ನಮಃ ಶ್ರೀಪಾದರಾಜಾಯ ನಮಸ್ತೇ ವ್ಯಾಸಯೋಗಿನೇ|
ನಮಃ ಪುರಂದರಾರ್ಯಾಯ ವಿಜಯಾರ್ಯಾಯತೇ ನಮಃ ||

ನಮಿಪೆ ಶ್ರೀಪಾದರಾಯರಿಗೆ ನಮನ ವ್ಯಾಸ ಯೋಗಿಗೆ
ಶ್ರೀ ಪುರಂದರ ಗುರುವರಗೆ ಬಳಿಕ ವಿಜಯದಾಸರಿಗೆ ( ಕನ್ನಡಕ್ಕೆ : ನೀಲಾಂಜನ )

ದಾಸಸಾಹಿತ್ಯದಲ್ಲಿ ಪುರಂದರದಾಸರು ಅತ್ಯಂತ ಜನಪ್ರಿಯರು. ೧೩ನೆಯ ಶತಮಾನದಲ್ಲಿ ನರಹರಿತೀರ್ಥರಿಂದ ಪ್ರಾರಂಭವಾದ ದಾಸ ಸಾಹಿತ್ಯ ಪುರಂದರದಾಸರ ಕಾಲದಲ್ಲಿ ವಿಶಾಲವಾಗಿ ಬೆಳೆಯಿತು. ಇವರು ನಾರದರ ಅವತಾರವೆಂಬ ನಂಬಿಕೆ ಇದೆ. ಪುರಂದರದಾಸರ ಜೀವನ ಚರಿತ್ರೆಯ ಬಗೆಗೆ ಖಚಿತ ಮಾಹಿತಿಗಳಿಲ್ಲ. ಅವರ ಬದುಕಿನ ಕೆಲವು ವಿವರಗಳು ಪುರಂದರದಾಸರಿಂದ ರಚನೆಯಾದ ಕೀರ್ತನೆಗಳಿಂದಲೇ ದೊರಕಿದ್ದರೆ , ಉಳಿದವು ಜನಜನಿತ ವಾರ್ತೆಗಳು, ನಂತರದ ಹರಿದಾಸರಾರೋ ಬರೆದ ದಾಖಲೆಗಳಿಂದ ಮೂಡಿರುವ ಕಲ್ಪನಾ ಚಿತ್ರಗಳು. ಉದಾಹರಣೆಗೆ ವಿಜಯದಾಸರು ರಚಿಸಿರುವ ’ಗುರು ಪುರಂದರದಾಸರೇ, ನಿಮ್ಮ ಚರಣಕಮಲವ ನಂಬಿದೆ, ಗರುವರಹಿತನ ಮಾಡಿ ಎನ್ನನು ಪೊರೆವ ಭಾರವು ನಿಮ್ಮದೆ” ಕೀರ್ತನೆಯಲ್ಲಿ ಬರುವ “ಪುರಂದರಾಲಯ ಘಟ್ಟದೊಳು ನೀ|ನಿರುತ ಧನವನು ಗಳಿಸಲು| ಪರಮಪುರುಷನು ವಿಪ್ರನಂದದಿ ಕರವ ನೀಡಿ ಯಾಚಿಸೆ|ಪರಮ ನಿರ್ಗುಣ ಮನವನರಿತು ಸರುವ ಸೂರೆಯಗೊಳಿಸಿದೆ|ಅರಿತು ಮನದಲಿ ಜರಿದು ಭವಗಳ ತರುಣಿ ಸಹ ಹೊರಹೊರಟನೆ| – ಈ ಸಾಲು ಪುರಂದರದಾಸರ ಬಗೆಗೆ ಈಗ ಲಭ್ಯವಿರುವ ಕಥೆಯ ಸಾರಾಂಶದಂತಿದೆ.

ಪುರಂದರದಾಸರ ಜನ್ಮ ಸ್ಥಳದ ಕುರಿತಾದ ಮತ್ತಷ್ಟು ಮಾಹಿತಿ ಇಲ್ಲಿದೆ.

“ರಕ್ತಾಕ್ಷಿ ವತ್ಸರದ ಪುಷ್ಯಾಂತ ಶನಿವಾರ ಮುಕ್ತಿಯನೈದಿದರು ಕೇಳಿ ಬುಧಜನ” – ಎಂಬ ಮಧ್ವಪತಿದಾಸರ (ಪುರಂದರದಾಸರ ಮಗ) ಹೇಳಿಕೆಯ ಆಧಾರದಿಂದ ಕ್ರಿ.ಶ. ೧೫೬೪ರಲ್ಲಿ ಪುರಂದರದಾಸರು ಹರಿಪಾದವನ್ನು ಸೇರಿದರೆಂದು ತಿಳಿಯಲಾಗಿದೆ. ಇಂದು – ಫುಷ್ಯ ಬಹುಳ ಅಮಾವಾಸ್ಯೆ – ಪುರಂದರದಾಸರ ಪುಣ್ಯ ದಿನ. “ದಾಸರೆಂದರೆ ಪುರಂದರ ದಾಸರಯ್ಯಾ!” ಎಂದು ಗುರು ವ್ಯಾಸರಾಯರಿಂದ ಬೆನ್ನು ತಟ್ಟಿಸಿಕೊಂಡ ಆ ದಿವ್ಯ ಚೇತನಕ್ಕೆ ನಮೋನ್ನಮಃ! ಪುರಂದರದಾಸರನ್ನು ನೆನೆಯುತ್ತಿರುವ “ಇಂದಿನ ದಿನವೇ ಶುಭದಿನವು!”

ಪುರಂದರದಾಸರ ಒಂದು ಉಗಾಭೋಗ ನನ್ನ ಗಮನ ಸೆಳೆಯಿತು. ಪುರಂದರದಾಸರು ಇಂದಿದ್ದರೆ, ಅವರ ಕಟು ವ್ಯಂಗ್ಯಭರಿತ ಪ್ರತಿಕ್ರಿಯೆ ಏನಿರುತ್ತಿತ್ತೋ?

“ಸ್ತ್ರೀಯರಿಗೆ ಪುರುಷರು ಮೋಹಿಸುವರಲ್ಲದೆ
ಪುರುಷರಿಗೆ ಪುರುಷರು ಮೋಹಿಸುವುದುಂಟೇ?
ಪುರುಷ ಬ್ರಹ್ಮಾದಿಗಳು ನಿನ್ನನ್ನು ಮೋಹಿಸುವರು
ತಿರುವೆಂಗಳಪ್ಪ ಶ್ರೀ ಪುರಂದರ ವಿಠಲ.”

ಸಾಂಕೇತಿಕ ಅರ್ಥಗಳನ್ನೊಳಗೊಂಡಿರುವ ಈ ಹಾಡು ನೋಡಿ –

ಸದ್ದು ಮಾಡಲು ಬೇಡವೊ _ ನಿನ್ನ ಕಾಲಿಗೆ |
ಬಿದ್ದು ನಾ ಬೇಡಿಕೊಂಬೆ ||ಪ||

ನಿದ್ದೆಗೆಯ್ಯವರೆಲ್ಲ ಎದ್ದರೆ ನೀನು ಬಂ-|
ದಿದ್ದದ್ದು ಕಂಡರೇನೆಂಬುವರೊ ರಂಗ ||ಅನುಪಲ್ಲವಿ||

ಬಳೆ ಘಲ್ಲುಕೆನ್ನದೇನೊ-ಕೈಯ ಪಿಡಿದು |
ಎಳೆಯದಿರೊ ಸುಮ್ಮನೆ ||
ಮೊಲೆಗಳ ಮೇಲಿನ ಸೆರಗನೆಳೆಯಲು ಕೊ-|
ರಳ ಪದಕಂಗಳು ಧ್ವನಿಗೆಯ್ಯವುವೊ ರಂಗ ||೧||

ನಿರುಗೆಯ ಪಿಡಿಯದಿರೊ – ಕಾಂಚಿಯ ದಾಮ |
ಕಿರುಗಂಟೆ ಧ್ವನಿಗೆಯ್ಯದೆ? ||
ಕಿರುದುಟಿಗಳ ನೀನು ಸವಿದು ಚಪ್ಪರಿಸಲು |
ತರವಲ್ಲ ಗಂಡ ಮತ್ಸರವ ತಾಳುವನಲ್ಲ ||೨||

ನಾಡ ಮಾತುಗಳೇತಕೊ – ಸಂಗೀತವ |
ಪಾಡುವ ಸಮಯವೇನೊ ||
ಗಾಡಿಕಾರ ಶ್ರೀ ಪುರಂದರವಿಠಲನೆ |
ಪಾಡುಪಂಥಗಳೊಡಗೂಡುವ ಸಮಯದಿ ||೩||

**************************

6 thoughts on “ನನ್ನ ಪುಟ್ಟ ಪುರಂದರ ವಿಠಲ!”

  1. ಪುರಂದರದಾಸರ ಪುಣ್ಯತಿಥಿಯ ದಿನ ಅವರ ಮನೋಹರ ಉಗಾಭೋಗ ನೀಡಿದ್ದೀರಿ. ಅಭಿನಂದನೆಗಳು.

  2. ನಮಸ್ಕಾರಗಳು,

    ನಿಮ್ಮ ಲೇಖನ ಚನ್ನಾಗಿದೆ. ತು೦ಬಾ ಇಷ್ಟವಾಯಿತು. ನನಗೆ ದಾಸವಾಣಿಯೆ೦ದರೆ ಪ೦ಚಪ್ರಾಣ ನಾನು ದಾಸರ ದಾಸ. ಪುರ೦ದರ ದಾಸರು ನಮ್ಮ ನಿಲುಕಿಗೆ ಕೂಡ ಸಿಗದಷ್ಟು ಜ್ನ್ಯಾನಿ (ತಪ್ಪಿದೆ, ಕ್ಷಮಿಸಿ) ಮತ್ತು ಅನುಭಾವಿ

    ಸಾ೦ಕೇತಿಕ ಅರ್ಥಗಳನ್ನು ಬಿಡಿಸಿ ಹೇಳಿದ್ದರೆ ಚನ್ನಾಗಿರುತ್ತಿತ್ತು

    ಧನ್ಯವಾದಗಳು,
    ಬಸವರಾಜು

  3. ಜ್ಯೋತಿ ಮತ್ತು ಸುನಾಥರೇ, ಪ್ರತಿಕ್ರಿಯೆಗೆ ಧನ್ಯವಾದಗಳು.

    ಬಸವರಾಜು ಅವರೇ, ತುಳಸಿವನಕ್ಕೆ ಸ್ವಾಗತ. ನಿಮ್ಮ ಬ್ಲಾಗ್ “ಮತ್ತೊಂದಾಸ್ಯ.“ವನ್ನು ನಾನೂ ಮೊದಲು ಮತ್ತೊಂದು ದಾಸ್ಯ ಎಂದೇ ಓದಿಕೊಂಡು ಆಮೇಲೆ ನಿಮ್ಮ ಬರಹವನ್ನು ನೋಡಿ ಸರಿಯಾದ ಅರ್ಥ ತಿಳಿದುಕೊಂಡೆ.

    “ನನಗೆ ದಾಸವಾಣಿಯೆ೦ದರೆ ಪ೦ಚಪ್ರಾಣ.”

    “Birds of a feather flock together”. 🙂

  4. ಪುರಂದರದಾಸರ ಬಗೆಗಿನ ಬರಹ ಚೆನ್ನಾಗಿದೆ. ಉಳಿದಂತೆ ಇನ್ನೂ ಹಲವು ದಾಸರ ಪದ್ಯಗಳೂ ಚೆನ್ನಾಗಿವೆ. ಒಟ್ಟು ದಾಸರದ್ದು ಸಂಪತ್ತೇ.
    ಅಂದಹಾಗೆ “ಏನ ಸಾಧನ ಮಾಡಿ..’ ಈ ಪದ್ಯ ಯಾವ ದಾಸರೆಂದು ಹೇಳುತ್ತೀರಾ? ನಾನು ಹುಡುಕುತ್ತಿದ್ದೇನೆ ಸಿಗುತ್ತಿಲ್ಲ. ನನ್ನ ಇಷ್ಟವಾದ ಪದ್ಯವಿದು.
    ನಾವಡ (www.chendemaddale.wordpress.com)

  5. ‘ಏನ ಸಾಧನ ಮಾಡಿ..’ ಈ ಪದ್ಯ ಯಾವ ದಾಸರೆಂದು ಹೇಳುತ್ತೀರಾ?

    ಪ್ರಸನ್ನ ವೆಂಕಟದಾಸರದು. ಈ ಹಾಡನ್ನು ವಿದ್ಯಾಭೂಷಣರು ಹಾಡಿದ್ದಾರೆ..

Leave a Reply to sunaath Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.