ಕಥೆಯ ಕೊನೆಯ ಭಾಗ!

ಐದು ವರ್ಷಗಳ ಬಳಿಕ……………………. ಓಹುರಾ ನ್ಯೂಝೀಲ್ಯಾಂಡಿನಲ್ಲಿರುವ ಒಂದು ಸಣ್ಣ ಊರು. ಅಲ್ಲಿಯೇ ಇರುವ ‘ಸಮೀಉಲ್ಲಾ ಕುರಿ ಫಾರ್ಮ್’ನಲ್ಲಿ ಕುಳಿತುಕೊಂಡು ಭರತ ತನ್ನ ಹತ್ತು ಸಾವಿರ ಕುರಿಗಳನ್ನು ಕಾಯುತ್ತಿದ್ದ. ಅವನ ಸೆಲ್ ಫೋನ್ ರಿಂಗಣಿಸಿತು. ಅತ್ತಲಿಂದ ಕವಿತಾಳ ಧ್ವನಿ ಕೇಳಿಸಿತು. “ಭರತ್, ಬೇಗನೆ ಮನೆಗೆ ಹೋಗಿ ಸ್ಪೆಶಲ್ ಹಯಗ್ರೀವ ಹಾಗು ಬೋಂಡಾ ಸೂಪ್ ಮಾಡಿಡು. ರಾಜೀವ,ಧಾರಿಣಿ,ಪ್ರವಲ್ಲಿಕಾ ಹಾಗು Read More

ಕಥೆ ಬಗ್ಗೆ ಇಲ್ಲಿ ಮಾತಾಡೋಣ.

ಕಥೆಯ ಬೆಳವಣಿಗೆಯನ್ನು ಚರ್ಚಿಸಲು ಇದ್ದ ಆ ದಾರ ಹನುಮನ ಬಾಲದಂತೆ ಉದ್ದವಾಗಿರುವುದರಿಂದ ಈ ಹೊಸ ಎಳೆಯ ಅವತಾರ. ಕಥೆ ಬಗ್ಗೆ ಮಾತಾಡುವುದಲ್ಲದೆ, ಕಥೆಗಾರರ ಜಗಳ, ಕಾಲೆಳತಕ್ಕೂ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಕಥ(ದ)ನ ಮುಂದುವರೆಯಲಿ.

ಕನ್ನಡ ದಾಸಯ್ಯ

ಕವಿ : ಸಕ್ಕರಿ ಬಾಳಾಚಾರ್ಯ (ಶಾಂತಕವಿ) – (೧೮೫೬-೧೯೩೦) ಬೇಡಲು ಕನ್ನಡ ದಾಸಯ್ಯ ಬಂದಿಹ ನೀಡಿರಮ್ಮ ; ತಡಮಾಡದಲೇ||ಪ|| ಹಾಡೊಂದನಾತನು ಹೊಸದಾಗಿ ಮಾಡಿಹ ಕೂಡಿರಿ ಕೇಳಿರಿ ಹಾಡುವೆನು||ಅನು|| ಕನ್ನಡ ಮಾತಿನ ತಂದೆತಾಯಿಗಳಿಂದ ಚೆನ್ನ ಚೆನ್ನೆಯರೆಲ್ಲ ಹುಟ್ಟಿದಿರಿ. ಕನ್ನಡ ಮಾತಿನ ಜೋಗುಳವನು ಕೇಳಿ ಕನ್ನಡ ತೊಟ್ಟಿಲೊಳಾಡಿದಿರಿ, ಕನ್ನಡ ದೇಶದೆ ದೊಡ್ಡವರಾದಿರಿ ಕನ್ನಡ ವಿದ್ಯೆಯ ಗಳಿಸಿದಿರಿ ಕನ್ನಡದಿಂದಲೆ ಸಿರಿವಂತರಾದಿರಿ Read More

ಭಾಗ – 23

ಮನೋಶಾಸ್ತ್ರ ಹಾಗು ಮಾನವಶಾಸ್ತ್ರ ಇವು ಕವಿತಾಳ ಮೆಚ್ಚಿನ ವಿಷಯಗಳು.ಅಲ್ಲದೆ ಅವಳು ಒಂದು ರೀತಿಯ ಸ್ತ್ರೀಸ್ವಾತಂತ್ರ್ಯವಾದಿ. ಕಾಲೇಜಿನಲ್ಲಿ ಜರುಗುವ ಚರ್ಚಾಕೂಟಗಳಲ್ಲಿ, ಮಾನವ ಸಮಾಜ ಪ್ರಾರಂಭವಾದ ಗಳಿಗೆಯಿಂದ ಯಾವ ಯಾವ ವಿಧಾನಗಳಲ್ಲಿ ಸ್ತ್ರೀಯ ಮೇಲೆ ಅನ್ಯಾಯ ನಡೆದಿದೆ ಎನ್ನುವದನ್ನು ಅವಳು ತರ್ಕಬದ್ಧವಾಗಿ ವಿವರಿಸುತ್ತಿದ್ದಳು. ಕೇವಲ ಸಮಾಜವಷ್ಟೇ ಅಲ್ಲ, ನಿಸರ್ಗವೂ ಸಹ ಮಹಿಳೆಗೆ ಅನ್ಯಾಯ ಮಾಡಿದೆ; ಶಿಶುವಿನ ಗರ್ಭಧಾರಣೆಯು ಸ್ತ್ರೀಯ Read More

ಭಾಗ – 22

ಅಮ್ಮನನ್ನು ನೋಡುವ ತವಕದಲ್ಲಿ ಹಳ್ಳಿ ಬಿಟ್ಟಾಗ ಭರತನ ಮನದ ತುಂಬಾ ಸರೋಜಮ್ಮನವರ ರೂಪವೇ ತುಂಬಿ ಹೋಗಿತ್ತು ಇಹದ ಅರಿವೇ ಇರಲಿಲ್ಲದವನಿಗೆ ಅವನ ಕಾರಿನ ಹಿಂಬದಿಯ ಸೀಟಿನಲ್ಲಿ ಯಾರಿದ್ದಾರೆ ಎಂಬ ಗಮನ ಹೋಗುವುದು ಹೇಗೆ? ಕೇಶವನ ಮನೆಯನ್ನು ಹಿಂಭಾಗದಿಂದ ಹೊಕ್ಕು ಕಿಟಕಿಂದಲೇ ಸರೋಜಮ್ಮನ ದರ್ಶನ ಮಾಡಿಕೊಂಡು ಭಾರವಾದ ಮನಸ್ಸಿನಿಂದ ಹೊರಬಂದು ಕಾರು ಓಡಿಸತೊಡಗಿದ ಭರತ ಖಾನ ಕಾರು Read More