಮಾಣೆ,ಗುರುದೇವನಾಣೆ, ಓ ನನ್ನ ನೆಚ್ಚಿನ ಬಂಧು!ವಿಶ್ವ ಜೀವನವೊಂದು ಪಾರವಿಲ್ಲದ ಸಿಂಧು!ಮೇಲೆ ತೆರೆನೊರೆಯೆದ್ದು ಭೋರ್ಗರೆಯುತಿರೆ ರೇಗಿ,ಅದರಂತರಾಳದಲಿ ಗುಪ್ತಗಾಮಿನಿಯಾಗಿ; ಹೃದಯಗಳು ನಲಿಯುತಿವೆ ಪ್ರೇಮ ತೀರ್ಥದಿ

ಕುವೆಂಪು – ಆನಂದಮಯಕುವೆಂಪು – ಆನಂದಮಯ

ಸಾಹಿತ್ಯ : ಕುವೆಂಪು ಆಲ್ಬಂ : ಭಾವಬಿಂದು ಸಂಗೀತ : ಸಿ.ಅಶ್ವಥ್ ಗಾಯಕ : ಶಿವಮೊಗ್ಗ ಸುಬ್ಬಣ್ಣ        ಹಾಡು ಕೇಳಿ – ಆನಂದಮಯ ಈ ಜಗಹೃದಯ ಏತಕೆ ಭಯ ಮಾಣೊ ಸೂರ್ಯೋದಯ ಚಂದ್ರೋದಯ ದೇವರ ದಯ ಕಾಣೊ ಬಿಸಿಲಿದು ಬರೀ ಬಿಸಿಲಲ್ಲವೊ