ಕಾಗೆಯೊಂದು ಹಾರಿಬಂದು….

ಹೆಸರೇ ಸುನೇತ್ರ! ಆದರೆ ಅವಳ ಸುಂದರ ಕಣ್ಣುಗಳು ತುಂಬಿಕೊಂಡಿರುತ್ತಿದ್ದುದೇ ಹೆಚ್ಚು. ಈ ಬಾರಿ ಆ ಕಣ್ಣೀರಿಗೆ ಹೆಚ್ಚಿನ ಬೆಲೆಯಿತ್ತು. ಅಲ್ಲಿ, ದೂರದಲ್ಲಿ ಅವಳ ಅಪ್ಪ ತೀರಿಕೊಂಡಿದ್ದರು. ಇಲ್ಲಿ ಅವಳನ್ನು ಶವ ನೋಡಲೂ ಹೋಗದಂತೆ ನಿರ್ಬಂಧದಲ್ಲಿರಿಸಲಾಗಿತ್ತು. ಕೊನೆಗೂ ಕೊಟ್ಟ ಮನೆಯ ಕಟ್ಟುಗಳನ್ನು ಬಿಚ್ಚಿಕೊಂಡು ಹುಟ್ಟಿದ ಮನೆಗೆ ಅವಳು ಕಾಲಿಡುವಹೊತ್ತಿಗೆ ಸುನೇತ್ರಳ ಅಪ್ಪ ಮಗಳಿಗೆ ಕಾಯದೆ ಕೊನೆಯ ಮನೆ Read More

`ಕರಿ ದಿನ’ದ ಬೆಳಗಿಗೆ

`ಯುಗಾದಿ’ ದಿನ ಗೆಳತಿಯಿಂದ ಬಂದಿದ್ದ ಶುಭಾಶಯ ಪತ್ರದಲ್ಲಿ ಬೇಂದ್ರೆಯವರ ಕವಿತೆಯ ಈ ಸಾಲುಗಳು ತಂಪಾದ ನಗು ಬೀರುತ್ತಿದ್ದವು. ಪ್ರಾರ್ಥನೆ ಲೇಸೆ ಕೇಳಿಸಲಿ ಕಿವಿಗೆ, ನಾಲಿಗೆಗೆ ಲೇಸೆ ನುಡಿದು ಬರಲಿ. ಲೇಸೆ ಕಾಣಿಸಲಿ ಕಣ್ಗೆ, ಜಗದಲಿ ಲೇಸೆ ಹಬ್ಬುತಿರಲಿ. ಲೇಸೆ ಕೈಗಳಿಂದಾಗುತಿರಲಿ. ತಾ ಬರಲಿ ಲೇಸು ನಡೆದು. ಲೇಸನುಂಡು, ಲೇಸುಸುರಿ, ಇಲ್ಲಿರಲಿ ಲೇಸೆ ಮೈಯ್ಯ ಪಡೆದು. -ಅಂಬಿಕಾತನಯದತ್ತ Read More

ಭೂಮಿಗೆ

ಎದೆಯು ಬಿರಿದು ಪದವು ಕುಸಿಯೆ ತಬ್ಬಿ ಹಿಡಿದ ತಾಯಿಯೆ ಬೇರುಗಳಲಿ ಜೀವ ತುಂಬಿ ಚಿಗುರ ಪೊರೆದ ಮಾಯೆಯೆ ಹೂವು ಕೊಟ್ಟು ಹಣ್ಣು ಕೊಟ್ಟು ಉಪಚರಿಸಿದ ಮಮತೆಯೆ ಮುತ್ತು ರತ್ನ ವಜ್ರ ಖಚಿತ ಖ್ಯಾತಿವೆತ್ತ ಘನತೆಯೆ ಭೂರಮಣರೆಂದು ಮೆರೆದ ಸಾಮ್ರಾಟರ ಹುಟ್ಟಗಿಸಿ ಹೊಟ್ಟೆಲಿಟ್ಟ ರಾಣಿಯೆ ದೈತ್ಯ ವೃಕ್ಷ ಬಿಳಿಲುಗಳೇ ನಿನ್ನ ಹರವಿಕೊಂಡ ವೇಣಿಯೆ? ಕಾಡಿಬೇಡಿ ಬಂದವರಿಗೆ ನೀಡಲೆಂದೇ Read More