ನೀರೆ ತೋರೆಲೆ ನೀಲವರ್ಣದ ದೇವನ

ರಚನೆ – ವಾದಿರಾಜರು

ವಿದ್ಯಾಭೂಷಣರ ದನಿಯಲ್ಲಿ

ನೀರೆ ತೋರೆಲೆ ನೀರೆ ತೋರೆಲೆ ನೀಲವರ್ಣದ ದೇವನ
ಭಾಮೆ ತೋರೆಲೆ ಭಾಮೆ ತೋರೆಲೆ ಬಾಲ ಉಡುಪಿಯ ಕೃಷ್ಣನ ||

ಕಡೆವ ಕಡೆಗೋಲು ನೇಣು ಸಹಿತಲಿ ಕಡಲಿನೊಳಗಿಂದ ಬಂದನ
ಬಿಡದೆ ಭಕ್ತರ ಒಡನೆ ಪಾಲಿಪ ರಂಗ ಉಡುಪಿಯ ಕೃಷ್ಣನ||

ಮುದ್ದುಮುಖದವ ಮೂರು ಜಡೆಯಲಿ ಇದ್ದ ಉಡುಪಿಯ ಸ್ಥಳದಲಿ
ಒದ್ದು ಶಕಟನ ಆದಿಗುರುಗಳ ಮುದ್ದು ಉಡುಪಿಯ ಕೃಷ್ಣನ||

ಬಾಲಸನ್ಯಾಸಿಗಳು ನಿನ್ನನು ಪ್ರೇಮದಿಂದಲಿ ಭಜಿಸಲು
ಆಲದೆಲೆಯ ಮೇಲೆ ಮಲಗಿದ ಬಾಲ ಉಡುಪಿಯ ಕೃಷ್ಣನ ||

ಅಧ್ವರ್ಯು ಹರಿ ಬ್ರಹ್ಮ ವಲ್ಲಭ ನಿತ್ಯ ಸಾರಥಿ ಮಾಡಿದೆ
ಸದ್ಗುರು ಮುನಿ ವಾದಿರಾಜನ ಮುದ್ದು ಉಡುಪಿಯ ಕೃಷ್ಣನ ||

2 thoughts on “ನೀರೆ ತೋರೆಲೆ ನೀಲವರ್ಣದ ದೇವನ”

  1. venkatesh says:

    ಚೆನ್ನಾಗಿದೆ.

  2. sritri says:

    ವೆಂಕಟೇಶ್ ಅವರೇ, ಧನ್ಯವಾದಗಳು ಮತ್ತು ಹೊಸ ವರ್ಷದ ಶುಭಾಶಯಗಳು.

Leave a Reply to venkatesh Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಬಾರೋ ಗುರು ರಾಘವೇ೦ದ್ರ ಬಾರಯ್ಯ ಬಾ ಬಾಬಾರೋ ಗುರು ರಾಘವೇ೦ದ್ರ ಬಾರಯ್ಯ ಬಾ ಬಾ

ರಚನೆ : ಶೇಷ ವಿಠಲ ಬಾರೋ ಗುರು ರಾಘವೇ೦ದ್ರ ಬಾರಯ್ಯ ಬಾ ಬಾ ಬಾರೋ ಗುರು ರಾಘವೇಂದ್ರ ||ಪ|| ಹಿಂದುಮು೦ದಿಲ್ಲೆನಗೆ ನೀ ಗತಿ ಎ೦ದು ನ೦ಬಿದೆ ನಿನ್ನ ಪಾದವ ಬ೦ಧನವ ಬಿಡಿಸೆನ್ನ ಕರಪಿಡಿ ನ೦ದಕ೦ದ ಮುಕು೦ದ ಬ೦ಧೊ |ಅ.ಪ| ಸೇವಕನೆಲೊ ನಾನು

ದೇವೀ, ನಮ್ಮ ದ್ಯಾವರು ಬಂದರುದೇವೀ, ನಮ್ಮ ದ್ಯಾವರು ಬಂದರು

ರಚನೆ – ಕನಕದಾಸರು ರಾಯಚೂರು ಶೇಷಗಿರಿ ದಾಸ್ ವಿದ್ಯಾಭೂಷಣ ದೇವಿ ನಮ್ಮ ದ್ಯಾವರು ಬಂದರು ಬನ್ನಿರೇ ನೋಡಬನ್ನಿರೇ ||ಪಲ್ಲವಿ|| ಕೆಂಗಣ್ಣ ಮೀನನಾಗಿ ನಮ್ಮ ರಂಗ ಗುಂಗಾಡಿ ಸೋಮನ್ನ ಕೊಂದಾನ್ಮ್ಯ ಗುಂಗಾಡಿ ಸೋಮನ್ನ ಕೊಂದು ವೇದವ ಬಂಗಾರದೊಡಲನಿಗಿತ್ತಾನ್ಮ್ಯ ದೊಡ್ಡ ಮಡುವಿನೊಳಗೆ ನಮ್ಮ ರಂಗ

ಇನ್ನೇನಿನ್ನೇನು?ಇನ್ನೇನಿನ್ನೇನು?

ರಾಗ: ಸೌರಾಷ್ಟ್ರ ತಾಳ: ಝಂಪೆ ಮಾಯದ ಸಂಸಾರ ಮಮಕಾರ ಹಿಂಗಿತು ಇನ್ನೇನಿನ್ನೇನು ||ಪ|| ತೋಯಜಾಕ್ಷನ ದಯ ನಮಗೀಗ ದೊರಕಿತು ಇನ್ನೇನಿನ್ನೇನು ||ಅ.ಪ|| ಭಾವಿಸಿದ್ದೆಲ್ಲವು ಭೂಮಿಪಾಲಾದ ಮೇಲಿನ್ನೇನಿನ್ನೇನು ಸೇವಿಸಿದ ಗಣಪ ಮಂಗನಾದ ಮೇಲಿನ್ನೇನಿನ್ನೇನು ||೧|| ಒತ್ತಿ ಹಿಡಿದ ಕಂಬ ವ್ಯರ್ಥವಾದ ಮೇಲಿನ್ನೇನಿನ್ನೇನು ಜತ್ತಾದ