ಅಮೆರಿಕದಲ್ಲಿ ಇರುವವರೆಲ್ಲಾ
ಬಹಳ ಶ್ರೀಮಂತರೆಂದುಕೊಂಡು
ತೋರಿಕೆಯ ಮರ್ಯಾದೆ ನೀಡುತ್ತಿದ್ದ
ಒಳಗೇ ಉರಿದುಕೊಳ್ಳುತ್ತಾ
ಬಾಯುಪಚಾರ ಮಾಡುತ್ತಿದ್ದ,
ಭಾರತದ ನೆಂಟರೊಬ್ಬರು
ಡಾಲರ್ ಬೆಲೆ ಜರ್ರೆಂದು
ಕೆಳಗಿಳಿಯುತ್ತಿರುವ ಈ ಹೊತ್ತಿನಲ್ಲಿ
ಕೇಳಿದರಂತೆ ಕಿಟ್ಟಿಯನ್ನ-
ಪಾಪ! ಅಮೆರಿಕದಲ್ಲಿದೀರಂತೆ,
ಹೊಟ್ಟೆ-ಬಟ್ಟೆಗೇನೂ ಅಲ್ಲಿ
ತಾಪತ್ರಯವಿಲ್ಲ ತಾನೇ?
(‘ಸಂಗಮ’ದಲ್ಲಿ ಪ್ರಕಟವಾಗಿರುವ ಹನಿಗವನ)
ಚಿತ್ರ : ಅರುಣ್ ಮೂರ್ತಿ
ಭಲೇ,ಡಾಲರ್ ಪವರ್! ಹನಿಗವನ ಹಾಗೂ ಕಾರ್ಟೂನ್ ಎರಡೂ ನಗೆಯನ್ನು ಉಕ್ಕಿಸುತ್ತಿವೆ. ಧನ್ಯವಾದಗಳು.
ಸುನಾಥರು ಹೇಳಿರುವಂತೆ ನಾನು ಕೂಡ ಭಲೇ,ಡಾಲರ್ ಪವರ್! ಅನ್ನುವೆ.:)
ನಾವು ಒಪ್ಪಲು ನಖರಾ ಮಾಡಿದರೂ, ದುಡ್ಡು ಸಂಬಂಧಗಳನ್ನು ಮೀರಿ ನಿಲ್ಲುವುದು ನಿಜ.
ದಯವಿಟ್ಟು ಎಲ್ಲರೂ ನನ್ನ ಬ್ಲಾಗಿಗೊಮ್ಮೆ ಭೇಟಿಕೊಡಿ.
ಹನಿಗವನ ‘ಹನಿ’ಗಿಂತ ದೊಡ್ಡದಾಗಿದ್ದು, ‘ಹನಿ’ಸಿದ ನಗುವೂ ದೊಡ್ಡದಾಗಿಯೇ ಇದೆ. ಹರಿಸಿದ ಅರ್ಥವೂ ಹಿರಿದಾಗಿದೆ. ಚಿತ್ರವೂ ಪೂರಕಕ್ರಿಯೆ ನಡೆಸಿದೆ. ಧನ್ಯವಾದಗಳು ಇಲ್ಲಿ ಹಂಚಿಕೊಂಡದ್ದಕ್ಕೆ.
ಸುನಾಥ್,ಮೈನಾ, ಜ್ಯೋತಿ, ಧನ್ಯವಾದಗಳು.
ಸೊಗಸಾಗಿದೆ ನಿಮ್ಮ ಹನಿಗವನ 🙂
ಸುರೇಶ್, ಹನಿಗವನ ಓದಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.