ತೇಲಿದೆ ನೆನಪಿನ ದೋಣಿಯಲಿ…

ಕೆಲಸಗಳ ನಡುವೆ ಸ್ವಲ್ಪ ವಿರಾಮ ದೊರೆತರೂ ಅಂತರ್ಜಾಲಕ್ಕೆ ಬಂದು ಅಮರಿಕೊಳ್ಳುವ ನಾನು ಈಚೆಗೆ ಕೆಲದಿನಗಳಿಂದ ಅಂತರ್ಜಾಲಕ್ಕೆ ಅಪರೂಪವಾಗಿ ಹೋಗಿದ್ದೆ.  ಅದಕ್ಕೆ ನನಗೆ ದೊರಕಿದ್ದ ಪುಸ್ತಕಗಳೇ ಕಾರಣ. ಎಷ್ಟೋ ದಿನಗಳಿಂದ ಓದಬೇಕೆಂದು ಇಟ್ಟುಕೊಂಡಿದ್ದ ಪುಸ್ತಕಗಳನ್ನು ಓದಿ ಮುಗಿಸಿದೆ. (ಅದರಲ್ಲಿ ಬಹುಪಾಲು ಕಡ ತಂದ ಪುಸ್ತಕಗಳಾದ್ದರಿಂದ ಓದಿ ಹಿಂತಿರುಗಿಸಲೇಬೇಕಾದ ಜರೂರು 🙂 )   ಪುಸ್ತಕವನ್ನು ವೇಗವಾಗಿ, ಗಬಗಬನೆ  ಓದುವ ಸ್ವಭಾವ ನನ್ನದಲ್ಲ.  Read More

ನೀಲಾ – ಆ ಮೇರು ಈ ಮೇರು

ನೀಲಾ : ೨೦೦೧ ಗಾಯಕರು : ರಾಜೇಶ್, ವಾಣಿ ಜಯರಾಂ ಸಂಗೀತ : ವಿಜಯ ಭಾಸ್ಕರ್ ಸಾಹಿತ್ಯ: ಕೋಟಿಗಾನಹಳ್ಳಿ ರಾಮಯ್ಯ ಹಾಡು ಕೇಳಿ – ಆ ಮೇರು ಈ ಮೇರು ಆಸೆಯ ಹೂ ತೇರು ಎಳೆ ಎಳೆಯೋ ಬಸವಣ್ಣಾ ತುಂಬೈತೆ ಕಣ್ಣಾ.. ಎಷ್ಟೊಂದು ಬಣ್ಣಾ.. ತುಂಬೈತೆ ಕಣ್ಣಾ ..ಎಷ್ಟೊಂದು ಬಣ್ಣಾ.. ಆ ಗಾಲಿ ಈ ಗಾಲಿ Read More

wordpress – help

ತುಳಸಿವನದಲ್ಲಿ ,ಕಾಮೆಂಟ್ಸ್ moderate ಮಾಡಲು ಶುರುಮಾಡಿದ ಮೇಲೆ spam ಬರುವುದು ನಿಂತಿತ್ತು. ಈಗ ಮತ್ತೆ ಬರತೊಡಗಿವೆ.   ಇದನ್ನು ತಡೆಯೋದು ಹೇಗೆ? (delete ಮಾಡುವುದು ಬಿಟ್ಟು ಬೇರೇನಾದರೂ ಉಪಾಯ) wordpress ಬಳಸಿ ಅನುಭವವಿದ್ದವರು ತಿಳಿಸಿ.

ಟಿಪ್ಪು ವಿವಾದ – ಲೇಖನ ಸುಗ್ಗಿ!

ನೀವು  ಸುದ್ದಿಯ ಹಸಿವಿನವರಾಗಿದ್ದರೆ,  ಡಿ.ಎಚ್.ಶಂಕರ ಮೂರ್ತಿಯವರು ಪ್ರಾರಂಭಿಸಿದ ಟಿಪ್ಪೂ ವಿವಾದದ ಕುರಿತು ,ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬರುತ್ತಿರುವ  ಲೇಖನ ಸರಣಿಗಳನ್ನು ಗಮನಿಸಿಯೇ ಇರುತ್ತೀರಿ.  ಕನ್ನಡದ ಪ್ರಮುಖ ಸಾಹಿತಿಗಳು/ವಿದ್ವಾಂಸರಿಗೆ, ತಮ್ಮ ಸತ್ವಪೂರ್ಣ ಲೇಖನಗಳ ಮೂಲಕ. ಒಂದು ಅರ್ಥಪೂರ್ಣ, ಮುಕ್ತ ಸಂವಾದ ನಡೆಸಲು ವಿ.ಕ ವೇದಿಕೆ ಒದಗಿಸಿಕೊಟ್ಟಿದೆ. ಮೊಟ್ಟ ಮೊದಲು ಆಧಾರಗಳ ಕಡತವನ್ನೇ ಹೊತ್ತು ಆಖಾಡಕ್ಕಿಳಿದಿದ್ದು ಎಸ್.ಎಲ್.ಭೈರಪ್ಪನವರು. (ಚಿದಾನಂದ ಮೂರ್ತಿ, ಸೂರ್ಯನಾಥ್ ಕಾಮತ್ ಲೇಖನಗಳು ಈ ಮುಂಚೆ ಪ್ರಕಟವಾಗಿವೆ.)  Read More