ಸಾಹಿತ್ಯ – ಕಲ್ಯಾಣ್
ಸಂಗೀತ – ಮನೋಮೂರ್ತಿ
ಗಾಯಕಿ – ಚಿತ್ರ
ಸಂಗೀತ – ಮನೋಮೂರ್ತಿ
ಗಾಯಕಿ – ಚಿತ್ರ
ಸುಂದರ ಸುಂದರ ಲೋಕವಿದು
ಸರಿಗಮಗಳೇ ಇಲ್ಲಿ ಇಂಚರ
ಸೂರ್ಯ ಚಂದ್ರ ಚುಕ್ಕಿಗಳೇ
ಈ ಪ್ರಕೃತಿಗೊಂದು ಉಂಗುರ
ಹಗಲಿಗೆ ಬೆಳಕಿನ ಪಲ್ಲವಿ
ಇರುಳಿಗೆ ನೆರಳಿನ ಪಲ್ಲವಿ
ಬೆಳಕು ನೆರಳಿನ ನಡುವಲಿ
ಈ ಕಾಲವೇ ಪ್ರೀತಿಯ ಪಲ್ಲವಿ
ನೂರು ದಿಕ್ಕುಗಳು ನೂರು ದಾರಿಗಳು
ನಡುವಲಿ ನಮ್ಮ ಪಯಣ
ನೂರು ಮನಸುಗಳು ನೂರು ಭಾವಗಳು
ಒಳಗಿದೆ ಚೆಲುವಿನ ಕವನ
ನೂರು ತವಕಗಳು ನೂರು ಪುಳಕಗಳು
ಬೆರೆತರೆ ಒಂದು ಮಿಲನ
ನೂರು ಭಾಷೆಗಳು ನೂರು ವೇಷಗಳು
ಒಲಿದರೆ ಒಲವಿನ ಜನನ
ಜಗವೇ ಸಂಗೀತದ ಬಳುವಳಿಯು
ಹಾಡಬೇಕು, ಆಸರೆ ಬೇಕು, ಆಲಂಗಿಸಲೇ ಬೇಕು ||೧||
ಯಾರು ಎಲ್ಲಿರಲಿ ಹೇಗೆ ನಡೆದಿರಲಿ
ಕನಸೇ ನಮ್ಮ ಜೊತೆಯು
ನಾಳೆ ಹಾದಿಯಲಿ ಹಳೆಯ ನೆನಪಿರಲಿ
ನಗುವೇ ನಮ್ಮ ಕತೆಯು
ಯಾವ ಹಾಡುಗಳು
ಹೇಗೆ ಸ್ಪಂದಿಸಲಿ
ಅದುವೇ ನಮ್ಮ ಕಲೆಯು
ಯಾವ ಋತುಗಳು ಹೇಗೆ ತಿರುಗಲಿ
ಅಲ್ಲೇ ನಮ್ಮ ನೆಲೆಯು
ಸ್ನೇಹ ಹೃದಯದ ಚಿಲಿಪಿಲಿಯೋ
ದೃಶ್ಯವಿರಲಿ, ಅದೃಶ್ಯವಿರಲಿ
ಆನಂದಿಸಲೇ ಬೇಕು ||೨||
* * *