ಜೈ ಜೈ ರಾಮ ಹರೇ

ರಚನೆ : ವರದೇಶ ವಿಠಲ ಪುತ್ತೂರು ನರಸಿಂಹ ನಾಯಕ್ ದನಿಯಲ್ಲಿ ||ಜೈ ಜೈ ರಾಮ ಹರೇ ಜೈ ಜೈ ಕೃಷ್ಣ ಹರೇ || ಕೌಸಲ್ಯಜ ವರ ವಂಶೋದ್ಭವ ಸುರ ಸಂಸೇವಿತ ಪದ ರಾಮ ಹರೇ ಕಂಸಾದ್ಯಸುರರ ಧ್ವಂಸಗೈದ ಯದುವಂಶೋದ್ಭವ ಕೃಷ್ಣ ಹರೇ ಮುನಿಮಖರಕ್ಷಕ ಧನುಜರ ಶಿಕ್ಷಕ ಫಣಿಧರ ಸನ್ನುತ ರಾಮ ಹರೇ ಘನವರ್ಣಾಂಗ ಸುಮನಸರೊಡೆಯ ವನಜಾಸನ Read More

ಒಂದು ಬಾರಿ ಸ್ಮರಣೆ ಸಾಲದೇ?

ರಚನೆ – ವಾದಿರಾಜರು ಗಾಯನ – ಪ೦ಡಿತ್ ವೆಂಕಟೇಶ್ ಕುಮಾರ್ ಹಾಡು ಕೇಳಿ :- ಒಂದು ಬಾರಿ ಸ್ಮರಣೆ ಸಾಲದೇ? ಆನಂದತೀರ್ಥರ, ಪೂರ್ಣಪ್ರಜ್ಞರ, ಸರ್ವಜ್ಞರಾಯರ, ಮಧ್ವರಾಯರ ||ಪ|| ಹಿಂದನೇಕ ಜನ್ಮದಲ್ಲಿ ನೊಂದು ಯೋನಿಯಲ್ಲಿ ಬಂದು ಇಂದಿರೇಶನ ಪಾದವನ್ನು ಹೊಂದಬೇಕೆಂಬುವರಿಗೆ || 1 || ಆರು ಮಂದಿ ವೈರಿಗಳನು ಸೇರಲೀಸದಂತೆ ನೂಕಿ ಧೀರನಾದ ಹರಿಯ ಪಾದ ಸೇರಬೇಕೆಂಬುವರಿಗೆ Read More

ಆದದ್ದೆಲ್ಲ ಒಳಿತೇ ಆಯಿತು!

ರಚನೆ: ಪುರಂದರದಾಸರು ಆದದ್ದೆಲ್ಲ ಒಳಿತೇ ಆಯಿತು ನಮ್ಮ ಶ್ರೀಧರನ ಸೇವೆ ಮಾಡಲು ಸಾಧನ ಸಂಪತ್ತಾಯಿತು||ಪ|| ದಂಡಿಗೆ ಬೆತ್ತ ಹಿಡಿಯೊದಕ್ಕೆ ಮಂಡೆ ಬಾಗಿ ನಾಚುತಲಿದ್ದೆ ಹೆಂಡತಿ ಸಂತತಿ ಸಾವಿರವಾಗಲಿ ದಂಡಿಗೆ ಬೆತ್ತ ಹಿಡಿಸಿದಳಯ್ಯ || ೧ || ಗೋಪಾಳ ಬುಟ್ಟಿ ಹಿಡಿಯೊದಕ್ಕೆ ಭೂಪತಿಯಂತೆ ಗರ್ವಿಸುತಿದ್ದೆ ಆ ಪತ್ನೀ ಕುಲ ಸಾವಿರವಾಗಲಿ ಗೋಪಾಳ ಬುಟ್ಟಿ ಹಿಡಿಸಿದಳಯ್ಯ || ೨ Read More

ಈಸಬೇಕು ಇದ್ದು ಜೈಸಬೇಕು!

ರಚನೆ – ಪುರಂದರದಾಸರು ವಿದ್ಯಾಭೂಷಣರ ದನಿಯಲ್ಲಿ ಹಾಡು ಕೇಳಿ:- ಈಸಬೇಕು-ಇದ್ದು ಜೈಸಬೇಕು| ಹೇಸಿಗೆ ಸಂಸಾರದಲ್ಲಿ ಆಶಾ ಲೇಶ ಮಾಡದ್ಹಾಂಗೆ ||ಪ|| ತಾಮರಸ ಜಲದಂತೆ ಪ್ರೇಮವಿಟ್ಟು ಭವದೊಳು ಸ್ವಾಮಿ ರಾಮನೆನುತ ಪಾಡಿ ಕಾಮಿತ ಕೈಗೊಂಬರೆಲ್ಲ ||೧|| ಗೇರುಹಣ್ಣಿನಲಿ ಬೀಜ ಸೇರಿದಂತೆ ಸಂಸಾರದಿ| ಮೀರಿ ಆಸೆ ಮಾಡದ್ಹಾಂಗೆ ಧೀರ ಕೃಷ್ಣನ ಭಕುತರೆಲ್ಲ ||೨|| ಮಾಂಸದಾಸೆಗೆ ಮತ್ಸ್ಯ ಸಿಲುಕಿ ಹಿಂಸೆಪಟ್ಟ Read More

ಶ್ರೀಪತಿಯು ನಮಗೆ ಸ೦ಪದವೀಯಲಿ!

ಶ್ರೀಪತಿಯು ನಮಗೆ ಸ೦ಪದವೀಯಲಿ ವಾಣೀಪತಿಯು ನಮಗೆ ದೀರ್ಘಾಯು ಕೊಡಲಿ||ಪ|| ವರಬುಧರನು ಪೊರೆಯೆ ವಿಷವ ಕ೦ಠದಲಿಟ್ಟ ಹರ ನಿತ್ಯ ನಮಗೆ ಸಹಾಯ ಮಾಡಲಿ ನರರೊಳುನ್ನತವಾದ ನಿತ್ಯ ಭೋಗ೦ಗಳನು ಪುರುಹೂತ ಪೂರ್ಣ ಮಾಡಿಸಲಿ ನಮಗೆ ||೧|| ವಿನುತ ಸಿದ್ಧಿಪ್ರದ ವಿಘ್ನೇಶನ ದಯದಿ೦ದ ನೆನೆದ ಕಾರ್ಯಗಳೆಲ್ಲ ನೆರವೇರಲಿ ದಿನದಿನದಿ ಧನ್ವ೦ತ್ರಿ ಆಪತ್ತುಗಳ ಕಳೆದು ಮನಹರುಷವಿತ್ತು ಮನ್ನಿಸಲಿ ಬಿಡದೆ||೨|| ನಿರುತ ಸುಜ್ಞಾನವನು Read More