ಹೂವು ಹಣ್ಣು -೧೯೯೬
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ
ಗಾಯಕ: ಸಿ. ಅಶ್ವಥ್ ಮತ್ತು ಸಂಗಡಿಗರು
ಹೊಯ್ಯಾರೆ ಹೊಯ್ಯ ಹೊಯ್ಯಾರೆ ಹೊಯ್ಯ
ಹೊಯ್ಯಾರೆ ಹೊಯ್ಯಾರೆ ಹೊಯ್
ನಿಂಗಿ ನಿಂಗಿ ನಿಂಗಿ ನಿಂಗಿ
ನಿದ್ದಿ ಕದ್ದೀಯಲ್ಲೆ ನಿಂಗಿ
ನಿಂಗಿ ನಿಂಗಿ ನಿಂಗಿ ನಿಂಗಿ
ಆಸಿ ಎದ್ದೀತಲ್ಲೆ ನಿಂಗಿ
ಚಂದಾನ ಚಂದ್ರ – ಹೊಯ್ಯಾರೆ ಹೊಯ್ಯ
ಭೂಮಿಗ ಲಾಂದ್ರ – ಹೊಯ್ಯಾರೆ ಹೊಯ್ಯ
ಆಗ್ಯಾನ ನೋಡಲ್ಲಿ |
ವಾರಿ ನೋಟ ಬೀರುವಾಕಿ
ನಾಚಿಕೊಂಡು ನಿಂತಿ ಯಾಕ ?
ಬಾಳಿ ದಿಂಡ ಹೋಲುವಾಕಿ ಬಾಗಿಲಾಗ ಇರಬೇಕ ?
ಯಾಕ ಹಿಂಗ ಕಾಡುತಿ?
ನೋಯುಹಂಗೆ ಮಾಡುತಿ?
ಬಿಲ್ಲಿನಂಗ ತಾಗುತಿ
ಹೆಣ್ಣ ಬಾಣ ಹೂಡುತಿ
ಲಾ ಲ ಲ ಲಾಲ ಲಲ್ಲಲಲ್ಲ……. ಲಾಲ
ನಿದ್ದಿಯೆಂಬುದು ಒಂದು ದೇವತಿ
ಪ್ರೇಮಿಗಳಿಗಾಕಿ ಸವತಿ
ಏನ ಗರತಿ ನಿನ್ನ ಸವತಿ
ಬಂದರೀಗ ಏನ ಮಾಡುತಿ?
ಯಾಕ ತಡ ಮಾಡುತಿ?
ವ್ಯಾಳಿ ಮುಖ ನೋಡುತಿ?
ಚಂದ್ರಮುಖಿ ಹೋಲುತಿ
ಯಾವ ಸುಖ ಬೇಡುತಿ
ಲಾ ಲ ಲಾಲ ಲಲ್ಲಲಲ್ಲ……. ಲಾಲ
* * *
ಈ ಹಾಡು ಕೇಳ್ತಿರ್ತೀನಿ. ಬಹಳ ಸೊಗಸಾಗಿದೆ. ಸಾಹಿತ್ಯ ಒದಗಿಸಿದುದಕ್ಕೆ ಧನ್ಯವಾದಗಳು.
ಈ ಹಾಡು ನನಗಿಷ್ಟ ಅನ್ನೋದು ನಿಮಗ್ಹೇಗೆ ತಿಳಿಯಿತು?
ಇದನ್ನು ಕಾಪಿ ಮಾಡ್ಕೊಂಡಿದ್ದೀನಿ. ಕಾಪಿ ರೈಟ್ ಇಲ್ವಲ್ಲ!
ಅಸತ್ಯಾನ್ವೇಷಿಗಳೇ, ಕಾಪಿ ಮಾಡ್ಕೊಂಡಿದ್ದಾಗಿದ್ರೆ ಇನ್ನು ರೈಟ್ ಹೇಳಿ. (ಸುಮ್ನೆ ತಮಾಷೆಗೆ) ಇದು ಸೀರಿಯಸ್ ಸೈಟು.
ಅಸತ್ಯಾನ್ವೇಷಿಗಳೇ, ಕಾಪಿರೈಟ್ ಭಯವಿಲ್ಲದೆ ಹಾಡು ಹಾಡಿಕೊಂಡು ಖುಷಿಪಡಿ.