ಅಕ್ಕಾ, ಅಕ್ರೂರ ಬಂದನಂತೆ!

ರಚನೆ : ಪುರಂದರದಾಸರು ವಿದ್ಯಾಭೂಷಣ ಅಕ್ಕಾ, ನಂದಗೋಪನ ಅರಮನೆಯ ಒಳಗೊಬ್ಬ ಅಕ್ರೂರ ಬಂದನಂತೆ ಹೊಕ್ಕು ಬಳಸುವಳಲ್ಲ, ಹುಸಿಯನಾಡುವಳಲ್ಲ ಇಕ್ಕೋ, ಬಾಗಿಲ ಮುಂದೆ ಈಗ ರಥವ ಕಂಡೆ | ಮಥುರಾ ಪಟ್ಟಣವಂತೆ, ಮಾವ ಕಂಸನಂತೆ ನದಿಯ ದಾಟಲುಬೇಕಂತೆ, ಬದಲು ಮಾತಿಲ್ಲವಂತೆ, ಏನೆಂಬೆ ಏಣಾಕ್ಷಿ ಉದಯದಿ ಪಯಣವಂತೆ, ಹೇ ಕಾಂತೆ | ಅಲ್ಲೇ ಹುಟ್ಟಿದನಂತೆ, ಅರಸಿನಳಿಯನಂತೆ, ಇಲ್ಲಿಗೆ ಬಂದನಂತೆ, Read More

ಬಂದಿದೆ ದೂರು ಬರಿದೆ ಪಾಂಡವರಿಗೆ

ರಚನೆ : ಕನಕದಾಸರು ಬಂದಿದೆ ದೂರು ಬರಿದೆ ಪಾಂಡವರಿಗೆ ಕೊಂದವರಿವರು ಕೌರವರನೆಂಬಪಕೀರ್ತಿ ||ಪಲ್ಲವಿ|| ಮುನ್ನಿನ ವೈರದಿ ಕಡುಸ್ನೇಹವ ಮಾಡಿ ಉನ್ನಂತಲೆತ್ತ ಪಗಡೆಯಾಡಿಸಿ ತನ್ನ ಕುಹಕದಿಂದ ಕುರುಬಲವನು ಕೊಂದ ಘನ್ನಘಾತುಕ ಶಕುನಿಯೋ? ಪಾಂಡವರೋ? ||೧|| ಮರಣ ತನ್ನಿಚ್ಚೆಯೊಳುಳ್ಳ ಗಾಂಗೇಯನು ಧುರದಲಿ ಷಂಡನ ನೆಪದಿಂದಲಿ ಸರಳ ಮಂಚದ ಮೇಲೆ ಮಲಗಿ ಮೊಮ್ಮಗನನ್ನು ಕೊರಳ ಕೊಯ್ದವ ಭೀಷ್ಮನೋ? ಪಾಂಡವರೋ? ||೨|| Read More

ಬೆಂಕಿಬಿದ್ದ ಕಾವೇರಿಯ ನೆನಪಲ್ಲಿ

ಪ್ರತಿಬಾರಿ ಭಾರತ ಪ್ರವಾಸಕ್ಕೆ ಮುನ್ನ ನಾನೊಂದು To do ಪಟ್ಟಿ ತಯಾರಿಸುತ್ತೇನೆ – ಬಹುಶಃ ಬಹುಪಾಲು ಅನಿವಾಸಿಗಳು ಮಾಡುವ ಹಾಗೇ. ಅಲ್ಲಿಂದ ಈ ಬಾರಿ ತರಬೇಕಾದ್ದೇನು? ಈ ಬಾರಿ ಯಾರನ್ನು ತಪ್ಪದೆ ಭೇಟಿ ಮಾಡಬೇಕು? ಯಾವೆಲ್ಲಾ ಊರುಗಳನ್ನು ಸುತ್ತಬೇಕು? ಆಪತ್ತು ಎದುರಾದಾಗ ಮುಳುಗದಂತೆ ಕೈಹಿಡಿದು ಮೇಲೆತ್ತಿದ ಯಾವೆಲ್ಲಾ ದೈವ ಸನ್ನಿಧಿಗಳಿಗೆ ಮುಡಿಪು ಒಪ್ಪಿಸಬೇಕು? ವಿದ್ಯಾರ್ಥಿ ಭವನದ Read More

ರಾಮನ ಅವತಾರ ರಘುಕುಲ ಸೋಮನ ಅವತಾರ!

ಚಿತ್ರ :  ಭೂಕೈಲಾಸ (೧೯೫೮) ಸಾಹಿತ್ಯ : ಕು.ರಾ.ಸೀತಾರಾಮಶಾಸ್ತ್ರಿ ಸಂಗೀತ : ಆರ್. ಗೋವರ್ಧನ್, ಆರ್.ಸುದರ್ಶನಂ ಗಾಯಕ : ಶಿರ್ಕಾಳಿ ಗೋವಿಂದರಾಜನ್ ಹಾಡು ಕೇಳಿ ದ್ವಾರಪಾಲರ ಮರಳಿ ಬಳಿಗೊಯ್ವ ಕೃಪೆಯೋ? ಜಾರತನ ಸದೆಬಡಿವ ಸಂಭ್ರಮದ ನೆಪವೋ? ರಾಮನ ಅವತಾರ ರಘುಕುಲ ಸೋಮನ ಅವತಾರ! ನಿರುಪಮ ಸಂಯಮ ಜೀವನ ಸಾರ ಹರಿವುದು ಭೂಮಿಯ ಭಾರ ! ದಾಶರಥಿಯ Read More

ವಿರೋಧವಿಲ್ಲ ವಿರೋಧಿಗೆ

ಹಬ್ಬ ಬಂದರೂ ಹೊಸದೇನಿಲ್ಲ; ಬಕೇಟಿನಲ್ಲಿ ಕದರಬೇಕಿಲ್ಲ ಸಗಣಿ ನೀರು ಬೀದಿಯ ಧೂಳಡಗುವಂತೆ ಚಿಲ್ಲನೆ ನೀರೆರಚಿ ಹೆಣೆಯಬೇಕಿಲ್ಲ ಚುಕ್ಕಿ ಚೆಲ್ಲಿ ರಂಗೋಲಿ ಚಪ್ಪರವ ಹೊಸ್ತಿಲಿನ ನೆತ್ತಿಗೆ ಕೆಮ್ಮಣ್ಣಿನ ಬದಲು ಕೆಂಪು ಪೇಂಟಿದೆ ತೋರಣಕ್ಕೆ ಮಾವಿಲ್ಲ, ಬೇವೂ ಬೇಕಿಲ್ಲ ಎಣ್ಣೆಯ ಜಿಗುಟು ತೊಳೆಯಲು ಸೀಗೆಯ ಘಾಟು ಸಹಿಸಬೇಕಿಲ್ಲ ಶವರಿನ ಅಡಿ ಮೈತೆರೆದು ನಿಂತರೆ ನಿತ್ಯ ಅಭ್ಯಂಜನವೇ, ಬೇಕಿಲ್ಲ ಅದಕೊಂದು Read More