ಬಂದೇವಯ್ಯಾ ಗೋವಿಂದ ಶೆಟ್ಟಿ!

ರಚನೆ : ಕನಕದಾಸರು ಬಂದೇವಯ್ಯಾ ಗೋವಿಂದ ಶೆಟ್ಟಿ ನಿಮ್ಮ ಹರಿವಾಣ ತೀರ್ಥ ಪ್ರಸಾದ ಉಂಟೆನಲಾಗಿ ||ಪಲ್ಲವಿ|| ಅಪ್ಪವು ಅತಿರಸ ತುಪ್ಪವು ಬಿಸಿ ಹಾಲು ಒಪ್ಪುವ ಸಕ್ಕರೆ ಯಾಲಕ್ಕಿಯು ಅಪರೂಪವಾದ ಕಜ್ಜಾಯಗಳನೆಲ್ಲ ಛಪ್ಪನ್ನ ದೇಶಕ್ಕೆ ಮಾರುವ ಶೆಟ್ಟಿ ||೧|| ಒಡೆದ ಮಡಕೆ ತಂದು ಅರೆದು ನಾಮವ ಮಾಡಿ ಕೊಡುವೆ ನೀ ಕಾಸಿಗೆ ಒಂದೊಂದಾಗಿ ಒಡಲು ತುಂಬಿ ಮಿಕ್ಕ Read More

ಕೋಲು ಕೋಲೆನ್ನ ಕೋಲೆ – ದಶಾವತಾರ

ಕೋಲು ಕೋಲೆನ್ನ ಕೋಲೆ ಕೋಲು ಕೋಲೆನ್ನ ಕೋಲೆ ಕೋಲೆ ಶ್ರೀಹರಿಯ ಬಲಗೊಂಬೆ ಕೋಲೆ ||ಪ|| ಶಿಕ್ಷಿಸಿ ನಿಗಮಗೋಚರ ರಾಕ್ಷಸನಾ ಕೊಂದು ರಕ್ಷಿಸಿ ವೇದವನುಳುಹಿದ ಕ್ಷಿತಿಯೊಳು ರಕ್ಷಿಸಿ ವೇದವನುಳುಹಿದ ಕ್ಷಿತಿಯೊಳು ಮತ್ಸ್ಯಾವತಾರನ ಬಲಗೊಂಬೆ ಕೋಲೆ ||೧|| ಧರ್ಮ ನಡೆಯಲಾಗಿ ಮರ್ಮವ ತಾಳಿದ ಕರ್ಮಹರ ಶ್ರೀಮೂರ್ತಿಯ ಕೋಲೆ ಕರ್ಮಹರ ಶ್ರೀಮೂರ್ತಿಯು ಧರೆಯ ಪೊತ್ತ ಕೂರ್ಮಾವತಾರನ ಬಲಗೊಂಬೆ ಕೋಲೆ ||೨|| ಧರೆಯ Read More

ಗುರುಪದ ಹಾರ

ಗುರುಪದ ಹಾರ ಧರೆಯೋದ್ಧಾರಕೆ ಮೆರೆವರು ಗುರುಗಳು ವರಮಂತ್ರಾಲಯದಲ್ಲಿ ವರಪ್ರಹ್ಲಾದರು ವ್ಯಾಸ ಪ್ರಭುಗಳು ವರ ತುಂಗಾ ತಟದಲ್ಲಿ |೧| ಕೊರೆದಿಹ ಕಂಬದಿ ಹರಿಯನು ತೋರಿಸಿ ಹರಿನಾಮವ ಜಗದಲ್ಲಿ ಮೆರೆಸಿದ ವರಪ್ರಹ್ಲಾದರು ಮೆರವರು ವರಮಂತ್ರಾಲಯದಲ್ಲಿ |೨| ಹರಿಮತ ಸಾರುವ ಹರಿಪದ ಹಾರವ ಪರಿ ಪರಿ ವಿಧಪದದಲ್ಲಿ ಇಳೆಯೊಳು ಸಾರಿದ ವ್ಯಾಸರು ಮೆರೆವರು ವರಮಂತ್ರಾಲಯದಲ್ಲಿ |೩| ಧರೆಯನು ಮುಸುಕಿದ ತಮವನು Read More

ರಾಮನ ನೋಡಿರೈ, ನಿಮ್ಮಯ ಕಾಮಿತ ಬೇಡಿರೈ

ಜಗನ್ನಾಥದಾಸರ ರಚನೆ ರಾಮನ ನೋಡಿರೈ ನಿಮ್ಮಯ ಕಾಮಿತ ಬೇಡಿರೈ || ಪ || ತಾಮರಸಸಖ ಸುವಂಶಾಬ್ಧಿಶರತ್ಸೋಮಾ ಕಮಲಧೀಮ ||ಅ.ಪ.|| ಧಾತನನುಜ್ಞದಿ ದೇವತ್ವಷ್ಟ್ರ ನಿರ್ಮಿಸಿದಾ ಅಜ ಪೂಜಿಸಿದಾ ಜ್ಯೋತಿರ್ಮಯ ಜಾಬಾಲಿ ಮುನಿಯ ತಪವರಿದಾ ಕಾಮಿತ ನೆರೆದಾ ಭೂತಾಧಿಪನ ಭವನದೊಳರ್ಚನೆಗೊಂಡಾ ದೃತಕೋದಂಡಾ ಮಾತಂಗಾರಿ ವರೂಥಿಯ ಜನಕ ಮೇದಾಗಾರಕೆ ಪೋದಾ || ೧  || ಸೌಭರಿ ಮುನಿಪಗೆ ಸೌಖ್ಯವ ಕರುಣಿಸಿ ಕೊಟ್ಟ ಜಗಕತಿಧಿಟ್ಟ Read More

ಬಾರೋ ಗುರು ರಾಘವೇ೦ದ್ರ ಬಾರಯ್ಯ ಬಾ ಬಾ

ರಚನೆ : ಶೇಷ ವಿಠಲ ಬಾರೋ ಗುರು ರಾಘವೇ೦ದ್ರ ಬಾರಯ್ಯ ಬಾ ಬಾ ಬಾರೋ ಗುರು ರಾಘವೇಂದ್ರ ||ಪ|| ಹಿಂದುಮು೦ದಿಲ್ಲೆನಗೆ ನೀ ಗತಿ ಎ೦ದು ನ೦ಬಿದೆ ನಿನ್ನ ಪಾದವ ಬ೦ಧನವ ಬಿಡಿಸೆನ್ನ ಕರಪಿಡಿ ನ೦ದಕ೦ದ ಮುಕು೦ದ ಬ೦ಧೊ |ಅ.ಪ| ಸೇವಕನೆಲೊ ನಾನು ಧಾವಿಸಿ ಬ೦ದೆನು ಸೇವೆ ನೀಡೆಲೊ ನೀನು ಸೇವಕನ ಸೇವೆಯನು ಸೇವಿಸಿ ಸೇವ್ಯ ಸೇವಕ Read More