Happy Thanksgiving day!

Happy Thanksgiving weekend 🙂 !! ಇನ್ನೊಂದು ೩-೪ ದಿನ ಅಮೆರಿಕದಿಂದ ಹೊರಡುವ ಬ್ಲಾಗ್‍ಗಳಿಗೆಲ್ಲಾ ರಜ ಅನ್ನಿಸತ್ತೆ. 🙂 ಯಾಕೆಂದರೆ, ಈ ಸಮಯದಲ್ಲಿ ಮನೆಯಲ್ಲಿ ಇರೋರು ಕಡಿಮೆ. ಅಲ್ಲಿ,ಇಲ್ಲಿ, ಗೆಳೆಯರ ಮನೆಗೆ, ಹೊಸ ಹೊಸ ಜಾಗಗಳನ್ನು ನೋಡಲು ಹೋಗುವವರೇ ಹೆಚ್ಚು. ನೀವೆಲ್ಲ ಏನೇನು ಪ್ಲಾನ್ ಮಾಡಿದೀರಿ? ಎಲ್ಲಿಗೆ ಹೋಗ್ತಾ ಇದೀರಿ? ನಾವೇನು ಹಬ್ಬ ಮಾಡಿ, ಟರ್ಕಿ ತಿನ್ನೋದಿಲ್ಲವಾದರೂ,  ಅಮೆರಿಕಕ್ಕೆ ಬಂದಾಗಿನಿಂದ, ನಾವು ತಪ್ಪದೆ Read More

ಹೆಸರುಬೇಳೆಗೆ ಈ ಹೆಸರೇಕೆ?

ಮೇಲೇರಿದ್ದ ಬೇಳೆಗಳ ಬೆಲೆ ಕೆಳಗಿಳಿಯುತ್ತಾ  ಇದೆ. ಈ ಬಾರಿ ಸಮಸ್ಯೆ ಬಿಸಿಬೇಳೆ ಬಾತಿಗೆ ಬೇಕಾದ ತೊಗರಿಬೇಳೆಯದಲ್ಲ. ಹೆಸರುಬೇಳೆಯದು.   ಸುಮ್ಮನೆ ಯೋಚಿಸುತ್ತಿದ್ದೆ .. ಬೇರೆ ಕೆಲಸವಿಲ್ಲದೆ ಅಲ್ಲ 🙂  ಹೆಸರುಬೇಳೆಯ ಹೆಸರು ಮೊದಲು ಹಸಿರುಬೇಳೆ ಎಂದು ಇದ್ದಿರಬಹುದಲ್ಲವೇ? ಏಕೆಂದರೆ ಹೆಸರುಕಾಳಿನ ಬಣ್ಣ ಹಸಿರು.  englishನಲ್ಲಿಯೂ green gram ಅಂದರೆ ಹೆಸರುಬೇಳೆ ತಾನೇ? ನಮ್ಮ ತಮಿಳು ಮಿತ್ರರು ಹೆಸರುಬೇಳೆಗೆ “ಪಚ್ಚ ಪರಪು” ,”ಪಯರ್ Read More

ಸುಲಿದ ಬಾಳೆಯ ಹಣ್ಣಿನಂದದಿ – ಮಹಾಲಿಂಗಕವಿ

ಸುಲಿದ ಬಾಳೆಯ ಹಣ್ಣಿನಂದದಿ ಕಳೆದ ಸಿಗುರಿನ ಕಬ್ಬಿನಂದದಿ ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರುವ ಈ ಲಲಿತವಹ ಕನ್ನಡ ನುಡಿಯಲಿ ತಿಳಿದು ತನ್ನಲಿ ತನ್ನ ಮೋಕ್ಷವ ಗಳಿಸಿಕೊಂಡರೆ ಸಾಲದೆ? ಸಂಸ್ಕೃತದಲಿನ್ನೇನು?   *            *         *

ಕನ್ನಡದ ನೆಲದ – ಸಾಲಿ ರಾಮಚಂದ್ರರಾಯರು

ಕನ್ನಡದ ನೆಲದ ಪುಲ್ಲೆನಗೆ ಪಾವನ ತುಳಸಿ! ಕನ್ನಡದ ನೆಲದ ನೀರ್ವೊನಲೆನಗೆ ದೇವನದಿ! ಕನ್ನಡದ ನೆಲದ ಕಲ್ಲೆಮಗೆ ಶಾಲಗ್ರಾಮ ಶಿಲೆ! ಕನ್ನಡಂ ದೈವಮೈ! ಕನ್ನಡದ ಶಬ್ದಮೆಮಗೋಂಕಾರಮೀಯೆನ್ನ ಕನ್ನಡದ ನುಡಿಯೆ ಗಾಯತ್ರಿಯದ್ಭುತ ಮಂತ್ರ- ಮಿನ್ನಾವುದೈ ಪೆರತು ಕನ್ನಡದ ಸೇವೆಯಿಂದಧಿಕಮೀ ಜಗದೊಳಗೆ?              *                  * ಕೃಪೆ: ದಟ್ಸ್ ಕನ್ನಡ

ಯಜಮಾನ – ಪ್ರೇಮ ಚಂದ್ರಮ

ಚಿತ್ರ – ಯಜಮಾನ (೨೦೦೦) ಸಾಹಿತ್ಯ – ಕೆ.ಕಲ್ಯಾಣ್ ಸಂಗೀತ – ರಾಜೇಶ್ ರಾಮನಾಥ್ ಗಾಯಕ – ರಾಜೇಶ್ ಕೃಷ್ಣನ್ ಹಾಡು ಕೇಳಿ ಪ್ರೇಮ ಚಂದ್ರಮ ಕೈಗೆ ಸಿಗುವುದೇ ಹೇಳೇ ತಂಗಾಳಿ ನೀ ಹೇಳೇ ತಂಗಾಳಿ ಮನಸಾರೆ ಮೆಚ್ಚಿಕೊಳುವೆ ಹೃದಯಾನ ಬಿಚ್ಚಿಕೊಡುವೆ ಈ ಭೂಮಿ ಇರುವರೆಗೂ ನಾ ಪ್ರೇಮಿಯಾಗಿರುವೆ ||ಪ್ರೇಮ ಚಂದ್ರಮ|| ಬಾನಲಿ ಹುಣ್ಣಿಮೆಯಾದರೆ ನೀ Read More