ಹೂವು ಹಣ್ಣು – ನಿಂಗಿ ನಿಂಗಿ

ಹೂವು ಹಣ್ಣು -೧೯೯೬
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ
ಗಾಯಕ: ಸಿ. ಅಶ್ವಥ್ ಮತ್ತು ಸಂಗಡಿಗರು

ಹಾಡು ಕೇಳಿ – 

ಹೊಯ್ಯಾರೆ ಹೊಯ್ಯ ಹೊಯ್ಯಾರೆ ಹೊಯ್ಯ
ಹೊಯ್ಯಾರೆ ಹೊಯ್ಯಾರೆ ಹೊಯ್

ನಿಂಗಿ ನಿಂಗಿ ನಿಂಗಿ ನಿಂಗಿ
ನಿದ್ದಿ ಕದ್ದೀಯಲ್ಲೆ ನಿಂಗಿ
ನಿಂಗಿ ನಿಂಗಿ ನಿಂಗಿ ನಿಂಗಿ
ಆಸಿ ಎದ್ದೀತಲ್ಲೆ ನಿಂಗಿ

ಚಂದಾನ ಚಂದ್ರ – ಹೊಯ್ಯಾರೆ ಹೊಯ್ಯ
ಭೂಮಿಗ ಲಾಂದ್ರ – ಹೊಯ್ಯಾರೆ ಹೊಯ್ಯ
ಆಗ್ಯಾನ ನೋಡಲ್ಲಿ |

ವಾರಿ ನೋಟ ಬೀರುವಾಕಿ
ನಾಚಿಕೊಂಡು ನಿಂತಿ ಯಾಕ ?
ಬಾಳಿ ದಿಂಡ ಹೋಲುವಾಕಿ ಬಾಗಿಲಾಗ ಇರಬೇಕ ?
ಯಾಕ ಹಿಂಗ ಕಾಡುತಿ?
ನೋಯುಹಂಗೆ ಮಾಡುತಿ?

ಬಿಲ್ಲಿನಂಗ ತಾಗುತಿ
ಹೆಣ್ಣ ಬಾಣ ಹೂಡುತಿ
ಲಾ ಲ ಲ ಲಾಲ ಲಲ್ಲಲಲ್ಲ……. ಲಾಲ

ನಿದ್ದಿಯೆಂಬುದು ಒಂದು ದೇವತಿ
ಪ್ರೇಮಿಗಳಿಗಾಕಿ ಸವತಿ
ಏನ ಗರತಿ ನಿನ್ನ ಸವತಿ
ಬಂದರೀಗ ಏನ ಮಾಡುತಿ?
ಯಾಕ ತಡ ಮಾಡುತಿ?
ವ್ಯಾಳಿ ಮುಖ ನೋಡುತಿ?

ಚಂದ್ರಮುಖಿ ಹೋಲುತಿ
ಯಾವ ಸುಖ ಬೇಡುತಿ
ಲಾ ಲ ಲಾಲ ಲಲ್ಲಲಲ್ಲ……. ಲಾಲ

*          *          *

4 thoughts on “ಹೂವು ಹಣ್ಣು – ನಿಂಗಿ ನಿಂಗಿ”

  1. ಈ ಹಾಡು ಕೇಳ್ತಿರ್ತೀನಿ. ಬಹಳ ಸೊಗಸಾಗಿದೆ. ಸಾಹಿತ್ಯ ಒದಗಿಸಿದುದಕ್ಕೆ ಧನ್ಯವಾದಗಳು.

  2. ಈ ಹಾಡು ನನಗಿಷ್ಟ ಅನ್ನೋದು ನಿಮಗ್ಹೇಗೆ ತಿಳಿಯಿತು?

    ಇದನ್ನು ಕಾಪಿ ಮಾಡ್ಕೊಂಡಿದ್ದೀನಿ. ಕಾಪಿ ರೈಟ್ ಇಲ್ವಲ್ಲ!

  3. ಅಸತ್ಯಾನ್ವೇಷಿಗಳೇ, ಕಾಪಿ ಮಾಡ್ಕೊಂಡಿದ್ದಾಗಿದ್ರೆ ಇನ್ನು ರೈಟ್ ಹೇಳಿ. (ಸುಮ್ನೆ ತಮಾಷೆಗೆ) ಇದು ಸೀರಿಯಸ್ ಸೈಟು.

  4. sritri says:

    ಅಸತ್ಯಾನ್ವೇಷಿಗಳೇ, ಕಾಪಿರೈಟ್ ಭಯವಿಲ್ಲದೆ ಹಾಡು ಹಾಡಿಕೊಂಡು ಖುಷಿಪಡಿ.

Leave a Reply to ಶ್ರೀನಿವಾಸ Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಪ್ರತಾಪ್ – ಪ್ರೇಮ ಬರಹ ಕೋಟಿ ತರಹಪ್ರತಾಪ್ – ಪ್ರೇಮ ಬರಹ ಕೋಟಿ ತರಹ

ಪ್ರತಾಪ್ – ೧೯೯೦ ಸಾಹಿತ್ಯ, ಸಂಗೀತ – ಹಂಸಲೇಖ ಗಾಯಕರು – ಎಸ್. ಪಿ. ಬಾಲಸುಬ್ರಹ್ಮಣ್ಯಮ್, ಚಂದ್ರಿಕಾ ಗುರುರಾಜ್ ಪ್ರೇಮ ಬರಹ …. ಕೋಟಿ ತರಹ ಬರೆದರೆ ಮುಗಿಯದ ಕಾವ್ಯವಿದು ಸವಿದರೆ ಸವೆಯದ ಸಾರವಿದು ಹಾಡಿದರೆ ಮರೆಯದ ಹಾಡು ಇದು ಪ್ರೇಮಾ….

ಬಾ ಮಳೆಯೇ ಬಾ – ಬಿ. ಆರ್. ಲಕ್ಷ್ಮಣರಾವ್ಬಾ ಮಳೆಯೇ ಬಾ – ಬಿ. ಆರ್. ಲಕ್ಷ್ಮಣರಾವ್

ಕವಿ : ಬಿ. ಆರ್. ಲಕ್ಷ್ಮಣರಾವ್ ಚಿತ್ರ: ಆಕ್ಸಿಡೆಂಟ್ ಸಂಗೀತ : ರಿಕಿ ಕೆಜ್ ಗಾಯಕ : ಸೋನು ನಿಗಮ್ ಹಾಡು ಕೇಳಿ ಬಾ ಮಳೆಯೇ ಬಾ, ಅಷ್ಟು ಬಿರುಸಾಗಿ ಬಾರದಿರು ನನ್ನ ನಲ್ಲೆ ಬರಲಾಗದಂತೆ ಅವಳಿಲ್ಲಿ ಬಂದೊಡನೆ ಬಿಡದೆ ಬಿರುಸಾಗಿ

ಪೂಜಾ – ಅನುರಾಗ ಚೆಲ್ಲಿದಳುಪೂಜಾ – ಅನುರಾಗ ಚೆಲ್ಲಿದಳು

ಚಿತ್ರ : ಪೂಜಾ – (೧೯೯೫) ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯಕರು : ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಚಿತ್ರಾ ಹಾಡು ಕೇಳಿ – ಅನುರಾಗ ಚೆಲ್ಲಿದಳು ಹೃದಯಾನ ಗಿಲ್ಲಿದಳು ಹರೆಯದ ಅರಮನೆ ಬಾಗಿಲ ತೆರೆಸಿದಳು ಪ್ರೇಮದ ರಾಜ್ಯದ ಓಲಗ ನಡೆಸಿದಳು ಅನುರಾಗ