ಜೂನ್ ೨೩. ಹಂಸಲೇಖ ಜನ್ಮದಿನ. ಹಂಸಲೇಖ ಅವರಿಗೆ ಹಾರ್ದಿಕ ಶುಭಾಶಯಗಳು!
ಚಿತ್ರ – ಪೋಲಿ ಹುಡುಗ (೧೯೮೯)
ಸಾಹಿತ್ಯ ಮತ್ತು ಸಂಗೀತ –
ಗಾಯಕರು – ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಸಂಗಡಿಗರು
ಚಿತ್ರಕೃಪೆ : ಮೀರಾ ಕೃಷ್ಣ
ಜನನ ಮರಣಗಳೆರಡು ಕುರುಡು
ಮುಂದೆ ಹೋಗದು
ಹಿಂದೆ ಬಾರದು
ನಿಂತಲ್ಲಿ ನಿಲ್ಲದು
ಸ್ನೇಹ ಪ್ರೀತಿಗಳೆರಡು ಕುರುಡು
ದೂರ ಹೋಗದು
ಬೇರೆಯಾಗದು
ಕಣ್ಣಿಗೆ ಕಾಣದು
ನಾಳೆ ಗೊತ್ತಿಲ್ಲದ ಬಾಳಿಗೆ ಈದಿನ
Birth day! Birth day!
ಕುಣಿಯುವ ಸಡಗರ ನಮಗೆ ಇದೆ
ಕುಣಿಸುವ ಡಮರುಗ ಯಾರಲಿದೆ?
ಯಾರಲಿದೆ? ಹೆಣ್ಣಲಿದೆ
ನಲಿಸುವ ರಾಗ
ಒಲಿಸುವ ವೇಗ
ಆ ಹೆಣ್ಣಿನಲ್ಲಿದೆ
ಆ ಕಣ್ಣಿನಲ್ಲಿದೆ
ಆ ನೋಟದಲ್ಲಿದೆ
ಮೈಮಾಟದಲ್ಲಿದೆ||೧||
ನಾಳೆ ಗೊತ್ತಿಲ್ಲದ ಬಾಳಿಗೆ ಈದಿನ
Birth day! Birth day!
ಹೂವಿಗೆ ಪ್ರತಿದಿನ ಜನುಮದಿನ
ಹಾರುವ ದುಂಬಿಗೆ ಏನು ದಿನ?
ಏನು ದಿನ? ಮದುವೆ ದಿನ
ಅರಳುವ ಗುಟ್ಟು ಬಯಲಿಗೆ ಬಿಟ್ಟು
ಬಾರೆ ನಾಳೆ ಎನ್ನದೆ
ಬಾರೆ ವೇಳೆ ಮಾಡದೆ
ಬೇರೆ ರಾಗ ಹಾಡದೆ
ಬಾರೆ ತಾಳ ತಪ್ಪದೆ ||೨||
ನಾಳೆ ಗೊತ್ತಿಲ್ಲದ ಬಾಳಿಗೆ ಈದಿನ
Birth day! Birth day!
***
ಹಂಸಲೇಖಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ಹಂಸದಂತ ಹಾಡುಗಳನ್ನು ಲೇಖನಿಗಿಳಿಸುವವರಿಗೆ ನನ್ನದೂ ಒಂದು ಶುಭಾಶಯ ಸೇರಿಸಿ ಬಿಡಿ ತ್ರಿವೇಣಿಯವರೆ,
ನಾಳೆ ಗೊತ್ತಿಲ್ಲದ ಬಾಳಿಗೆ
ಈದಿನ
ಬರ್ತಡೆ ಬರ್ತಡೆ….
ಸುಂದರವಾದ ಸಾಲುಗಳು!
ಹಂಸ ಅವರಿಗೆ ಮತ್ತೊಮ್ಮೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
~ ಮನ
ಅಸತ್ಯಾನ್ವೇಷಿಗಳೇ, ಹಂಸದಂತ ಹಾಡು ಲೇಖನಿಯಲ್ಲಿ ಇಳಿಯುವುದಾದರೂ ಹೇಗೆ ಸಾಧ್ಯ? 🙂
“ಹಂಸದಂತ” ಹಾಡು?
“ಹಸ್ತಿದಂತ” ಕೇಳಿದ್ದೆ. ಹಂಸಕ್ಕೂ ದಂತ? ಇದೆಂಥ?
ಜನ್ಮದಿನ ಶುಭಾಶಯಗಳಿಗಾಗಿ Happy Birthday ಹಾಡನ್ನೇ ಆರಿಸಿರುವ
ಜಾಣತನಕ್ಕಾಗಿ ಅಭಿನಂದನೆಗಳು. ಹಂಸಲೇಖರಿಗೆ ನನ್ನದೂ ಶುಭಾಶಯಗಳು.
– ಹಂಸಕ್ಕೂ ದಂತ? ಇದೆಂಥ?
ಹಂಸಲೇಖರ ದಂತ ಅನ್ನುವ ಅರ್ಥವಂತೂ ಅಲ್ಲ 🙂