ಕಥೆಯ ಕೊನೆಯ ಭಾಗ!

ಐದು ವರ್ಷಗಳ ಬಳಿಕ…………………….
ಓಹುರಾ ನ್ಯೂಝೀಲ್ಯಾಂಡಿನಲ್ಲಿರುವ ಒಂದು ಸಣ್ಣ ಊರು. ಅಲ್ಲಿಯೇ ಇರುವ ‘ಸಮೀಉಲ್ಲಾ ಕುರಿ ಫಾರ್ಮ್’ನಲ್ಲಿ ಕುಳಿತುಕೊಂಡು ಭರತ ತನ್ನ ಹತ್ತು ಸಾವಿರ ಕುರಿಗಳನ್ನು ಕಾಯುತ್ತಿದ್ದ. ಅವನ ಸೆಲ್ ಫೋನ್ ರಿಂಗಣಿಸಿತು. ಅತ್ತಲಿಂದ ಕವಿತಾಳ ಧ್ವನಿ ಕೇಳಿಸಿತು.
“ಭರತ್, ಬೇಗನೆ ಮನೆಗೆ ಹೋಗಿ ಸ್ಪೆಶಲ್ ಹಯಗ್ರೀವ ಹಾಗು ಬೋಂಡಾ ಸೂಪ್ ಮಾಡಿಡು. ರಾಜೀವ,ಧಾರಿಣಿ,ಪ್ರವಲ್ಲಿಕಾ ಹಾಗು ಸುಶಾಂತ ಅಮೇರಿಕಾದಿಂದ ಐದು ಗಂಟೆಗೆಲ್ಲಾ ಬಂದು ಬಿಡುತ್ತಾರೆ.”
“ಕವಿತಾ, ನೀನು ಸ್ಕೂಲಿನಿಂದ ಯಾವಾಗ ಬರುತ್ತಿ?”,ಭರತ ಕೇಳಿದ.
“ನಾನು New Plymouth ಏರ್ ಪೋರ್ಟಿಗೆ ಹೋಗಿ ಅವರನ್ನು ಕಾರಿನಲ್ಲಿ ಕರೆದುಕೊಂಡೇ ಬರ್ತೀನಿ. ನೀನು ಬರುವಾಗ Child Care Centreಗೆ ಹೋಗಿ ಕೇಶವನನ್ನೂ ಕರೆದುಕೊಂಡೇ ಬಾ”, ಕವಿತಾ ಹೇಳಿದಳು.
…………………………………………….
ಕವಿತಾಳ ಜೊತೆಗೆ ಅವಳ ಮನೆ “ಸರೋಜಾ ಸದನ” ತಲುಪಿದ ತಕ್ಷಣ, ಪ್ರವಲ್ಲಿಕಾ ಭರತನನ್ನು ಪ್ರೀತಿಯಿಂದ ಆಲಂಗಿಸಿ, “ಅಣ್ಣಾ, ನಿನಗೆ ಒಂದು ಉಡುಗೊರೆ; ಕಣ್ಣು ಮುಚ್ಚಿ, ಕೈ ಚಾಚು!” ಎಂದಳು.
ಭರತನ ಚಾಚಿದ ಕೈಗೆ, ಪ್ರವಲ್ಲಿಕಾ ಚಿನ್ನದ ಎಳೆಗಳ ಒಂದು ರಾಖೀ ಕಟ್ಟಿ,
“ಈಗ ಕಣ್ಣು ತೆರೆ” ಎಂದಳು.
“ಪ್ರವಲ್ಲಿಕಾ ಥ್ಯಾಂಕ್ಸ್; ಆದರೆ ನನಗೆ ಮುಂದಿನ ರಾಖೀ ಹಬ್ಬಕ್ಕೆ ಚಿನ್ನದ ರಾಖೀ ಬೇಡ;ಚಿನ್ನದಂತಹ ಸೊಸೆ ಬೇಕು…..ಗೊತ್ತಾಯ್ತೇನೋ, ಸೋಮಾರಿ ಸುಶಾಂತ್!”ಎಂದು ಭರತ ಸುಶಾಂತನನ್ನು ಗೇಲಿ ಮಾಡಿದ.
ಸುಶಾಂತ ನಗುತ್ತ,”ನಾನೂ ಅದನ್ನೇ ಹೇಳ್ತಾ ಇದ್ದೇನೆ. ಮೇಡಮ್ ನನ್ನ ಮಾತನ್ನೇ ಕೇಳೋದಿಲ್ಲ” ಎಂದು ಪ್ರವಲ್ಲಿಕಾಳನ್ನು ಛೇಡಿಸಿದ.
“ಸುಶಾಂತ, ನಿನ್ನ ಜವಾಬುದಾರಿ ಹಾರಿಸಿಕೊಳ್ಳಬೇಡ”,ಎಂದು ನಕ್ಕ ಪ್ರವಲ್ಲಿಕಾ, “OK, I promise to present your daughter-in-law for the next ಹಬ್ಬಾ!”,ಎಂದು ಕಣ್ಣರಳಿಸಿ ಕವಿತಾಳಿಗೆ ಹೇಳಿದಳು.
‘ಸರೋಜಾ ಸದನ’ ಹರುಷದ ನಗುವಿನಿಂದ ತುಂಬಿತು.

11 thoughts on “ಕಥೆಯ ಕೊನೆಯ ಭಾಗ!”

 1. sritri says:

  ಸುನಾಥರೇ, ಕಥೆಗೊಂದು ಮುಕ್ತಾಯ ಸೂಚಿಸಿದ್ದಕ್ಕೆ ಅಭಿನಂದನೆಗಳು.

  ಕಥೆಯ ಕೊನೆಗೆ, ಸುಶಾಂತ ಎಂಬ ಹೊಸ ಪಾತ್ರವನ್ನು ಬೇರೆ ತಂದಿದ್ದೀರಿ. ಅಥವಾ.. ಶಶಾಂಕ ಎನ್ನುವ ಬದಲು ಸುಶಾಂತ ಎಂದಿದ್ದೀರಿ?
  ಆದರೆ ’ಭರತ ತನ್ನ ಹತ್ತು ಸಾವಿರ ಕುರಿಗಳನ್ನು ಕಾಯುತ್ತಿದ್ದ’ ಎಂದು ಬರೆದಿದ್ದಕ್ಕೆ ಭರತ ನಿಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹೂಡದಿದ್ದರೆ ಸಾಕು.

  ಕಥೆ ಕಟ್ಟುವ ಆಟದಲ್ಲಿ ಮೊದಲಿನಿಂದ ಕೊನೆವರೆಗೆ ಉತ್ಸಾಹದಿಂದ ಭಾಗವಹಿಸಿದ ನಿಮಗೂ ಮತ್ತು ಎಲ್ಲರಿಗೂ ಧನ್ಯವಾದಗಳು. ಕಥೆ ಬರೆಯುತ್ತೇವೆಂದು ಹೇಳಿ, ಬರೆಯದೆ ವಚನ ಭ್ರಷ್ಟರಾದವರಿಗೂ ………..:)

 2. ಜಗಲಿ ಭಾಗವತ says:

  “ಕಥೆ ಬರೆಯುತ್ತೇವೆಂದು ಹೇಳಿ, ವಚನ ಭ್ರಷ್ಟರಾದವರಿಗೂ…..”

  ಇದು ಮಾಲಾ ಮತ್ತು ಸುನಾಥರಿಗೆ ಹೇಳಿದ್ದಾ? ಅವ್ರು ತುಂಬಾ ಕಥೆ ಬರ್ದಿದ್ದಾರಲ್ಲ ???ಃ-))

 3. ಭಾಗ್ವತ್ರೆ, ನೀವು ಮಾತಿನ ಸಾಲು ಉದ್ಧರಿಸುವಾಗ ಒಂದು ಪದ ಬಿಟ್ಟಿದ್ದೇಕೆ? ಸಂದರ್ಭಕ್ಕೆ ಸರಿಯಾಗಿ ವಿವರಿಸಬೇಕೇ ಹೊರತು ನಿಮಗೆ ಬೇಕಾದಂತೆ ಅಲ್ಲ! ನಿಮ್ಮ ಉತ್ರ ತಪ್ಪು!! ಮೇಡಮ್ ನಿಮಗೆ ಮಾರ್ಕ್ಸ್ ಕೊಡೋದಿಲ್ಲಂತೆ.

 4. jagali bhaagavata says:

  ತುಳಸಿಯಮ್ಮ ಎಲ್ಲಿ? ಇನ್ನೂ ಖೋಖೋ ಆಡ್ತಿದಾರಾ ಹೇಗೆ?

  ಸುನಾಥರೇ, ನಿಮಗೇನಾದರೂ ಮಾಹಿತಿ ಇದೆಯೇ?

 5. sritri says:

  ಭಾಗ್ವತ್ರೇ,ಎರಡು ದಿನ ಟೈಮ್ ಕೊಡಿ. ಬರ್ತೀನಿ….. 🙂

 6. sunaath says:

  ಹತ್ತು ದಿನ ನೆಟ್-ಸನ್ಯಾಸದ ಮೇಲೆ ಇದ್ದೆ. ಹೀಗಾಗಿ ನನಗೆ ಯಾವುದರ ಮಾಹಿತಿಯೂ ಇಲ್ಲ. ಇವತ್ತು ನಿಮ್ಮಗಳ ದರ್ಶನವಾಗಿ ಖುಷಿಯಾಗಿದೆ. ಇನ್ನು ಶಶಾಂಕ ಅಥವಾ ಸುಶಾಂತರ ಬಗೆಗೆ ಹೇಳಬೇಕೆಂದರೆಃ- ನನಗೆ ಪಾತ್ರಗಳ ಬಗೆಗೆ ಇಷ್ಟು confuse ಆಗಹತ್ತಿದೆ ಅಂದರೆ ….ಏನೂ ಗೊತ್ತಾಗ್ತಾ ಇಲ್ಲ.

 7. ತುಳಸಿಯಮ್ಮ,

  ಕೊಟ್ಟ ಗಡುವು ಮುಗಿಯಿತು. ಈ ಕೂಡಲೇ ಬಂದು ಕಟಕಟೆಯಲ್ಲಿ ನಿಲ್ಲಬೇಕಾಗಿ ಕಳಕಳಿಯ ವಿನಂತಿ.

  ಬಹುಜನರ ಅಪೇಕ್ಷೆಯ ಮೇರೆಗೆ,
  ಭಾಗವತರು

 8. sritri says:

  ಭಾಗವತರೇ, ಸಮಯಕ್ಕೆ ಸರಿಯಾಗಿ ಬಂದೂ ಕಟಕಟೆಯಲ್ಲಿ ನಿಲ್ಲಬೇಕೆಂದರೆ ಬರಬೇಕಾದರೂ ಯಾಕೆ? 🙂

 9. jagali bhaagavata says:

  ಸುನಾಥರೇ,

  ನೆಟ್-ಸನ್ಯಾಸ ಯಾಕೆ? ಅಂದಹಾಗೆ, ನಿಮ್ಮ ನೆಟ್-ಸನ್ಯಾಸಾಶ್ರಮಕ್ಕೆ ಭಂಗ ತರಲು ರಂಭೆ-ಊರ್ವಶಿ-ಮೇನಕೆಯರೇನಾದರೂ ಪ್ರತ್ಯಕ್ಷರಾದರೆ, ಅವರಿಗೆ ನನ್ನ ವಿಳಾಸ ಕೊಡಿ ಃ-))

  ತುಳಸಿಯಮ್ಮ,
  ನೀವು ಸರಿಯಾದ ಸಮಯಕ್ಕೆ ಬಂದಿಲ್ಲದಿರುವುದರಿಂದ ಆ ಶಿಕ್ಷೆ..

 10. sritri says:

  ಸುನಾಥರೇ, ಏನು ನಿಮ್ಮ ಸನ್ಯಾಸದ ಲೀಲೆ? 🙂

 11. sunaath says:

  (೧) ರಂಭೆ, ಮೇನಕೆ ಇತ್ಯಾದಿ ಅಪ್ಸರೆಯರ ವಿಳಾಸಃ
  *C/O ಜಗಲಿ ಭಾಗವತ,
  ಭೂಮಂಡಲ.

  (೨) ಕಟಕಟೆಯಲ್ಲಿ ನಿಲ್ಲುವದೇಕೆಃ
  *ಕಿಟಿಕಿಟಿ ತಪ್ಪಿಸಿಕೊಳ್ಳಲು ಕಟಕಟೆಯಲ್ಲಿ ನಿಲ್ಲುವದೆ ಸರಿಯಾದ ಮಾರ್ಗ.

  (೩) ಸನ್ಯಾಸ ಲೀಲೆಃ
  * ಸಂಸಾರದ net ನಲ್ಲಿ ಸಿಲುಕಿದಾಗ ಇತರ netನಿಂದ ತಾತ್ಪೂರ್ತಿಕ ಸನ್ಯಾಸಗ್ರಹಣ ಮಾಡಲೇಬೇಕಾಗುವದಲ್ಲವೆ?

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ನೆನಪಾಗಿ ಕಾಡುವ ಸುನಯನಾ – 3ನೆನಪಾಗಿ ಕಾಡುವ ಸುನಯನಾ – 3

ತಪ್ಪಿಸಿಕೊಳ್ಳಲು ಪ್ರಯತ್ನಿಸಿದಷ್ಟೂ ಸುನಯನ ಮತ್ತೆ ಮತ್ತೆ ಕಾಡ ಹತ್ತಿದಳು…. *************************** “ಬನ್ನಿ ಒಳಗೆ” ….ಮನೆಯ ಮುಖ್ಯದ್ವಾರದ ಎರಡೂ ಬದಿಗೆ ಕೈ ಆನಿಸಿ ನಿಂತ ಸುನಯನ. ಹೊಳೆಯುವ ಕಣ್ಣು, ದುಂಡುಮುಖ, ಅರೆಬಿರಿದ ತುಟಿ, ತಿದ್ದಿದ ಹುಬ್ಬು, ಹಣೆಯನ್ನು ಸ್ವಲ್ಪವೇ ಸ್ವಲ್ಪ ಆವರಿಸಿದ್ದ ಮೋಹಕ

ಭಾಗ – 9ಭಾಗ – 9

ಜಗತ್ತನ ಎಲ್ಲಾ ಪ್ರಮುಖ ನಗರಗಳ ಲೋಕಲ್ ನ್ಯೂಸ್ ಪೇಪರ್ ಗಳನ್ನು ವಾರಾಂತ್ಯದಲ್ಲಿ ಗಮನಿಸುವುದು ಜೋಯಿಯ ಅಭ್ಯಾಸ.ಪ್ರಪಂಚವೇ ಹಳ್ಳಿಯಂತಾಗಿರುವ ಈ ಕಾಲದಲ್ಲೂ ಲೋಕಲ್ ಗೌರ್ನಮೆಂಟ್ ಗಳ ಸಣ್ಣಸಣ್ಣ ನಿರ್ಧಾರಗಳೂ ಕೆಲವೊಮ್ಮೆ ಗ್ಲೋಬಲ್ ಮಟ್ಟದಲ್ಲಿ ಬಿಸಿನಿಸ್ಸನ್ನು ಬದಲಾಯಿಸಲು ಶಕ್ತವೆಂದು ಜೋಯಿ ನಂಬುತ್ತಾನೆ.ಅವನ ಈ ಅಭ್ವಾಸ

ಆಕಾಶ ದೀಪವು ನೀನು – 4ಆಕಾಶ ದೀಪವು ನೀನು – 4

ಸೃಷ್ಟಿ! – ನಿಜವಾಗಿ ಆ ಮಗು ಜಗತ್ತಿನ ಒಂದು ಅದ್ಭುತ ಸೃಷ್ಟಿಯೇ! ಅವಳ ಚುರುಕುತನ, ಮುದ್ದು ಮಾತಿಗೆ ಸುದೀಪ ಬೆರಗಾಗಿದ್ದ. ಸೃಷ್ಟಿಯ ಬುದ್ಧಿ ಶಕ್ತಿ ಅಸಾಧಾರಣವಾಗಿರುವುದನ್ನು ಸುದೀಪ ಗಮನಿಸಿದ. ಅವಳ ಮಾತಿನಲ್ಲಿ ವಯಸ್ಸಿಗೆ ಮೀರಿದ ಪ್ರೌಢತೆ ಇತ್ತು. ಬಿಳುಪಾದ ಗುಂಡು ಮುಖದಲ್ಲಿ