ಬೆಳ್ಳಿ ಮೋಡಗಳು (1992)
ಸಾಹಿತ್ಯ : ದೊಡ್ಡರಂಗೇಗೌಡ
ಸಂಗೀತ: ಉಪೇಂದ್ರಕುಮಾರ್
ಗಾಯಕರು: ಮನು, ಎಸ್.ಜಾನಕಿ
ಹೃದಯವೆ ನಿನ್ನ ಹೆಸರಿಗೆ ಬರೆದೆ ನನ್ನೆ ನಾ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ
ಬೆಳ್ಳಿ ಬೆಳ್ಳಿ ಬೆಳ್ಳಿ ಮೋಡ ಚಂದ
ಆಕಾಶ ನಾನಾದೆ ನಾ
ಹೃದಯವೆ ನಿನ್ನ ಹೆಸರಿಗೆ ಬರೆದೆ ನನ್ನೆ ನಾ
ಮಾತಿನಲ್ಲೆ ತಂದೆ ಮಳೆ ಬಿಲ್ಲ
ನಾಚಿ ನಿಂತ ಹೂವು ಬಳ್ಳಿ ಎಲ್ಲ
ಬಾನಲ್ಲಿ ಒಂದಾದೆ ನಾ
ಕಣ್ಣಿನಲಿ ಆಸೆ ಅಂಕುರಿಸಿ
ಪ್ರಥಮಗಳು ಪಲ್ಲವಿಸಿ
ಉದಯಗಳ ತೀರ ಸಂಚರಿಸಿ
ಹೃದಯಗಳು ಝೇಂಕರಿಸಿ
ಪ್ರಣಯದ ಹಾಡಾದೆ ನಾ
ಅರಳಿದ ಹೂವಾದೆ ನಾ
ಋತುವಲಿ ಒಂದಾದೆ ನಾ
ಮಳೆ ಹನಿಯ ಮೋಡ ನಾನಾಗಿ
ಹನಿ ಇಡುವೆ ನೆನಪಾಗಿ
ಉದಯಗಳ ಊರೇ ನಾನಾಗಿ
ಬೆಳಕಿಡುವೆ ನಿನಗಾಗಿ
ಪ್ರಣಯದ ಆರಾಧನ
ಋತುವಿನ ಆಲಾಪನ
ಮಿಥುನದ ಆಲಿಂಗನ
*************
ಬೇಂದ್ರೆಯಜ್ಜನ ಕವಿತೆ ಹಾಕ್ತೇನೆ ಅಂತ ಹೇಳಿ ಏಷ್ಟು ದಿನ ಆಯ್ತು? ಹೋಗ್ಲಿ ಕಾರಿ ಹೆಗ್ಗಡೆ ಮಗಳನ್ನಾದ್ರೂ ಕರ್ಕೊಂಡು ಬಂದ್ರಾ? ಅದೂ ಇಲ್ಲ. ಬರೀ ಹಂಬಕ.
ನಮಸ್ಕಾರ ,
ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!
ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.
ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು
ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.
ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.
ಅಲ್ಲಿ ಸಿಗೋಣ,
ಇಂತಿ,
-ಶ್ರೀಧರ
ಶ್ರೀಧರ್,
‘ಪ್ರಣತಿ’ ಏರ್ಪಡಿಸುತ್ತಿರುವ ಕಾರ್ಯಕ್ರಮದ ಬಗ್ಗೆ ತಿಳಿದಿತ್ತು. ಆಹ್ವಾನಕ್ಕೆ ಧನ್ಯವಾದಗಳು. ಶುಭ ಹಾರೈಕೆಗಳು.
ಪ್ರಪಂಚಾದ್ಯಂತ ಹರಡಿರುವ ಬ್ಲಾಗಿಗರಿಗೆ, ಅಂದಿನ ಸಭೆಯಲ್ಲಿ ನಡೆದ ಕಾರ್ಯಕ್ರಮಗಳನ್ನು ಮುದ್ರಿಸಿ, ವಿಡಿಯೋ ಮೂಲಕ ( google, youtube) ತಲುಪಿಸಲು ಸಾಧ್ಯವಿದೆಯೇ ನೋಡಿ. ಅಷ್ಟೊಂದು ಜನ ನೆಟ್ಟಿಗರು, ನೆಟ್ಗುರುಗಳು ಒಂದೆಡೆಗೆ ಸೇರುತ್ತಿರುವಾಗ ಅದೇನು ಅಂತಹ ಕಷ್ಟದ ಕೆಲಸವಲ್ಲವೆನ್ನಿಸುತ್ತದೆ. 🙂
ತುಳಸಿಯಮ್ಮ..
ಈ ಹಾಡು ನನಗೂ ತುಂಬಾ ಇಷ್ಟ. ರಾಗವೂ ಸುಂದರವಾಗಿದೆ. ನೆನಪಿಸಿದ್ದಕ್ಕೆ ಧನ್ಯವಾದಗಳು.