ಅಂದಿನಿಂದ ಇಂದಿನವರೆಗೂ
ಜೊತೆ ಜೊತೆಯಾಗೇ
ನಡೆದುಬ೦ದೆವಲ್ಲಾ
ಬದುಕ ಹಿರಿದಾರಿಯುದ್ದಕ್ಕೂ….
ಪಯಣದ ಹಾದಿಯಲ್ಲಿ –
ಕಂಡಿದ್ದು, ಉಂಡಿದ್ದು ನೂರಾರು.
ತಂಪಿನ ನೆಳಲಲ್ಲಿ ಸುಖಿಸಿದ್ದುಂಟು,
ಬೆಂಕಿಯ ಮಡಿಲಲ್ಲಿ ಬಳಲಿದ್ದುಂಟಾದರೂ
ಅದಾವುದೂ ಮರೆಯದ ನೆನಪಾಗುಳಿಯದೆ,
ಅಂದು ನೂರು ನಿಟ್ಟುಸಿರುಗಳ ಮರೆಸಿ
ನಾವು ನಕ್ಕ ಆ ಒ೦ದೊ೦ದು ನಗೆಯೂ
ದೈತ್ಯ ಮರದ ತೊಗಟೆಯ ಸೀಳಿ
ಮೆಲ್ಲಮೆಲ್ಲಗೆ ಇಣುಕುವ ಹಸಿರು ಚಿಗುರುಗಳಾಗಿ
ಕಣ್ಣು ಮಿಟುಕಿಸಿ, ಇಂದಿಗೂ ನಿನ್ನ ಕಾಡುವುದಿಲ್ಲವೇ?
***