ರಚನೆ – ವ್ಯಾಸರಾಜರು
ಗಾಯಕ – ರಾಯಚೂರು ಶೇಷಗಿರಿ ದಾಸ್
ಸಂಗೀತ – ಪ್ರವೀಣ್ ಗೋಡ್ಕಿಂಡಿ

ಹಾಡು ಕೇಳಿ –

ಮಹಿಮೆ ಸಾಲದೇ ?
ಇಷ್ಟೇ ಮಹಿಮೆ ಸಾಲದೇ? ||ಪಲ್ಲವಿ||

ಅಹಿಶಯನನ ಒಲುಮೆಯಿಂದ
ಮಹಿಯೊಳೆಮ್ಮ ಶ್ರೀಪಾದರಾಜರ ||ಅ.ಪ||

ಮುತ್ತಿನ ಕವಚ ಮೇಲ್ಕುಲಾವಿ ನವರತ್ನ ಕೆತ್ತಿದ ಕರ್ಣಕುಂಡಲ
ಕಸ್ತೂರಿ ತಿಲಕ ಶ್ರೀಗಂಧ ಲೇಪನ ವಿಸ್ತಾರದಿಂದ ಮೆರೆದು ಬರುವ ||೧||

ವಿಪ್ರಗೆ ಬ್ರಹ್ಮ ಹತ್ಯೆ ದೋಷ ಬರಲು ಕ್ಷಿಪ್ರ ಶಂಖೋದಕದಿ ಕಳೆಯೆ
ಅಪ್ರಬುದ್ಧರು ದೂಷಿಸೆ, ಗೇರೆಣ್ಣೆ ಕಪ್ಪು ವಸನ ಹಸನ ಮಾಡಿದ ||೨||

ಹರಿಗೆ ಸಮರ್ಪಿಸಿದ ನಾನಾ ಪರಿಯ ಶಾಕಂಗಳನು ಭುಂಜಿಸೆ
ನರರು ನಗಲು ಶ್ರೀಶ ಕೃಷ್ಣನ ಕರುಣದಿಂದ ಹಸಿಯ ಮಾಡಿದ ||೩||

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.