ತೂಗಿರೆ ರಾಯರ ತೂಗಿರೆ ಗುರುಗಳ – ಜಗನ್ನಾಥ ದಾಸರು

ತೂಗಿರೆ ರಾಯರ ತೂಗಿರೆ ಗುರುಗಳ ತೂಗಿರೆ ಯತಿಕುಲ ತಿಲಕರ ತೂಗಿರೆ ಯೋಗಿಂದ್ರ ಕರಕಮಲ ಪೂಜ್ಯರ ತೂಗಿರೆ ಗುರು ರಾಘವೇಂದ್ರರ|| ಕುಂದಣಮಯವಾದ ಚಂದದ ತೊಟ್ಟಿಲದೊಳ್ ಅಂದದಿ ಮಲಗ್ಯಾರೆ ತೂಗಿರೆ ನಂದಾನಕಂದ ಮುಕುಂದ ಗೋವಿಂದನ ಆನಂದದಿ ಭಜಿಪರ ತೂಗಿರೆ||-1-|| ಯೋಗಾನಿದ್ರೆಯನ್ನು ಬೇಗನೆ ಮಾಡುವ ಯೋಗೀಶವಂದ್ಯರ ತೂಗಿರೆ ಭೋಗೀಶಯನನ ಪಾದ ಯೋಗದಿ ಭಜಿಪರ ಭಾಗವತರನ್ನ ತೂಗಿರೆ ||-2-|| ನೇಮದಿ ತನ್ನನ್ನು Read More

ಸ್ವಾಮಿ ಲಾಲಿ ಭಕ್ತ ಪ್ರೇಮಿ ಲಾಲಿ – ಜಗನ್ನಾಥ ದಾಸರು

ರಚನೆ : ಜಗನ್ನಾಥ ದಾಸರು ಸ್ವಾಮಿ ಲಾಲಿ ಭಕ್ತ ಪ್ರೇಮಿ ಲಾಲಿ | ಕಾವರೆನಿಪ ಗುರುಸಾರ್ವಭೌಮ ಲಾಲಿ ||-1-|| ಇಂದ್ರ ಲಾಲಿ ರಾಘವೇಂದ್ರ ಲಾಲಿ | ಸಾಂದ್ರ ಭಕ್ತ ಕುಮುದ ಪೂರ್ಣಚಂದ್ರ ಲಾಲಿ|| ||-2-|| ತರಣಿ ಲಾಲಿ ನಿಜ ಕರುಣಿ ಲಾಲಿ | ಶರಣ ಜನರ ಕಾವ ಗುಣಪೂರ್ಣ ಲಾಲಿ|| -3-|| ದೇವ ಲಾಲಿ ನಿಜ Read More

ತಿಲ್ಲಾಣ – ಅಂಬಿಕಾತನಯದತ್ತ

೧ ಇದಾವ ಹಾಡು ? ಇದಾವ ತಾಲ ? ಇದಾವ ರಾಗ ? ನನ್ನ ಪುಟ್ಟ ಪುರಂದರ ವಿಠಲಾ ! ೨ ಕೈಯ ತಾರಮ್ಮಯ್ಯಕ್ಕೆ ತೊದಲ ನುಡಿಯ ತಿಲ್ಲಾಣ ; ಬಾಯಬೆಲ್ಲವ ಚಪ್ಪರಿಸಿ ಕಾಯಪರವಶನಾದೆ ; ಇದಾವ ರಸ ? ಇದಾವ ಭಾವ ? ಇದಾವ ಹಾವ ? ನನ್ನ ಪುಟ್ಟ ಪುರಂದರ ವಿಠಲಾ ! Read More

ಆನಂದಮಯಗೆ ಚಿನ್ಮಯಗೆ – ವಾದಿರಾಜರು

ರಚನೆ :- ವಾದಿರಾಜರು ಆನಂದಮಯಗೆ ಚಿನ್ಮಯಗೆ ಶ್ರೀಮನ್ನಾರಾಯಣಗೆ ಆರತಿ ಎತ್ತಿರೆ|| ವೇದವ ತಂದು ಬೆಟ್ಟವ ಪೊತ್ತು ಧರಣಿಯ ಸಾಧಿಸಿ ಕಂಭದಿ ಬಂದವಗೆ| ಭೂದಾನವ ಬೇಡಿ ನೃಪರ ಸಂಹರಿಸಿದ ಆದಿಮೂರುತಿಗೆ ಆರತಿ ಎತ್ತಿರೆ|| ಇಂದುವದನೆ ಕೂಡಿ ಅಡವಿಯ ಚರಿಸಿ ನಂದಗೋಕುಲದಿ ನಲಿದವಗೆ| ಮಂದಗಮನೆಯರ ಮುಂದೆ ನಿರ್ವಾಣದಿ ನಿಂದ ಮೂರುತಿಗೆ ಆರತಿ ಎತ್ತಿರೆ|| ತುರಗವನೇರಿ ದೈತ್ಯರ ಸೀಳಿ ಸುಜನರ Read More

ದಯವಿರಲಿ ದಯವಿರಲಿ ದಾಮೋದರ – ಗೋಪಾಲದಾಸರು

ದಯವಿರಲಿ ದಯವಿರಲಿ ದಾಮೋದರ ರಚನೆ – ಗೋಪಾಲದಾಸರು ದಯವಿರಲಿ ದಯವಿರಲಿ ದಾಮೋದರ ||ಪಲ್ಲವಿ|| ಸಯವಾಗಿ ಬಿಡದೆನ್ನ ಸಾಕುವ ಶ್ರೀಕೃಷ್ಣ ||ಅನು ಪಲ್ಲವಿ|| ಹೋಗುವ ಹಾದಿಯಲಿ ಹೋದ ಹಾಗೆಲ್ಲ ನಾ ಸಾಗುವವ ನಾನಲ್ಲ ನಿನ್ನ ಸ್ಮರಣೆಯ ಬಿಟ್ಟು ತೂಗಿ ತೊಟ್ಟಿಲು ಕೊನೆಗೆ ಸ್ಥಳದಲ್ಲೆ ನಿಲುವಂತೆ ಹ್ಯಾಂಗೆ ನಡೆಸುವಿ ಹಾಂಗೆ ನಡಕೊಂಬೆ ಸ್ವಾಮಿ ||-೧-|| ಬಂದೆನೊ ನಾನಿಲ್ಲಿ ಬಹುಜನ್ಮದ Read More