ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು

ರಚನೆ – ವಿಜಯ ದಾಸರು
ಗಾಯಕ – ರಾಯಚೂರ್ ಶೇಷಗಿರಿದಾಸ್
ಸಂಗೀತ – ಪ್ರವೀಣ್ ಗೋಡ್ಕಿಂಡಿ

ಹಾಡು ಕೇಳಿ

ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು ಮನ್ನಿಸುವರೊ ಮಹರಾಯ
ಎನ್ನ ಪುಣ್ಯಗಳಿಂದ ಈ ಪರಿ ಉಂಟೇನೋ ನಿನ್ನದೇ ಸಕಲ ಸಂಪತ್ತು ||ಪಲ್ಲವಿ||

ಜೀರ್ಣ ಮಲಿನ ವಸ್ತ್ರ ಕಾಣದ ಮನುಜಗೆ ಊರ್ಣ ವಿಚಿತ್ರ ವಸನ
ವರ್ಣವರ್ಣದಿಂದ ಬಾಹೋದೇನೊ ಸಂಪೂರ್ಣ ಗುಣಾರ್ಣವ ದೇವಾ
ಸಂಜೀತನಕ ಇದ್ದು ಸಣ್ಣ ಸವಟು ತುಂಬ ಗಂಜಿ ಕಾಣದೆ ಬಳಲಿದೆನೊ
ವ್ಯಂಜನ ನಾನಾ ಸುಭಕ್ಷ್ಯ ಭೋಜ್ಯಂಗಳ ಭುಂಜಿಸುವದು ಮತ್ತೇನೋ ? ||೨||

ಒಬ್ಬ ಹೆಂಗಸಿಗೆ ಅನ್ನ ಹಾಕುವದಕ್ಕೆ ತಬ್ಬಿಬ್ಬುಗೊಂಡೆ ನಾ ಹಿಂದೆ
ನಿಬ್ಬರದಲಿ ಸರ್ವರ ಕೂಡಿನ್ನು ಹಬ್ಬವನುಂಡೆನೊ ಹರಿಯೆ
ಮನೆಮನೆ ತಿರುಗಿದೆ ಕಾಸು ಪುಟ್ಟದೆ ಸುಮ್ಮನೆ ಜಾಲವರಿದು ಬಾಹೇನು
ಹಣ ಹೊನ್ನು ದ್ರವ್ಯ ಒಮ್ಮಿಂದೊಮ್ಮೆ ಈಗ ಎನಗೆ ಪ್ರಾಪುತಿ ನೋಡೋ ಜೀಯ ||೨||

ಮಧ್ಯಾಹ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ ಮೆದ್ದೆನೆಂದರೆ ಈಯದಾದೆ
ಈ ಧರೆಯೊಳು ಸತ್ಪಾತ್ರರಿಗುಣಿಸುವ ಪದ್ಧತಿ ನೋಡೊ ಧರ್ಮಾತ್ಮ
ನೀಚೋಚ್ಛ ತಿಳಿಯದೆ ಸರ್ವರ ಚರಣಕೆ ಚಾಚಿದೆ ನೊಸಲು ಹಸ್ತಗಳ
ಯೋಚಿಸಿ ನೋಡಲು ಸೋಜಿಗವಾಗಿದೆ ವಾಚಕೆ ನಿಲುಕದೊ ಹರಿಯೆ ||೩||

ವೈದಿಕ ಪದವಿಯ ಕೊಡುವನಿಗೆ ಲೌಕಿಕನೈದಿಸುವುದು ಮಹಾಖ್ಯಾತಿ
ಮೈದುನಗೊಲಿದ ಶ್ರೀ ವಿಜಯವಿಠಲ ನಿನ್ನ ಪಾದ ಸಾಕ್ಷಿ ಅನುಭವವೊ ||೪||

1 thought on “ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು”

  1. ವೇಣಿ, ಇದೇನಿದು ಇಲ್ಲಿಗೆ ದಾಸವರೇಣ್ಯರ ಆವಳಿಯೇ ಬಂದು ನಿಂತಿದೆ! ಸಾಲು ಸಾಲಾಗಿ ದಾಸರ ಹಾಡುಗಳನ್ನು ಕೇಳಿಸುವ ನಿನ್ನ ಈ ಅವಿರತ ಪ್ರಯತ್ನಕ್ಕೆ ಶ್ಲಾಘನೆಗಳು.
    ಜೊತೆಗೆ ನಿನ್ನ ಬರಹಗಳನ್ನೂ ಎದುರು ನೋಡುತ್ತೇನೆ ಅಂತ ನೆನಪಿದೆ ತಾನೆ?

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಪುರಂದರದಾಸರು ಕಂಡ ಮುಸ್ಲಿಮರುಪುರಂದರದಾಸರು ಕಂಡ ಮುಸ್ಲಿಮರು

ರಚನೆ : ಪುರಂದರ ದಾಸರು ತುರುಕರು ಕರೆದರೆ ಉಣಬಹುದಣ್ಣ | ತುರುಕರು ಕರೆದರೆ ಅತಿ ಪುಣ್ಯವಣ್ಣ || ತುರುಕರಿಂದ ಮುಟ್ಟು ಮಡಿ ಚಟ್ಟು ಹೋಗೋದು | ತುರುಕರಿಂದ ಎಂಜಲು ಹೋಗೋದು || ತುರುಕರ ಕೂದಲು ತುರುಬಿಗೆ ಸುತ್ತಿದರೆ ಎಣಿಕೆಯಿಲ್ಲದ ಮುತ್ತೈದೆಯರಣ್ಣ ||

ತಿರುಪತಿ ವೆಂಕಟರಮಣ, ನಿನಗೇತಕೆ ಬಾರದು ಕರುಣ?ತಿರುಪತಿ ವೆಂಕಟರಮಣ, ನಿನಗೇತಕೆ ಬಾರದು ಕರುಣ?

ಪುತ್ತೂರು ನರಸಿಂಹನಾಯಕರ ದನಿಯಲ್ಲಿ ತಿರುಪತಿ ವೆಂಕಟರಮಣ ನಿನಗೇತಕೆ ಬಾರದೊ ಕರುಣ ನಂಬಿದೆ ನಿನ್ನಯ ಚರಣ ಪರಿಪಾಲಿಸಬೇಕೋ ಕರುಣ ಅಳಗಿರಿಯಿಂದಲಿ ಬಂದ ಸ್ವಾಮಿ ಅಂಜನ ಗಿರಿಯಲಿ ನಿಂದ ಕೊಳಲನೂದುವ ಚಂದ ನಮ್ಮ ಕುಂಡಲರಾಯ ಮುಕುಂದ ಬೇಟೆಯಾಡುತ ಬಂದ ಸ್ವಾಮಿ ಬೆಟ್ಟದ ಮೇಲೆ ನಿಂದ

ಕೈಲಾಸವಾಸ ಗೌರೀಶ ಈಶಕೈಲಾಸವಾಸ ಗೌರೀಶ ಈಶ

ರಚನೆ -ವಿಜಯದಾಸರು ಹಾಡು ಕೇಳಿ ಭೀಮಸೇನ ಜೋಶಿ ವಿದ್ಯಾಭೂಷಣ ಕೈಲಾಸವಾಸ ಗೌರೀಶ ಈಶ ತೈಲಧಾರೆಯಂತೆ ಮನಸು ಕೊಡೊ ಹರಿಯಲ್ಲಿ, ಶಂಭೋ || ಪಲ್ಲವಿ|| ಅಹೋರಾತ್ರಿಯಲಿ ನಾನು ಅನುಚರಾಗ್ರಣಿಯಾಗಿ ಮಹಿಯೊಳಗೆ ಚರಿಸಿದೆನೊ ಮಹದೇವನೆ ಅಹಿ ಭೂಷಣನೆ ಎನ್ನ ಅವಗುಣಗಳೆಣಿಸದಲೆ ವಿಹಿತ ಧರ್ಮದಿ ವಿಷ್ಣು