ಚಿತ್ರ – ಚಿಗುರಿದ ಕನಸು- (೨೦೦೩)
ಸಾಹಿತ್ಯ – ಜಯಂತ್ ಕಾಯ್ಕಿಣಿ
ಸಂಗೀತ – ವಿ.ಮನೋಹರ್
ಗಾಯಕ – ಡಾ.ರಾಜ್‍ಕುಮಾರ್
ಬಂಧುವೇ.. ಓ ಬಂಧುವೇ…
ಗಂಗವ್ವಾ ಗಂಗಾಮಾಯಿ ಮಮತೆಯ ಧಾರೆ
ಗುರಿಯಿರದೆ ಅಲೆವ ನನ್ನ ಮೂಲವ ತೋರೆ
ಯಾವುದೋ ದಡದಿಂದ ಕರೆಯುತಿದೆ ಅನುಬಂಧ
ಎಲ್ಲಿಯದೋ ಈ ಸೆಳೆತ? ||ಪಲ್ಲವಿ||
ಕಾಡಿನ ಮೌನ ಗಾಳಿಯಲಿ
ನಾಡಿನ ಮಾತು ಧೂಳಿಯಲಿ
ಸಂತೆಯ ವೇಷಕೆ ಉಂಟೇ ಕೊನೆ
ಸಂಜೆಗೆ ಮರಳಲು ಎಲ್ಲಿ ಮನೆ?
ಪ್ರೀತಿಯ ರೆಕ್ಕೆ ಬೀಸಿ ಬಾನೆಲ್ಲ ಹಾರಿ
ತೇಲುವ ಮನಸಿಗಿಲ್ಲಿ ಬಾಳೆಲ್ಲ ದಾರಿ
ಕಾಣದ ನೆಲದಿಂದ ಮಣ್ಣಿನ ಹೊಸ ಗಂಧ
ಯಾವುದೋ ಈ ಸೆಳೆತ? ||೧||
ನಡೆಯದೆ ದಾರಿ ದಕ್ಕೋದಿಲ್ಲ
ಕೇಳದೆ ಏನೂ ಸಿಕ್ಕೋದಿಲ್ಲ
ಪ್ರೀತಿಯ ಹನಿ ಪ್ರತಿ ಕಂಗಳಲು
ಭಾವವು ಇಲ್ಲದೆ ಎಲ್ಲಾ ಕಲ್ಲು
ಕಲ್ಲಾಗಿ ನಿಂತ ನಮ್ಮ ಶಾಪವ ನೀಗು
ಹುಲ್ಲನು ಚಿಗುರಿಸೋ ಸ್ಪರ್ಶವ ನೀಡು
ತೀರದ ಈ ದಾಹ
ಅಲೆಗಳ ಆರೋಹ
ಎಲ್ಲೀಗೆ ಈ ಸೆಳೆತ? ||೨||
***