ತೇನ ವಿನಾ – ಕುವೆಂಪು

ರಚನೆ : ಕುವೆಂಪು

ತೇನ ವಿನಾ ತೇನ ವಿನಾ
ತೃಣಮಪಿ ನ ಚಲತಿ ತೇನ ವಿನಾ
ಮಮತೆಯ ಬಿಡು, ಹೇ ಮೂಢಮನಾ,
ಮೂಢಮನಾ, ಹೇ ಮೂಢಮನಾ !

ರವಿಗಿಲ್ಲದ ಭಯ, ಶಶಿಗಿಲ್ಲದ ಭಯ,
ತಾರಾನಿವಹಕೆ ಇರದ ಭಯ,
ನಿನಗೇತಕೆ ಬಿಡು, ಅಣು ! ಶ್ರದ್ಧೆಯನಿಡು;
ನಿನ್ನನೆ ನೈವೇದ್ಯವ ನೀಡು !
ತೇನ ವಿನಾ . . .

ಎಲ್ಲೆಲ್ಲಿಯು ಕಯ್, ಎಲ್ಲೆಲಿಯು ಕಾಲ್
ಎಲ್ಲೆಲ್ಲಿಯು ಕಣ್ ತಾನಾದ
ಸತ್ ಚಿತ್ ಶಕ್ತಿಯ ಆನಂದವಿರಲ್
ಬಿಡು ಏತಕೆ ನಿನಗೆ ವಿಷಾದ !
ತೇನ ವಿನಾ . . .

(‘ಅಗ್ನಿಹಂಸ’ ಸಂಕಲನದಿಂದ)

4 thoughts on “ತೇನ ವಿನಾ – ಕುವೆಂಪು”

  1. sunaath says:

    ಕುವೆಂಪು ರಚಿತ ಈ ಕವನದಲ್ಲಿ ಭಕ್ತಿ ಹಾಗು ಶ್ರದ್ಧೆ ಸಾಂದ್ರವಾಗಿರುವದನ್ನು ಗಮನಿಸಬಹುದು. ತ್ರಿವೇಣಿಯವರಿಗೆ ಧನ್ಯವಾದಗಳು.

  2. sritri says:

    ಕಾಕಾ, ನಿಮ್ಮ ಧನ್ಯವಾದವನ್ನು ,ಈ ಕವಿತೆಯನ್ನು `ತುಳಸಿವನ’ದ ಸಂಗ್ರಹಕ್ಕೆಂದು ಕಳಿಸಿಕೊಟ್ಟ ಶಶಿಕಲಾ ಅವರಿಗೆ ತಲುಪಿಸುತ್ತಿದ್ದೇನೆ.

  3. ತುಳಸಿಯಮ್ಮಾ,

    ತುಂಬಾ ಇಷ್ಟವಾಯ್ತು ಕವಿತೆ. ಪೂರ್ತಿ ಸಿಕ್ಕಿರ್ಲಿಲ್ಲ… ನಿಮ್ಮಲ್ಲಿ ದೊರಕಿತು. ಧನ್ಯವಾದಗಳು.

    ಪ್ರೀತಿಯಿಂದ,
    ತೇಜು.

  4. sritri says:

    ತೇಜಸ್ವಿನಿ, ನನಗಿಷ್ಟವಾದ ಕವಿತೆಗಳನ್ನು ಹಂಚಿಕೊಳ್ಳುವ ಖುಷಿ ನನ್ನದು. ಧನ್ಯವಾದದ ಅಗತ್ಯವಿಲ್ಲ. 🙂 ಈ ಕವಿತೆ ಹಾಡಿನ ರೂಪದಲ್ಲಿ ಕೇಳಲು ಕೂಡ ಬಹಳ ಚೆನ್ನಾಗಿದೆ.

Leave a Reply to sritri Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಮಾತು – ಚೆನ್ನವೀರ ಕಣವಿಮಾತು – ಚೆನ್ನವೀರ ಕಣವಿ

ಕವಿ : ಚೆನ್ನವೀರ ಕಣವಿ ಮುಂಜಾವದಲಿ ಹಸಿರು ಹುಲ್ಲು ಮಕಮಲ್ಲಿನಲಿ ಪಾರಿಜಾತವು ಹೂವು ಸುರಿಸಿದಂತೆ, ಮುಟ್ಟಿದರೆ ಮಾಸುತಿಹ ಮಂಜುಹನಿ ಮುತ್ತಿನಲಿ ಸೃಷ್ಟಿ ಸಂಪೂರ್ಣತೆಯ ಬಿಂಬಿಪಂತೆ ; ಮೆಲ್ಲೆದೆಯ ಸವಿಯೊಲುಮೆ ಕರಗಿ ಕಂಬನಿಯಾಗಿ ಹೆಣ್ಣ ಕಣ್ಣಂಚಿನಲಿ ತುಳುಕುವಂತೆ, ಸುಳಿಗಾಳಿಯೊಂದಿನಿತು ಸೂಸಿ ಬಂದರೂ ಸಾಕು;

ಮಲ್ಲಿಗೆ – ಜಿ.ಎಸ್.ಶಿವರುದ್ರಪ್ಪಮಲ್ಲಿಗೆ – ಜಿ.ಎಸ್.ಶಿವರುದ್ರಪ್ಪ

ಕವನ – ಮಲ್ಲಿಗೆ ಕವಿ – ಜಿ.ಎಸ್.ಶಿವರುದ್ರಪ್ಪ ನೋಡು ಇದೋ ಇಲ್ಲರಳಿ ನಗುತಿದೆ ಏಳು ಸುತ್ತಿನ ಮಲ್ಲಿಗೆ ಇಷ್ಟು ಹಚ್ಚನೆ ಹಸುರ ಗಿಡದಿಂ- ದೆಂತು ಮೂಡಿತೋ ಬೆಳ್ಳಗೆ ! ಮೇಲೆ ನಭದಲಿ ನೂರು ತಾರೆಗ- ಳರಳಿ ಮಿರುಗುವ ಮುನ್ನವೆ ಬೆಳ್ಳಿಯೊಂದೇ ಬೆಳಗುವವಂದದಿ