ಕವಿ: ಕುವೆಂಪು
ಚಿತ್ರ :ಕಾನೂರು ಹೆಗ್ಗಡತಿ
ಗಾಯಕ : ಪುತ್ತೂರು ನರಸಿಂಹ ನಾಯಕ್
ಹೋಗುವೆನು ನಾ…….
ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ
ಮಲೆಯ ನಾಡಿಗೆ ಮಳೆಯ ಬೀಡಿಗೆ
ಸಿರಿಯ ಚೆಲುವಿನ ರೂಢಿಗೆ
ಬೇಸರಾಗಿದೆ ಬಯಲು
ಹೋಗುವೆ ಮಲೆಯ, ಕಣಿವೆಯ ಕಾಡಿಗೆ
ಹಸಿರು ಸೊಂಪಿನ ಬಿಸಿಲು ತಂಪಿನ
ಗಾನದಿಂಪಿನ ಕೂಡಿಗೆ |
ಅಲ್ಲಿ ಕಾನನ ಮಧ್ಯೆ ತುಂಗೆಯು
ಮುತ್ತನಿಡುವಳು ಕಣ್ಣಿಗೆ
ದಡದೊಳಿಡಿದಿಹ ಬಿದಿರು ಮೆಳೆಗಳ
ಹಸಿರು ಚಾಮರ ತಣ್ಣಗೆ
ಬೀಸು ಗಾಳಿಗೆ ವಲೆಯೆ ಭದ್ರೆಯು
ತುಂಬಿ ಹರಿವಳು ನುಣ್ಣಗೆ
ಮಲೆಯ ಬಿತ್ತರದೆದುರು
ಹೊನಲುಗಳೆನಿತು ನೋಡದೋ ಸಣ್ಣಗೆ |
ಎಲ್ಲಿ ಹಸಿರನು ಚಿಮ್ಮಿ ಕಣ್ಣಿಗೆ
ಪೈರು ಪಚ್ಚೆಯ ಬೆಳೆವುದೋ
ಎಲ್ಲಿ ಗದ್ದೆಯ ಕೋಗು
ಪವನನ ಹಸಿಗೆ ತೆರೆತೆರೆಯೊಲೆವುದೋ
ಬಿಂಕಗಂಗಳ ಮಲೆಯ ಹೆಣ್ಗಳ
ಭಿತ್ತಿ ಎಲ್ಲೆಡೆ ಸೆಳೆವುದೋ
ಎಲ್ಲಿ ಕಾಲವು ತೇಲಿ ಸುಖದಲಿ
ತಿಳಿಯದಂತೆಯೆ ಕಳೆವುದೋ |
ಹಾತೊರೆಯುತಿದೆ ಕಾತರಿಸುತಿದೆ
ಮನಕೆ ಮನೆ ಗಿರ ಹಿಡಿದಿದೆ
ನೆನಪಿನಳರಿನ ಬಂಧನಾತ್ಮದ
ಭೃಂಗ ಹೊಡೆನಲಿಕುಡಿದಿದೆ
ಹೋಗುವೆನು ನಾ ಹೋಗುವೆನು ನಾ
ನನ್ನ ಒಲುಮೆಯ ಗೂಡಿಗೆ
ಬಿಳಿಯ ತಿಂಗಳ ಸಿರಿವನಂಗಳ
ಮಲೆಯ ಮಂಗಳ ನಾಡಿಗೆ |
ತುಳಸಿಯಮ್ಮ,
ನಿಮ್ಮ ಹಾಗೂ ಜ್ಯೋತಿಯಕ್ಕನ ಪುಸ್ತಕಗಳು ಬಿಡುಗಡೆಯಾಗುತ್ತಿರುವುದನ್ನು ದಟ್ಸ್ ಕನ್ನಡದಲ್ಲಿ ನೋಡಿದೆ. ತುಂಬಾ ಸಂತೋಷವಾಯಿತು. ತಪ್ಪದೇ ಖರೀದಿಸಿ ಓದುವೆ. ಸಾಧ್ಯವಾದರೆ ಸಮಾರಂಭಕ್ಕೂ ಬರುವೆ. ನನ್ನ ಪರವಾಗಿ ನಿಮಗಿಬ್ಬರಿಗೂ ಹಾರ್ದಿಕ ಶುಭಾಶಯಗಳು.
ತೇಜಸ್ವಿನಿ, ಖಂಡಿತ ಬನ್ನಿ. ಭೇಟಿಯಾಗೋಣ. ನಿಮ್ಮ ಪ್ರೀತಿಯ ಹಾರೈಕೆಗೆ ಧನ್ಯವಾದಗಳು.
ಬೇಸರಾಗಿದೆ ಶಿಕಾಗೋ..ಅಂತ ಹಾಡಿಕೊಂಡು
ಒಲುಮೆಯ ಗೂಡಿಗೆ,ಮಲೆಯ ನಾಡಿಗೆ ಮಳೆಯ ಬೀಡಿಗೆ.ಸಿರಿಯ ಚೆಲುವಿನ ರೂಢಿಗೆ ಅಂತ ಹೋಗಿ ವಾಪಸು ಬಂದಾಯಿತಲ್ಲಾ
ಸ್ವಾಗತ…
ಇನ್ನು ಸೋಮಾರಿ ತನ ಮಾಡದೆ ಒಣಗಿ ಹೋಗುತ್ತಿರುವ ವನಕ್ಕೆ ನೀರು ಗೊಬ್ಬರ ಹಾಕುವಂಥವರಾಗಿ….
ಮಾಲಾ, ಚುಚ್ಚಿ ಎಚ್ಚರಿಸಿದ್ದಕ್ಕೆ ಧನ್ಯವಾದ. ಮನೆ ಗಿರ ಬಿಡಲು ಇನ್ನೂ ಸ್ವಲ್ಪ ಸಮಯ ಬೇಕು.:)
‘ಹಾತೊರೆಯುತಿದೆ ಕಾತರಿಸುತಿದೆ
ಮನಕೆ ಮನೆ ಗಿರ ಹಿಡಿದಿದೆ’