ರಚನೆ – ವಾದಿರಾಜರು
ನೀರೆ ತೋರೆಲೆ ನೀರೆ ತೋರೆಲೆ ನೀಲವರ್ಣದ ದೇವನ
ಭಾಮೆ ತೋರೆಲೆ ಭಾಮೆ ತೋರೆಲೆ ಬಾಲ ಉಡುಪಿಯ ಕೃಷ್ಣನ ||
ಕಡೆವ ಕಡೆಗೋಲು ನೇಣು ಸಹಿತಲಿ ಕಡಲಿನೊಳಗಿಂದ ಬಂದನ
ಬಿಡದೆ ಭಕ್ತರ ಒಡನೆ ಪಾಲಿಪ ರಂಗ ಉಡುಪಿಯ ಕೃಷ್ಣನ||
ಮುದ್ದುಮುಖದವ ಮೂರು ಜಡೆಯಲಿ ಇದ್ದ ಉಡುಪಿಯ ಸ್ಥಳದಲಿ
ಒದ್ದು ಶಕಟನ ಆದಿಗುರುಗಳ ಮುದ್ದು ಉಡುಪಿಯ ಕೃಷ್ಣನ||
ಬಾಲಸನ್ಯಾಸಿಗಳು ನಿನ್ನನು ಪ್ರೇಮದಿಂದಲಿ ಭಜಿಸಲು
ಆಲದೆಲೆಯ ಮೇಲೆ ಮಲಗಿದ ಬಾಲ ಉಡುಪಿಯ ಕೃಷ್ಣನ ||
ಅಧ್ವರ್ಯು ಹರಿ ಬ್ರಹ್ಮ ವಲ್ಲಭ ನಿತ್ಯ ಸಾರಥಿ ಮಾಡಿದೆ
ಸದ್ಗುರು ಮುನಿ ವಾದಿರಾಜನ ಮುದ್ದು ಉಡುಪಿಯ ಕೃಷ್ಣನ ||
ಚೆನ್ನಾಗಿದೆ.
ವೆಂಕಟೇಶ್ ಅವರೇ, ಧನ್ಯವಾದಗಳು ಮತ್ತು ಹೊಸ ವರ್ಷದ ಶುಭಾಶಯಗಳು.