ರಚನೆ : ಪುರಂದರದಾಸರು
ಗಾಯಕ : ಎಂ. ಬಾಲಮುರಳಿಕೃಷ್ಣ

ಹಾಡು ಕೇಳಿ

ರಾಮಕೃಷ್ಣರು ಮನೆಗೆ ಬಂದರು ಬಾಗಿಲ ತೆರೆಯಿರೊ
ಕಾಮಧೇನು ಬಂದಂತಾಯಿತು ವರವ ಬೇಡಿರೊ ||ಪಲ್ಲವಿ||

ಚೆಂಡು ಬುಗುರಿ ಚಿಣ್ಣಕೋಲು ಗಜ್ಜುಗವಾಡುತ
ದುಂಡು ಮಲ್ಲಿಗೆ ಮುಡಿದು ಕೊಳಲನೂದುತ ಪಾಡುತ
ಹಿಂಡು ಪೆಣ್ಗಳ ಮುದ್ದು ಮುಖದ ಸೊಬಗ ನೋಡುತ
ಭಂಡು ಮಾಡಿ ಬಾಲೆಯರೊಡನೆ ಸರಸವಾಡುತ ||೧||

ಮಕರ ಕುಂಡಲ ನೀಲ ಮುತ್ತಿನ ಬಾವುಲಿಡತಲಿ
ಕಂಕಣ ಹಾರ ತೋಳಬಂದಿ ತೊಡುಗೆ ತೊಡುತಲಿ
ಸುಕುಮಾರ ಸುಂದರವಾದ ಉಡುಗೆಯುಡುತಲಿ
ಮುಖದ ಕಮಲ ಮುಗುಳುನಗೆಯ ಸುಖವ ಕೊಡುತಲಿ ||೨||

ಪೊಕ್ಕಳಲ್ಲಿ ಅಜನ ಪಡೆದ ದೇವದೇವನು
ಚಿಕ್ಕ ಉಂಗುಷ್ಠದಲ್ಲಿ ಗಂಗೆಯ ಪಡೆದನು
ಮಕ್ಕಳ ಮಾಣಿಕ್ಯ ಗುರು ಪುರಂದರ ವಿಠಲನು
ಅಕ್ಕರೆಯಿಂದಲಿ ಮುಕುತಿ ಕೊಡುವ ರಂಗನಾಥನು ||೩||

12 thoughts on “ರಾಮಕೃಷ್ಣರು ಮನೆಗೆ ಬಂದರು”

  1. “ಮಾನ್ಯರೇ, ರಾಮಕೃಷ್ಣರು ಮನೆಗೆ ಬಂದರು – ಈ ಹಾಡಿನ ಸಾಹಿತ್ಯವಿದ್ದರೆ ದಯವಿಟ್ಟು ಕೊಡಿ. (ಹಾಡಿನ ಲಿಂಕ್ ಸಹಿತ) ಮಗಳಿಗೆ ಶಾಲೆಯಲ್ಲಿ ಹಾಡಿಸಲು ಬೇಕಾಗಿದೆ. ಅವಸರವೇನಿಲ್ಲ.”

    – ಅನಾಮಿಕರೆ, ರಾಮಕೃಷ್ಣರು ಮನೆಗೆ ಬಂದರು! 🙂 (ನಿಮ್ಮ ಮಗಳು ತುಂಬಾ ಪುಟ್ಟವಳಾಗಿದ್ದರೆ ಈ ಹಾಡಿಗಿಂತ ಸುಲಭವಾದ ಬಹಳ ಹಾಡುಗಳಿವೆ.ಪ್ರಯತ್ನಿಸಿ. )

    ಈ ಹಾಡಿನ ಮೂಲ ಸಾಹಿತ್ಯ ನನ್ನಲ್ಲಿಲ್ಲ. ಅಂತರ್ಜಾಲದಲ್ಲಿ ಸಿಕ್ಕಿದ ಹಾಡು ಕೇಳಿ ಬರೆದಿದ್ದೇನೆ. ಬಾಲಮುರಳಿ ಕೃಷ್ಣ ಹಾಡಿರುವ ಈ ಹಾಡಿನಲ್ಲಿ ಕೆಲವು ತಪ್ಪುಗಳಿವೆ ಅನಿಸಿತು. ನನಗೆ ತಿಳಿದಿದ್ದನ್ನು ಸರಿಪಡಿಸಿದ್ದೇನೆ. ಮೂಲ ಸಾಹಿತ್ಯ ತಿಳಿದವರು ಸರಿಪಡಿಸಿಕೊಡಿ.

    ಮಾನ್ಯ ಹಂಸಾನಂದಿ, ಸುನಾಥರ ಚಿತ್ತ ಆದಷ್ಟು ಬೇಗ ಇತ್ತ ಹರಿಯಲಿ ಎಂದು ಆಶಿಸುತ್ತೇನೆ . 🙂

  2. ಹೋಯ್,
    ನನಗೆ ಏನೇನೋ ‘ಪೊಳ್ಳು’ ಭರವಸೆ ಕೊಟ್ಟಿದ್ರಲ್ಲ, ಅದ್ನೆಲ್ಲ ಯಾವಾಗ ಈಡೇರಿಸೋದು?

  3. ಪಾಪ ! ಭಾಗ್ವತ್ರು ಎಲ್ಲೋ. ಯಾರಿಂದನೋ ಮೋಸಹೋಗಿ ಇಲ್ಲಿ ಬಂದು, ತುಳಸಿವನದ ತಣ್ಣನೆ ನೆರಳಲ್ಲಿ ಕೂತು ಅಳ್ತಾ ಇದಾರೆ ಅಂತ ಕಾಣತ್ತೆ.

    ಕಾಕಾ, ಆಗಲಿ.

  4. ಅಲ್ರೀ, ಅದ್ಯಾರೋ ಶೆಟ್ಟರ ಮಗಳ್ನೋ, ಭಟ್ಟರ ಮಗಳ್ನೋ ಕರ್ಕೊಂಡು ಬರ್ತೀನಿ ಅಂದಿದ್ರಲ್ಲ…

  5. ಓಯ್ ಭಾಗ್ವತ್ರೇ… ಯಾರೋ ಅಂದಿದ್ ಪೊಳ್ಳು ಭರವಸೆಗೆ, ಪಾಪ, ತುಳಸಿಯಮ್ಮನ್ನ ತರಾಟೆಗೆ ತಗೊಳ್ಳೋದು ಯಾಕೆ ಅಂತ! ಇಷ್ಟೊಂದಿನ ನಿಮ್ ಸುದ್ದಿ ಇಲ್ಲದ್ದು ನೋಡಿ ಯಾವುದೋ “ಕನಸಿನ ಕನ್ಯೆ” ಸಿಕ್ಕಿದ್ದಾಳೆ ಅಂತಲೇ ನಾವೆಲ್ಲ ಸುಮ್ಮನಿದ್ರೆ, ನೀವು ಹೀಗಾ ಏಕಾಏಕಿ ಬಂದು ತರ್ಲೆ ತೆಗ್ಯೋದು? ಅದೂ ತುಳಸಿವನದ ತಣ್ಣನೆ ನೆರಳಲಿ…?
    ಮಸಾಲೆ ದೋಸೆ ಆಸೆಗಾದ್ರೂ ಇಂಥಾ ತರ್ಲೆ ಬಿಟ್ ಬಿಡಪ್ಪಾ, ಜೋಕುಮಾರ!!

  6. ತ್ರಿವೇಣಿ,
    ಮೊದಲನೆಯ ನುಡಿಯ ೪ನೆಯ ಸಾಲಿನಲ್ಲಿ ಚೆಂಡು ಪದದ ಬದಲು ಭಂಡು ಪದವಿದೆ.ಎರಡನೆಯ ನುಡಿಯ ೧ನೆಯ ಸಾಲಿನಲ್ಲಿ ‘ನೀಲ ಕುಂಡಲ ಬಾಹುಲಿಡುತಲಿ’ ಬದಲು, ‘ನೀಲ ಮುತ್ತಿನ ಬಾವುಲಿಡತಲಿ’ ಎಂದಿದೆ.ಅದೇ ನುಡಿಯಲ್ಲಿ ‘ತೋಳ ಬಂಧಿ’ಯನ್ನು ‘ತೋಳಬಂದಿ’ ಎಂದು ಬದಲಾಯಿಸಿಕೊಳ್ಳಬಹುದು.
    ೩ನೆಯ ನುಡಿಯ ಮೊದಲ ಸಾಲಿನಲ್ಲಿ, ‘ಅಜವ’ ಇದು ‘ಅಜನ’ ಆಗಬೇಕು.
    ೨ನೆಯ ಸಾಲಿನ ಉಂಗುಷ್ಟವು ಉಗುಷ್ಠವಾಗಬಹುದು.
    ಈ ಬದಲಾವಣೆಗಳನ್ನು ಅರಳುಮಲ್ಲಿಗೆ ಪಾರ್ಥಸಾರಥಿಯವರ ಸಂಪಾದಿತ
    ‘ಪುರಂದರದಾಸರ ಹಾಡುಗಳು’ ಪುಸ್ತಕದಿಂದ ಸೂಚಿಸುತ್ತಿದ್ದೇನೆ.

  7. ತ್ರಿವೇಣಿ,
    ಮೇಲೆ ನಾನೂ ಒಂದು ತಪ್ಪು ಮಾಡಿ ಬಿಟ್ಟೆ. ‘ಉಂಗುಷ್ಠ’ದ ಬದಲಾಗಿ ‘ಉಗುಷ್ಠ’ ಬರೆದಿದ್ದೇನೆ.
    ಕ್ಷಮೆ ಇರಲಿ.

  8. ಮಾಣಿ,
    ನಂಬಿ ಕೆಟ್ಟವರುಂಟೆ ತುಳಸಿಯಮ್ಮನ?
    ರಂಭೆಯನು ತರುವರು, ತಾಳಿಕೊಳ್ಳಪ್ಪ!
    -ಕಾಕಾ

  9. ಕಾಕಾ, ಹಾಡು ಸರಿಪಡಿಸಿದ್ದಕ್ಕೆ ಧನ್ಯವಾದಗಳು.

    ಪಾಪದ ಭಾಗ್ವತ್ರರನ್ನು ಕಂಡರೆ ಅನುಕಂಪವಾಗುತ್ತಿದೆ.

  10. ನೋಡಿ ಕಾಕಾ,
    ಈ ಎಳೆಯ ಬಾಲಕನ ಹೇಗೆ ಸತಾಯಿಸ್ತಿದಾರೆ ಸೀನಿಯರ ಸಿಟಿಜನ್-ಗಳು ಅಂತಃ-)

  11. ಏನಪ್ಪಾ ಭಾಗ್ವತ್ರೇ, ನಿಮ್ಮ್ ವಯಸ್ಸು ನಮ್ಮ್ ವಯಸ್ಸು ಸೇರಿಸಿದ್ರೆ ಸೀನಿಯರ್ ಸಿಟಿಜನ್ ಆಗಬಹುದು… ನೀವೇ ಆಗ್ತೀರಾ? ಲೆಕ್ಕ ಕೊಡ್ತೀವಿ!

Leave a Reply to ಭಾಗ್ವತ್ರು Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.