ಹೇಮಂತ
ಕವಿ – ಎಸ್.ವಿ. ಪರಮೇಶ್ವರ ಭಟ್ಟ ೧ ಹೇಮಂತ ಋತುರಾಜನಿಳೆಗೆ ಬಂದಿಳಿವಂದು ಹೂವಿಲ್ಲ ಹಸಿರಿಲ್ಲ ಚಿಗುರೆಲೆಗಳಿಲ್ಲ. ದುಂಬಿಗಳ ದನಿಯಿಲ್ಲ ಹಕ್ಕಿಗಳ ಹಾಡಿಲ್ಲ ಕುಸುಮಗಂಧ ತರುವ ಮರುತನಿಲ್ಲ. ೨ ಚೆಂಗುಡಿಯ ಸಿಂಗರದ ವರವರೂಥಗಳೆನಿಸಿ ಮೆರೆವ ಮರಗಿಡಬಳ್ಳಿ ಬರಿದೆ ಮೊಗವಿಳುಹಿ ಮೌನದಲಿ ಮನದೆಗೆದು ಮನಮುರಿದು ನಿಂದಿಹವು ಭಾಗ್ಯಹೀನರವೋಲು ದೀನರೆಂದೆನಿಸಿ. ೩ ಮಂಜು ಮುಸುಕನು ಹೊದ್ದು ಹೊಲಗದ್ದೆಗಳು ಮಲಗಿ ಸುಯ್ಯೆಲರ Read More