ಗಣೇಶ ಬಂದ!

ನಮ್ಮ ಕೈತೋಟದಲ್ಲೇ ಬೆಳೆದ ಹೂವು,ಎಲೆಗಳಿಂದ ಪೂಜೆಗೊಂಡು ಪ್ರಸನ್ನನಾಗಿರುವ ಪರಿಸರಪ್ರಿಯ ಗಣೇಶ “ಎಲ್ಲರಿಗೂ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು!” ಅನುಪಮಾ-ನಿತಿನ್ ಮಂಗಳವೇಧೆ ಮನೆಯ ಗೌರಿ-ಗಣೇಶ ಆಶಾ-ಗುರುದತ್ ಮನೆಯಲ್ಲಿ ಪೂಜೆಗೊಂಡ ಗಣೇಶ

ಆಹಾ! ಈ ಬೇಸಿಗೆ! ಇನ್ನೆಷ್ಟು ದಿನ?

ಅಂದೇ ಹೊಲದಿಂದ ಬಿಡಿಸಿತಂದ ಮುಸುಕಿನ ಜೋಳದ ತೆನೆಗಳು ಗ್ರಿಲ್ಲಿನಲ್ಲಿ ಸಿಜ಼ಿಗುಡುತ್ತಿರುವುದನ್ನು ನೋಡುತ್ತಾ ಕುಳಿತಿದ್ದೆವು. ಗೆಳತಿಯೊಬ್ಬಳು “ಅಯ್ಯೋ.. ಆಗಸ್ಟ್ ಕೂಡ ಮುಗಿಯುತ್ತಾ ಬಂತಲ್ಲಾ….” ಎಂದಳು ಆರ್ತ ದನಿಯಲ್ಲಿ. ‘ಅದಕ್ಕೇನೀಗ?’ ಎನ್ನುವಂತೆ ಅವಳತ್ತ ಎಲ್ಲರ ನೋಟ ಹರಿಯಿತು. ಅವಳು ಹೇಳದೆಯೇ ಆ ಕಣ್ಣುಗಳ ಭಾವ ನಮ್ಮೆಲ್ಲರನ್ನೂ ತಲುಪಿತು. ಆಗಸ್ಟ್ ಮುಗಿದರೆ…. ಸೆಪ್ಟೆಂಬರ್ ಕೂಡ ಪರವಾಗಿಲ್ಲ. ನಂತರ ಬರುವ ಚಳಿದಿನಗಳನ್ನು Read More

ಸರ್ವಜ್ಞ ಪ್ರತಿಮೆ ಅಯನಾವರಂನಲ್ಲಿ ಯಾಕೆ ಬೇಡ?

(ವೆಬ್ ದುನಿಯದಲ್ಲಿ ಪ್ರಕಟವಾಗಿರುವ ಲೇಖನ, ಲೇಖಕ : ಬಿ. ಅವಿನಾಶ್ ) ಇದು ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆಗೆ ಅಥವಾ ಚೆನ್ನೈಯಲ್ಲಿ ಸರ್ವಜ್ಞ ಕವಿಯ ಪ್ರತಿಮೆ ಸ್ಥಾಪನೆಯನ್ನು ವಿರೋಧಿಸುವ ಲೇಖನ ಅಲ್ಲ ಎಂಬುದನ್ನು ಓದುಗರು ಅರ್ಥೈಸಿಕೊಂಡೇ ಮುಂದುವರಿಯಲು ಅರಿಕೆ. ಮೊದಲನೆಯದಾಗಿ, ಪ್ರತಿಮಾ ಸಂಸ್ಕೃತಿ ಕರ್ನಾಟಕದಲ್ಲಿ ಕಡಿಮೆ. ಅದೇನಿದ್ದರೂ, ದೇವರನ್ನು ವಿರೋಧಿಸುವ ದ್ರಾವಿಡರ ನಾಡಿನಲ್ಲಿ ದೇವಾಲಯಗಳ ಸಂಖ್ಯೆ Read More

ಕೋಡುಬಳೆ ಕಾರ್ಯಾಗಾರ

ಅಕ್ಕಿ ಹಿಟ್ಟು, ಸಣ್ಣ ರವೆ, ತೆಂಗಿನಕಾಯಿ ತುರಿ, ಅಚ್ಚ ಮೆಣಸಿನ ಪುಡಿ, ಇಂಗು, ಉಪ್ಪು, ಒಂದು ಸೌಟಿನಷ್ಟು ಬಿಸಿ ಎಣ್ಣೆ ಬೆರೆಸಿ ತಯಾರಿಸಿದ ಹಿಟ್ಟಿನಿಂದ ತಯಾರಾಗಿರುವ ಹಸಿ ಕೋಡುಬಳೆಗಳು. ಬೇಯುತಲಿದ್ದರೂ…… ಕುದಿಯುವ ಎಣ್ಣೆಯಲ್ಲಿ, ಹದವಾಗಿ ಬೆಂದು, ಗರಿಗರಿಯ ಹಂತದಲ್ಲಿ.. ಪಕೋಡ, ಬೋಂಡಗಳಂತಹ ಎಣ್ಣೆದಾಹೀ ತಿಂಡಿಗಳಿಗೆ ಹೋಲಿಸಿದರೆ ಕೋಡುಬಳೆ ಬಂಗಾರ. ಇದು ಎಣ್ಣೆ ಹೀರೋದು ಬಹಳ ಕಡಿಮೆ. Read More

ವಸಂತ ಸಾಹಿತ್ಯೋತ್ಸವದ ಸುಖದ ಕ್ಷಣಗಳು

(ಲೇಖಕಿಯರಾದ ವೀಣಾ, ವೈದೇಹಿಯವರೊಂದಿಗೆ ಅಮೆರಿಕನ್ನಡಿಗ ಬರಹಗಾರರು) “ನಾನು ಭಾವಜೀವಿ. ಎಂತಹ ಬರಡು ನೆಲದಲ್ಲೂ ಪ್ರೀತಿಯ ಪಸೆಗಾಗಿ ಕೆದರುವ ಆಶಾಜೀವಿ. ಸಹಜವಾಗಿಯೇ ನನ್ನಲ್ಲಿ ತವರಿನ ನೆನಪುಗಳು ತುಳುಕಾಡುವುದು ಹೆಚ್ಚು! ಈಗಲೂ ಹಾಗೆಯೇ ಹೇಳಬೇಕೆಂದರೆ- ಬಹುದಿನಗಳ ನಂತರ ತವರಿಗೆ ಹೋದ ಹೆಣ್ಣುಮಗಳೊಬ್ಬಳು, ಅಣ್ಣ-ತಮ್ಮಂದಿರು ನೀಡಿದ ಉಡುಗೊರೆಗಳ ಭಾರಕ್ಕೆ ಹಿಗ್ಗಿಹೋಗುವಂತೆ ನಾನು ಕೂಡ ವಸಂತೋತ್ಸವದ ಸಂಭ್ರಮದಲ್ಲಿ ಭಾಗವಹಿಸಿ, ಅಲ್ಲಿಯ ನಗು, Read More