ಕವಿತೆ :ಅನಂತ ಪ್ರಣಯ
ಕವಿ : ಅಂಬಿಕಾತನಯದತ್ತ,
ಉತ್ತರಧ್ರುವದಿಂ ದಕ್ಷಿಣ ಧ್ರುವಕೂ
ಚುಂಬಕ ಗಾಳಿಯು ಬೀಸುತಿದೆ.
ಸೂರ್ಯನ ಬಿಂಬಕೆ ಚಂದ್ರನ ಬಿಂಬವು
ರಂಬಿಸಿ ನಗೆಯಲಿ ಮೀಸುತಿದೆ.
ಭೂರಂಗಕೆ ಅಭಿಸಾರಕೆ ಕರೆಯುತ
ತಿಂಗಳು ತಿಂಗಳು ನವೆಯುತಿದೆ
ತುಂಬುತ ತುಳುಕುತ ತೀರುತ ತನ್ನೊಳು
ತಾನೇ ಸವಿಯನು ಸವಿಯುತಿದೆ.
ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ
ಕೋಟಿ ಕೋಟಿ ಸಲ ಹೊಸಯಿಸಿತು.
ಮಿತ್ರನ ಮೈತ್ರಿಯ ಒಸಗೆ ಮಸಗದಿದೆ
ಮರುಕದ ಧಾರೆಯ ಮಸೆಯಿಸಿತು.
ಅಕ್ಷಿನಿಮೀಲನ ಮಾಡದೆ ನಕ್ಷ-
ತ್ರದ ಗಣ ಗಗನದಿ ಹಾರದಿದೆ.
ಬಿದಿಗೆಯ ಬಿಂಬಾಧರದಲಿ ಇಂದಿಗು
ಮಿಲನದ ಚಿಹ್ನವು ತೋರದಿದೆ.
(ಬೇಂದ್ರೆಯವರ ಕವನಸಂಕಲನ ‘ನಾದಲೀಲೆ’ಯಲ್ಲಿ ಪ್ರಕಟವಾದ ಕವನ)
ಈ ಕವಿತೆಯ ಮೇಲೆ ನಡೆದ ಒಂದು ಸ್ವಾರಸ್ಯಕರವಾದ ಚರ್ಚೆ ಇಲ್ಲಿದೆ:
http://www.sahityanjali.org/?q=node/24
ಓದಿ ನೋಡಿ…
ಜ್ಯೋತಿಯವರೆ,
ಉತ್ತಮವಾದ ಚರ್ಚೆಗೆ ಲಿಂಕ್ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು.