ಮರೆಯಾದ ಮಾಣಿಕ್ಯ

‘ವಂಶವೃಕ್ಷ’ದಿಂದ ಕುಡಿಯೊಡೆಯಿತು ವಿಷ್ಣು ಎಂಬ ಪ್ರತಿಭೆ ಚಿತ್ರ ಪ್ರಪಂಚ ಪಾವನವಾಯಿತು ಪ್ರತಿಫಲಿಸಿ ಅದರ ಪ್ರಭೆ ಪುಟ್ಟಣ್ಣನವರ ದಕ್ಷ ನಿರ್ದೇಶನ ಪುಟ ಪಡೆಯಿತು ಅಪ್ಪಟ ಚಿನ್ನ ‘ನಾಗರಹಾವಿನ’ ರಾಮಾಚಾರಿಯನ್ನ ಎಂದಿಗಾದರೂ ಮರೆವುದುಂಟೇನಣ್ಣ? ತುಂಟತನದಲಿ ಮಿನುಗುವ ಕಣ್ಣು ಸಂಪಿಗೆ ಮೂಗು, ಕೆಂಪನೆ ಬಣ್ಣ ಎಡಗೈ ಬೀಸುತ ನಡೆವುದೇ ಚೆನ್ನು ಸಾಹಸಸಿಂಹನ ಬೆನ್ನ ಹಿಂದೆ ಅಭಿಮಾನಿ ಗಣ ಮನೆಯೂ ಬೆಳಗಲು Read More

ಅಲ್ಲಮ, ಮುಕೇಶ್ ಮತ್ತು ಕಿಶೋರ್

ಬೆಟ್ಟಕ್ಕೆ ಚಳಿಯಾದಡೆ ಏನ ಹೊದಿಸುವಿರಯ್ಯ ! ಬಯಲು ಬತ್ತಲೆಯಾದಡೆ ಏನನುಡಿಸುವರಯ್ಯ ? ಭಕ್ತನು ಭವಿಯಾದಡೆ ಏನನುಪಮಿಸುವೆನಯ್ಯ – ಗುಹೇಶ್ವರ ? ಅಲ್ಲಮ ಪ್ರಭುವಿನ ಈ ವಚನ ನನ್ನಲ್ಲಿ ಮೂಡಿಸಿರುವ ಬೆರಗು ಅಪಾರ. ಅಲ್ಲಮನ ಇತರ ವಚನಗಳಿಗಿಂತ ಸುಲಭವಾಗಿ ಅರ್ಥವಾಗುವಂತೆಯೇ ಇದೆ. ಬೆಟ್ಟಕ್ಕೆ ಚಳಿಯಾದರೆ ಹೊದಿಸುವುದೇನು? ಬಯಲಿನ ಬೆತ್ತಲೆ ಮುಚ್ಚಲು ಹೊಚ್ಚುವುದೇನು? ಎಲ್ಲಾ ತಿಳಿದ ಭಕ್ತನೇ ಭವಿಯಾಗಿ Read More

ಅಮ್ಮಾ, ನಾನು ಜಂಭ ಮಾಡ್ಲಾ?

’ಅಮ್ಮಾ, ನಾನು ಜಂಭ ಮಾಡ್ಲಾ?’ – ಮನೆಮಂದಿಯೊಡನೆ ಟಿವಿಯ ಯಾವುದೋ ಸಿನಿಮಾದಲ್ಲಿ ಮುಳುಗಿದ್ದ ನಾನು ಪುಟ್ಟ ಮಗಳ ವಿಚಿತ್ರ ಕೋರಿಕೆಗೆ ಬೆರಗಾದೆ. ಇದೇನು ಹೊಸ ಆಟ ಕಲಿತಿದೆ ಮಗು? ಎಂದು ಉಳಿದವರಿಗೂ ಕುತೂಹಲ. ‘ಸರಿ ಮಾಡು, ನೋಡೋಣ’ ಎಂದು ಎಲ್ಲರೂ ಅವಳು ತೋರಿಸಲಿರುವ ಜಂಭವನ್ನು ನೋಡಲು ಕುತೂಹಲದಿಂದ ಕಾದೆವು. ನಮ್ಮೆಲ್ಲರ ಗಮನ ತನ್ನತ್ತ ಇದೆ ಎಂದು Read More

ದಿಗ್ವಿಜಯ ಸಾಧಿಸಿದ ನಮ್ಮ ‘ಕಂಪತಿಗಳು’

ಬರಹಗಾರ ಮಿತ್ರ ಶ್ರೀನಾಥ್ ಭಲ್ಲೆಯವರು, ಕೆಲವು ತಿಂಗಳ ಹಿಂದೆ ಸಂಪದದಲ್ಲಿ ತಮ್ಮ ‘ಕಂಪತಿಗಳು’ ನಾಟಕವನ್ನು ಪ್ರಕಟಿಸಿದ್ದರು. ಬಹಳ ದಿನಗಳಿಂದ, ಚಿಕ್ಕ-ಚೊಕ್ಕದಾಗಿದ್ದು ಸುಲಭವಾಗಿ ಆಡಬಹುದಾದಂತಹ, (ನಿರ್ದೇಶಕರಿಗೆ ಹೆಚ್ಚು ಕಷ್ಟಕೊಡದ) ನಕ್ಕುನಗಿಸುವ ಹಾಸ್ಯ ನಾಟಕಕ್ಕಾಗಿ ಹುಡುಕುತ್ತಿದ್ದ ನನಗೆ, ಅರಸುತ್ತಿದ್ದ ಬಳ್ಳಿ ಕಾಲಿಗೆ ಎಡರಿದಂತಾಯಿತು. ಅದನ್ನು ಓದಿ ಮುಗಿಸುತ್ತಿದ್ದಂತೆಯೇ ಸಂಪದದಲ್ಲೇ ಇರುವ ಖಾಸಗಿ ಸಂದೇಶ ಕಳಿಸುವ ಅನುಕೂಲವನ್ನು ಉಪಯೋಗಿಸಿಕೊಂಡು ಲೇಖಕರ Read More