`ಯುಗಾದಿ’ ದಿನ ಗೆಳತಿಯಿಂದ ಬಂದಿದ್ದ ಶುಭಾಶಯ ಪತ್ರದಲ್ಲಿ ಬೇಂದ್ರೆಯವರ ಕವಿತೆಯ ಈ ಸಾಲುಗಳು ತಂಪಾದ ನಗು ಬೀರುತ್ತಿದ್ದವು.
ಪ್ರಾರ್ಥನೆ
ಲೇಸೆ ಕೇಳಿಸಲಿ ಕಿವಿಗೆ,
ನಾಲಿಗೆಗೆ ಲೇಸೆ ನುಡಿದು ಬರಲಿ.
ಲೇಸೆ ಕಾಣಿಸಲಿ ಕಣ್ಗೆ,
ಜಗದಲಿ ಲೇಸೆ ಹಬ್ಬುತಿರಲಿ.
ಲೇಸೆ ಕೈಗಳಿಂದಾಗುತಿರಲಿ.
ತಾ ಬರಲಿ ಲೇಸು ನಡೆದು.
ಲೇಸನುಂಡು, ಲೇಸುಸುರಿ,
ಇಲ್ಲಿರಲಿ ಲೇಸೆ ಮೈಯ್ಯ ಪಡೆದು.
-ಅಂಬಿಕಾತನಯದತ್ತ
(ಗಂಗಾವತರಣ ಕವನ ಸಂಕಲನದಿಂದ)
ಎಂಥಹ ಸುಂದರ ಆಶಯ ಹೊತ್ತ ಶುಭಾಶಯ! ಎಲ್ಲೆಡೆಯು ಲೇಸೇ ಲೇಸಾಗಿ ಮೆರೆಯುವಾಗ, ಕೆಟ್ಟತನಕ್ಕೆ ಹಾಸುವರಾರು ಕೆಂಪುಹಾಸು? ಎಲ್ಲರೂ ಒಳ್ಳೆಯ ಮಾತಾಡುತ್ತಾ, ಒಳ್ಳೆಯದನ್ನು ಮಾಡುತ್ತಾ, ಒಳ್ಳೆಯವರಾಗಿಹೋದರೆ ಕೆಟ್ಟವರಿಗಾದರೂ ಏನು ಕೆಲಸ? ಅವರು ಏನಾದರೂ ಸಿಗುವುದೋ ಎಂದು ಅತ್ತಿತ್ತ ನೋಡಿ, ಏನೂ ಸಿಗದೆ, ಹೊತ್ತು ಹೋಗದೆ, ಕೊನೆಗೆ ಒಳ್ಳೆಯವರೇ ಆಗಬೇಕೇನೊ – ಅಣ್ಣಾವ್ರ ಸಿನಿಮಾದಲ್ಲಿ ಚೆನ್ನಾಗಿ ಒದೆ ತಿಂದ ಮೇಲೆ ಒಳ್ಳೆಯವರಾಗುವ ಕೆಟ್ಟವರ ಹಾಗೆ.
ಹೊಸ ವರ್ಷ ನಿಮ್ಮೆಲ್ಲರಿಗೂ ಒಳಿತು ಮಾಡಲಿ, ಒಳಿತನ್ನೇ ನೀಡಲಿ. ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ ಎಂಬ ನಂಬಿಕೆ ನಿಜವಾಗುತ್ತಿರಲಿ. ಶುಭಾಶಯ ಕಳಿಸಿದ ಒಳ್ಳಯ ಮನಸಿನ ಗೆಳತಿಗೆ ಶುಭವಾಗಲಿ.
ಖರ ನಾಮ ಸಂವತ್ಸರವು “ಲೇಸೆ ಕೇಳಿಸಲಿ…” ಆಶಯದೊಂದಿಗೆ ಪ್ರಾರಂಭವಾಗುತ್ತಿರುವದು ಸಂತಸದ ವಿಷಯ. ಯುಗಾದಿಯ ಶುಭಾಶಯಗಳು.
ಕಾಕಾ, ನಿಮಗೂ ಯುಗಾದಿಯ ಶುಭಾಶಯಗಳು.