ಜಗವೆಲ್ಲ ಮಲಗಿರಲು – ದ.ರಾ.ಬೇಂದ್ರೆ

ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ ; ಮಡದಿ ಮಗು ಮನೆ – ಮಾರು ರಾಜ್ಯ – ಗೀಜ್ಯ ಹೊತ್ತಿರುವ ಉರಿಯಲಿ ಆಯಿತಾಜ್ಯ ಹಿಂದೆ ಬಿದ್ದವು ಎಲ್ಲೋ ಕುದುರೆ ಕಾಲಾಳು ಬಿಚ್ಚಿ ಉದಿರಿತು ಎಲ್ಲೋ ಮನದ ಬಾಳು ಹೊರಟ ಹೊರಟೇ ಹೊರಟ, ಹೊರಟನೆತ್ತೋ ಸಾಹಸಿಯ ಗೊತ್ತುಗುರಿ ಅವಗು ಗೊತ್ತೋ ! ಕಾಮ – ಕ್ರೋಧವ ದಾಟಿ, ಮದ – Read More

ಯಾವ ಜನ್ಮದ ಕೆಳೆಯೊ ಕಾಣೆನು – ಮಹಾತ್ಯಾಗ

ಕವಿ –   ಡಾ. ವಿ. ಸೀತಾರಾಮಯ್ಯ( ‘ವಿ.ಸೀ’) ಚಿತ್ರ – ಮಹಾತ್ಯಾಗ ಗಾಯಕಿ – ಪಿ. ಸುಶೀಲ ಯಾವ ಜನ್ಮದ ಕೆಳೆಯೊ ಕಾಣೆನು ಕಂಡ ಕೂಡಲೆ ಒಲಿಸಿತು ಕಣ್ಗೆ ರೂಪವು ಇಳಿವ ಮುನ್ನವೆ ಎದೆಗೆ ಪ್ರೇಮವು ಹರಿಯಿತು ಯಾವ ತಾಯಿಯೊ ಯಾವ ತಂದೆಯೊ ಯಾವ ದೇಶವೊ ನುಡಿಗಳೊ ಎಂತೊ ಎಲ್ಲೋ ಕಾದಕಾವುಗಳಿತ್ತಲೆಮ್ಮನು ಬೆಸೆದವು || 1 Read More

ಭಕುತಿ ಸುಖವೊ ರಂಗ ಮುಕುತಿ ಸುಖವೊ?

ರಚನೆ: ವಿಜಯದಾಸರು ಭಕುತಿ ಸುಖವೊ ರಂಗ ಮುಕುತಿ ಸುಖವೊ ಭಕುತಿ ಸುಖವೊ ಮುಕುತಿ ಸುಖವೊ, ಯುಕುತಿವಂತರೆಲ್ಲ ಹೇಳಿ ||ಪಲ್ಲವಿ|| ಭಕುತಿ ಮಾಡಿದ ಪ್ರಹ್ಲಾದ ಮುಕುತಿಯನ್ನು ಪಡೆದುಕೊಂಡ ಮುಕುತಿ ಬೇಡಿದ ಧ್ರುವರಾಯ ಭಕುತಿಯಿಂದ ಹರಿಯ ಕಂಡ||-೧-|| ಭಕುತಿ ಮಾಡಿದ ಅಜಾಮಿಳನು ಅಂತ್ಯದಲ್ಲಿ ಹರಿಯ ಕಂಡ ಮುಕುತಿಯನು ಬೇಡಿದ ಕರಿರಾಜ ದುರಿತಗಳನು ಕಳೆದುಕೊಂಡ ||-೨-|| ಭಕುತಿ-ಮುಕುತಿದಾತ ನಮ್ಮ ಲಕುಮಿ Read More

ಸುಂದರಮೂರುತಿ ಮುಖ್ಯಪ್ರಾಣ ಬಂದ ನಮ್ಮನೆಗೆ

ಸುಂದರಮೂರುತಿ ಮುಖ್ಯಪ್ರಾಣ ಬಂದ ನಮ್ಮನೆಗೆ ಪ್ರಾಣ ಬಂದ ಮನೆಗೆ ಶ್ರೀರಾಮನಾಮ ಧ್ವನಿಗೆ ||ಪ|| ಕನಕಲಂದುಗೆ ಗೆಜ್ಜೆ ಝಣಝಣರೆನುತ ಝಣಕು ಝಣಕೆಂದು ನಾದವಗೈಯುತ ಪ್ರಾಣ ಬಂದ ಮನೆಗೆ ಶ್ರೀರಾಮನಾಮ ಧ್ವನಿಗೆ||೧|| ತುಂಬುರು ನಾರದ ವೀಣೆ ಬಾರಿಸುತ ರಾಮನಾಮ ಪಾಡುತ ಪ್ರಾಣ ಬಂದ ಮನೆಗೆ ಶ್ರೀರಾಮನಾಮ ಧ್ವನಿಗೆ||೨|| ಪುರಂದರವಿಠಲನ ನೆನೆದು ಪಾಡುತಲಿ ಆಲಿಂಗನ ಮಾಡುತಲಿ ಪ್ರಾಣ ಬಂದ ಮನೆಗೆ Read More

ಆನಂದತೀರ್ಥರಿಗೆ ತುಂಬು ಸಂತಸವೆಂಬ

ಆನಂದತೀರ್ಥ ವಿರಚಿತ ದ್ವಾದಶಸ್ತೋತ್ರ ಕನ್ನಡ ಅನುವಾದ : ಬನ್ನಂಜೆ ಗೋವಿಂದಾಚಾರ್ಯ ಓ ಸಂತಸದ ಸೆಲೆಯೆ ಬಿಡುಗಡೆಯ ನೀವವನೆ | ಓ ಅರಳುದಾವರೆಯ ಕಂಗಳವನೆ ಆನಂದತೀರ್ಥರಿಗೆ ತುಂಬು ಸಂತಸವೆಂಬ | ವರವಿತ್ತ ದೈವತವೆ ನಿನಗೆ ನಮನಂ || ಬಗೆಯ ಸುಂದರಿಯನ್ನು ಎದೆಯಲ್ಲಿ ಹೊತ್ತವನೆ | ಓ ಗೋವಿಂದನೆ ನಿನಗೆ ನಮನಂ || ಬಗೆಯ ಬೆಳಗುವ ಚಂದ್ರ ಸುರರನಾಳುವ Read More