ಕವಿ : ಕುವೆಂಪು
ದೂರ ಬಹುದೂರ ಹೋಗುವ ಬಾರಾ
ಅಲ್ಲಿ ಇಹುದೆಮ್ಮ ಊರ ತೀರ
ಜಲಜಲದಲೆಗಳ ಮೇಲ್ಕುಣಿದಾಡಿ
ಬಳಲಿಕೆ ತೊಳಲಿಕೆಗಳನೆಲ್ಲ ದೂಡಿ
ಗೆಲುವಿನ ಉಲಿಗಳ ಹಾಡಿ
ಒಲುಮೆಯ ಮಾತಾಡಿ
ಹಕ್ಕಿಗಳಿಂಚರ ಕೇಳಿ ಆನಂದವ ತಾಳಿ
ಹಿಮಮಣಿಕಣಗಣ ಸಿಂಚಿತ ಅಂಚಿನ
ಹಸುರಿನ ತೀರದ ಮೇಲಾಡಿ
ಕಿಸಲಯಕಂಪನದಿಂಪನು ನೋಡಿ
ಕೂಡಿ ಆಡಿ ನೋಡಿ ಹಾಡಿ
ತೇಲಿ ತೇಲಿ ಹೋಗುವ ಬಾರ
——————–
ಅಯ್ಯೋ! ಕ್ಷಮಿಸಿ
ದಿನಪತ್ರಿಕೆ ಓದಿದಂತೆ ಪ್ರತಿದಿನ ಇತ್ತ ಬಂದು
ಓದಿ ಪ್ರತಿಕ್ರಿಯಿಸದೇ ಹೋಗುತ್ತಿರುವೆ
ಇದಕ್ಕಾಗಿ ಕ್ಷಮಿಸಿ – ತಪ್ಪಾಯಿತು
ಕನ್ನಡ ಸಾಹಿತ್ಯ ಲೋಕದ ಸಾರವನ್ನೆಲ್ಲಾ ಹೀರಿ
ನಮ್ಮ ಮುಂದೆ ಸಾರುತ್ತಿರುವ ಮಹತ್ಕಾರ್ಯಕ್ಕೆ
ನಾ ಶಿರ ಬಾಗುವೆ
ಒಳ್ಳೆಯದಾಗಲಿ
ಗುರುದೇವ ದಯಾ ಕರೊ ದೀನ ಜನೆ
ಹಲ್ಲೋ ತ್ರಿವೇಣಿ!
ನಿನ್ನ website ತುಂಬ ಚೆನ್ನಾಗಿದೆ!!
ಮನೇಶ
ಮನೇಶ, ನಿನ್ನ ಹೆಸರೂ ಚೆನ್ನಾಗಿದೆ. ಇದೇ ಮೊದಲ ಬಾರಿ ಕೇಳಿದ್ದು ನಾನು. 🙂
“ದಿನಪತ್ರಿಕೆ ಓದಿದಂತೆ ಪ್ರತಿದಿನ ಇತ್ತ ಬಂದು
ಓದಿ ಪ್ರತಿಕ್ರಿಯಿಸದೇ ಹೋಗುತ್ತಿರುವೆ
ಇದಕ್ಕಾಗಿ ಕ್ಷಮಿಸಿ – ತಪ್ಪಾಯಿತು”
– ತವಿಶ್ರೀಯವರೆ, ನೀವು ಪ್ರತಿದಿನ ನನ್ನ ಬ್ಲಾಗಿಗೆ ಭೇಟಿ ನೀಡುತ್ತೀರೆಂದು ತಿಳಿದು ಸಂತೋಷವಾಯಿತು. ಧನ್ಯವಾದಗಳು.
ಎಷ್ಟು ಚೆನ್ನಾಗಿದೆ ಕವಿತೆ! ಇದನ್ನು ಓದಿದವೆರಲ್ಲಾ ಭಾಗ್ಯವಂತರೆ ಸರಿ. ಕುವೆಂಪು ಅವರಿಗೆ ನಮೋ ನಮಹ್!
ಇದರ ಜೊತೆಗೆ ಕುವೆಂಪು ಅವರದ್ದೇ ಆದ “ದೂರಕೆ ದೂರಕೆ ಬಹು ಬಹು ದೂರಕೆ” ನೆನಪಾಯ್ತು. ಶಿವಮೊಗ್ಗ ಸುಬ್ಬಣ್ಣ ಅದನ್ನು ಸೊಗಸಾಗಿ ಹಾಡಿದ್ದಾರೆ (ಹಾಗಂತ ನೆನಪು!!).