ಪೋಲಿ ಹುಡುಗ – ಹಂಸಲೇಖ

 ಜೂನ್ ೨೩. ಹಂಸಲೇಖ ಜನ್ಮದಿನ. ಹಂಸಲೇಖ ಅವರಿಗೆ ಹಾರ್ದಿಕ ಶುಭಾಶಯಗಳು!

ಚಿತ್ರ – ಪೋಲಿ ಹುಡುಗ (೧೯೮೯)
ಸಾಹಿತ್ಯ ಮತ್ತು ಸಂಗೀತ –
ಗಾಯಕರು – ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಸಂಗಡಿಗರು
ಹಂಸಲೇಖ
ಚಿತ್ರಕೃಪೆ : ಮೀರಾ ಕೃಷ್ಣ

ಜನನ ಮರಣಗಳೆರಡು ಕುರುಡು
ಮುಂದೆ ಹೋಗದು
ಹಿಂದೆ ಬಾರದು
ನಿಂತಲ್ಲಿ ನಿಲ್ಲದು
ಸ್ನೇಹ ಪ್ರೀತಿಗಳೆರಡು ಕುರುಡು
ದೂರ ಹೋಗದು
ಬೇರೆಯಾಗದು
ಕಣ್ಣಿಗೆ ಕಾಣದು

ನಾಳೆ ಗೊತ್ತಿಲ್ಲದ ಬಾಳಿಗೆ ಈದಿನ
Birth day! Birth day!

ಕುಣಿಯುವ ಸಡಗರ ನಮಗೆ ಇದೆ
ಕುಣಿಸುವ ಡಮರುಗ ಯಾರಲಿದೆ?
ಯಾರಲಿದೆ? ಹೆಣ್ಣಲಿದೆ
ನಲಿಸುವ ರಾಗ
ಒಲಿಸುವ ವೇಗ
ಆ ಹೆಣ್ಣಿನಲ್ಲಿದೆ
ಆ ಕಣ್ಣಿನಲ್ಲಿದೆ
ಆ ನೋಟದಲ್ಲಿದೆ
ಮೈಮಾಟದಲ್ಲಿದೆ||೧||

ನಾಳೆ ಗೊತ್ತಿಲ್ಲದ ಬಾಳಿಗೆ ಈದಿನ
Birth day! Birth day!

ಹೂವಿಗೆ ಪ್ರತಿದಿನ ಜನುಮದಿನ
ಹಾರುವ ದುಂಬಿಗೆ ಏನು ದಿನ?
ಏನು ದಿನ? ಮದುವೆ ದಿನ
ಅರಳುವ ಗುಟ್ಟು ಬಯಲಿಗೆ ಬಿಟ್ಟು
ಬಾರೆ ನಾಳೆ ಎನ್ನದೆ
ಬಾರೆ ವೇಳೆ ಮಾಡದೆ
ಬೇರೆ ರಾಗ ಹಾಡದೆ
ಬಾರೆ ತಾಳ ತಪ್ಪದೆ ||೨||

ನಾಳೆ ಗೊತ್ತಿಲ್ಲದ ಬಾಳಿಗೆ ಈದಿನ
Birth day! Birth day!

***

7 thoughts on “ಪೋಲಿ ಹುಡುಗ – ಹಂಸಲೇಖ”

  1. ಹಂಸಲೇಖಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

  2. ಹಂಸದಂತ ಹಾಡುಗಳನ್ನು ಲೇಖನಿಗಿಳಿಸುವವರಿಗೆ ನನ್ನದೂ ಒಂದು ಶುಭಾಶಯ ಸೇರಿಸಿ ಬಿಡಿ ತ್ರಿವೇಣಿಯವರೆ,

  3. ಮನ says:

    ನಾಳೆ ಗೊತ್ತಿಲ್ಲದ ಬಾಳಿಗೆ
    ಈದಿನ
    ಬರ್ತಡೆ ಬರ್ತಡೆ….

    ಸುಂದರವಾದ ಸಾಲುಗಳು!
    ಹಂಸ ಅವರಿಗೆ ಮತ್ತೊಮ್ಮೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

    ~ ಮನ

  4. sritri says:

    ಅಸತ್ಯಾನ್ವೇಷಿಗಳೇ, ಹಂಸದಂತ ಹಾಡು ಲೇಖನಿಯಲ್ಲಿ ಇಳಿಯುವುದಾದರೂ ಹೇಗೆ ಸಾಧ್ಯ? 🙂

  5. SJ says:

    “ಹಂಸದಂತ” ಹಾಡು?

    “ಹಸ್ತಿದಂತ” ಕೇಳಿದ್ದೆ. ಹಂಸಕ್ಕೂ ದಂತ? ಇದೆಂಥ?

  6. sunaath says:

    ಜನ್ಮದಿನ ಶುಭಾಶಯಗಳಿಗಾಗಿ Happy Birthday ಹಾಡನ್ನೇ ಆರಿಸಿರುವ
    ಜಾಣತನಕ್ಕಾಗಿ ಅಭಿನಂದನೆಗಳು. ಹಂಸಲೇಖರಿಗೆ ನನ್ನದೂ ಶುಭಾಶಯಗಳು.

  7. sritri says:

    – ಹಂಸಕ್ಕೂ ದಂತ? ಇದೆಂಥ?

    ಹಂಸಲೇಖರ ದಂತ ಅನ್ನುವ ಅರ್ಥವಂತೂ ಅಲ್ಲ 🙂

Leave a Reply to sunaath Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಆಕಸ್ಮಿಕ – ಬಾಳುವಂತ ಹೂವೆಆಕಸ್ಮಿಕ – ಬಾಳುವಂತ ಹೂವೆ

ಚಿತ್ರ – ಆಕಸ್ಮಿಕ – ೧೯೯೩ ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕ – ಡಾ. ರಾಜ್‍ಕುಮಾರ್ ಹಾಡು ಕೇಳಿ  ಬಾಳುವಂತ ಹೂವೆ ಬಾಡುವಾಸೆ ಏಕೆ ಹಾಡುವಂತ ಕೋಗಿಲೆಯೆ ಅಳುವ ಆಸೆ ಏಕೆ ಕವಲು ದಾರಿಯಲ್ಲಿ ಬಾಳು ಸಾಧ್ಯವೇ ಅವಳಿ

ಕುರುಬರೊ ನಾವು ಕುರುಬರೊಕುರುಬರೊ ನಾವು ಕುರುಬರೊ

ರಚನೆ : ನಾಗಲಿಂಗಸ್ವಾಮಿ ಆಲ್ಬಂ : ಘಮ ಘಮ ಹಾಡು ಕೇಳಿ:- ಕುರುಬರೊ ನಾವು ಕುರುಬರೊ ಏನು ಬಲ್ಲೆ ಬರೀ ಒಳಕಾರುಬಾರು ನೂರಾರು ಸೊಕ್ಕಿದ ಕುರಿ ಮೇಯ್ಸಿಕೊಂಡು ಸೆಳೆದಂತೆ ಬಂದೇವು ನಮ್ಮ ಕುರಿಹಿಂಡು ಏಳು ಸುತ್ತಿನ ಬೇಲಿ ಗುಟ್ಟಾಗಿ ಹಚ್ಚಿ ಇಟ್ಟೇವಿ

AK-47 – ಕಡಲೋ ಕಣ್ಕಡಲೋAK-47 – ಕಡಲೋ ಕಣ್ಕಡಲೋ

ಚಿತ್ರ – AK-47 – (1999) ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕರು – ಚಿತ್ರ,ಹರಿಹರನ್ ಹಾಡು ಕೇಳಿ  ಕಡಲೋ ಕಡಲೋ ಕಣ್ ಕಡಲೋ ಮುಗಿಲೋ ಮುಗಿಲೋ ಮನ ಮುಗಿಲೋ ಕಡಲಲ್ಲೋ ಮುಗಿಲಲ್ಲೋ ನೀ ನನ್ನ ತೇಲಿಸು ಕಡಲಲ್ಲೋ ಮುಗಿಲಲ್ಲೋ ನೀ