ಇಷ್ಟು ವರ್ಷ ಕನ್ನಡ ಬಿಟ್ಟು ಹಿಂದಿಯ ಜೊತೆಗೆ ದಕ್ಷಿಣದ ಉಳಿದೆಲ್ಲಾ ಭಾಷೆಗಳ ಹಾಡುಗಳಿಗೂ ಆತಿಥ್ಯ ನೀಡುತ್ತಿದ್ದ ರಾಗ ಸಂಗೀತ ತಾಣದಲ್ಲಿ ಕೊನೆಗೂ ಕನ್ನಡಕ್ಕೆ ಜಾಗ ಸಿಕ್ಕಿದೆ. ಇದು ಯಾವಾಗಿನಿಂದ ಇದೆಯೋ ಗೊತ್ತಿಲ್ಲ. ನಾನು ನೋಡಿದ್ದು ಇಂದೇ. ತುಂಬಾ ಸಂತೋಷವಾಗುತ್ತಿದೆ. ಕನ್ನಡ ಹಾಡುಗಳಿಗೆ ಉದ್ಭವ, ಕನ್ನಡ ಆಡಿಯೋ, ಮ್ಯುಸಿಕ್ ಇಂಡಿಯಾ ಆಶ್ರಯಿಸುತ್ತಿದ್ದವರಿಗೆ ಈಗ ಕನ್ನಡ ಕೇಳಿ ನಲಿಯಲು ಹೊಸದೊಂದು ತಾಣ ದೊರಕಿದಂತಾಯಿತು.
ಅಂತರ್ಜಾಲದಲ್ಲಿ ಕನ್ನಡ ಪ್ರಕಾಶಿಸುತ್ತಿದೆ! 🙂
ವೋವ್! ನಂಗೂ ಗೊತ್ತಿರಲೇ ಇಲ್ಲ. ಥ್ಯಾಂಕ್ಸ್..
ಇದು ನನಗೂ ಗೊತ್ತಿರಲಿಲ್ಲ, ಸಿನೆಮಾ ಹಾಡು ಕೇಳೋದೇ ಕಡಿಮೆ ಆಗಿದೆ.
ಅದಿರಲಿ, ತುಳಸೀವನ ಇತ್ತೀಚೆಗೆ ಸಪ್ಪಗಾಗಿದೆ. ಯಾಕೆ? ಹೊಸದೇನಾದರೂ ಬರಲಿ, ಪ್ಲೀಸ್!
ಮ್ಯೂಸಿಕ್ ಇಂಡಿಯಾ, ಕನ್ನಡ ಆಡಿಯೊದಷ್ಟು ದೊಡ್ದ ಸಂಗ್ರಹ ರಾಗದಲ್ಲಿಲ್ಲ, ಇನ್ನಷ್ಟೇ ಬೆಳೆಯಬೇಕು. 7-8 ವರ್ಷಗಳಿಂದ ಅಲ್ಲಿ ಕನ್ನಡ ಮಾತ್ರ ಇಲ್ಲದ್ದನ್ನು ಗಮನಿಸಿ ನೊಂದುಕೊಳ್ಳುತ್ತಿದ್ದೆ. ಈಗ ಆ ಕೊರಗು ನಿವಾರಣೆಯಾಯಿತು. 🙂