ಕವಿ : ಬಿ. ಆರ್. ಲಕ್ಷ್ಮಣರಾವ್
ಚಿತ್ರ: ಆಕ್ಸಿಡೆಂಟ್
ಸಂಗೀತ : ರಿಕಿ ಕೆಜ್
ಗಾಯಕ : ಸೋನು ನಿಗಮ್
ಬಾ ಮಳೆಯೇ ಬಾ, ಅಷ್ಟು ಬಿರುಸಾಗಿ ಬಾರದಿರು
ನನ್ನ ನಲ್ಲೆ ಬರಲಾಗದಂತೆ
ಅವಳಿಲ್ಲಿ ಬಂದೊಡನೆ ಬಿಡದೆ ಬಿರುಸಾಗಿ ಸುರಿ
ಹಿಂತಿರುಗಿ ಹೋಗದಂತೆ
ಓಡು, ಕಾಲವೇ ಓಡು, ಬೇಗ ಕವಿಯಲಿ ಇರುಳು
ಕಾದಿಹಳು ಅಭಿಸಾರಿಕೆ
ಅವಳಿಲ್ಲಿ ಬಂದೊಡನೆಯೇ ನಿಲ್ಲು, ಕಾಲವೇ ನಿಲ್ಲು
ನಮ್ಮ ತೆಕ್ಕೆ ಸಡಿಲಾಗದಂತೆ
ಬೀಸು, ಗಾಳಿಯೇ, ಬೀಸು, ನನ್ನೆದೆಯ ಆಸೆಗಳ
ನಲ್ಲೆ ಹೃದಯಕೆ ತಲುಪಿಸು
ಹಾಸು, ಹೂಗಳ ಹಾಸು, ಅವಳು ಬಹೊ ದಾರಿಯಲ್ಲಿ
ಕಲ್ಲುಗಳು ತಾಗದಂತೆ
ಬೀರು, ದೀಪವೇ, ಬೀರು, ನಿನ್ನ ಹೊಂಬೆಳಕಲ್ಲಿ
ನೋಡುವೆನು ನಲ್ಲೆ ರೂಪ
ಆರು, ಬೇಗನೆ ಆರು, ಶೃಂಗಾರ ಶಯ್ಯೆಯಲ್ಲಿ
ನಾಚಿ ನೀರಾಗದಂತೆ
ಹೋಗು, ನಿದ್ದೆಯೇ, ಹೋಗು, ನಿನಗಿಲ್ಲಿ ಎಡೆಯಿಲ್ಲ
ಪ್ರೇಮಿಗಳ ಸೀಮೆಯಲ್ಲಿ
ನಾವೀಗ ಅನಿಮಿಷರು, ನಮ್ಮ ಈ ಮಿಲನ
ಗಂಧರ್ವ ವೈಭೋಗದಂತೆ
ಮಿಲನ, ಗಂಧರ್ವ ವೈಭೋಗದಂತೆ.
ಹಾಡು, ಬಿ.ಆರ್ ಹಾಡು,
ಕೇಳುತಿರುವಾ ನಮ್ಮ
ಹಾರ್ಟು ತಕಿದಿಮಿಸುವಂತೆ!
ಸುನಾಥರೇ, ನಿಮ್ಮ ಪ್ರತಿಕ್ರಿಯೆಯನ್ನು ಕೂಡ ಹಾಡಿನ ಧಾಟಿಯಲ್ಲೇ ಹಾಡಿಬಿಡಬಹುದೇನೋ! 🙂
ಹಲೋ