ಹಸಿರು ಗಾಜಿನ ಬಳೆಗಳೇ, ಸ್ತ್ರೀ ಕುಲದ ಶುಭ ಸ್ವರಗಳೇ

ಚಿತ್ರ : ಅವನೇ ನನ್ನ ಗಂಡ ಸಾಹಿತ್ಯ, ಸಂಗೀತ : ಹಂಸಲೇಖ ಗಾಯಕಿ : ಲತಾ ಹಂಸಲೇಖ ಹಸಿರು ಗಾಜಿನ ಬಳೆಗಳೇ ಸ್ತ್ರೀ ಕುಲದ ಶುಭ ಸ್ವರಗಳೇ ಈ ಕೈಗಳಿಗೆ ಶೃಂಗಾರವೇ ನೀವ್ ಘಲ್ಲೆಂದರೆ ಸಂಗೀತವೇ ನಿಲ್ಲದ ಗಾನ ನಿಮ್ಮದಮ್ಮಾ ||ಪಲ್ಲವಿ|| ತೊಟ್ಟಿಲಿನ ಕೂಸಿಗೆ ದೃಷ್ಟಿ ಇದು ತಾನೇ? ಮೊಡವೆಯ ವಯಸಿಗೆ ಒಡವೆ ಇದು ತಾನೇ? Read More

ಸಮಾಜ ಭೈರವ – ಗೋಪಾಲಕೃಷ್ಣ ಅಡಿಗ

ನನ್ನ ಮನವ ನನಗೆ ಕೊಡು ಓ ಸಮಾಜ ಭೈರವ; ನನ್ನ ನಗೆಯ ನನ್ನ ಬಗೆಯ ನನ್ನ ಜಗವ ನನಗೆ ಬಿಡು, ನನ್ನ ಮನವ ನನಗೆ ಕೊಡು. ತೊಡಿಸ ಬರಲು ಬೇಡ ನಿನ್ನ ಹೊನ್ನ ಸಂಕೋಲೆಯ, ಬಳಿಕ ಮುಗುಳ ಮಾಲೆಯ; ಉಡಿಸ ಬರಲು ಬೇಡ ನನ್ನ ಮನಕೆ ನಿನ್ನ ಚೇಲವ, ನಿನ್ನ ದಯೆಯ ಸಾಲವ; ಬಿಟ್ಟು ಬಿಡೋ Read More

ಲಘುವಾಗೆಲೆ ಮನ – ಪುತಿನ

ಕವಿ – ಪುತಿನ ಲಘುವಾಗೆಲೆ ಮನ ಗೆಲವಾಗೆಲೆ ಮನ ಹಾರು ನನ್ನ ಬಿಟ್ಟು ಹಾರಿ ಹರಿಯ ಮುಟ್ಟು ನನಗಂಟಲು ನೀನಾಗುವೆ ಕಷ್ಮಲ ನನ್ನ ತೊರೆಯೆ ನೀ ನಿರ್ಮಲ ನಿಷ್ಕಳ ಹರಿಯೊ ನನ್ನ ಬಿಟ್ಟು ಮುಂಬರಿದು ಹರಿಯ ಮುಟ್ಟು ನೀಲದಾಗಸದ ಹರಹೊಳು ಹಾರುತ ಅಂಚೆಯಂತೆ ಮುಗಿಲಂಚನು ಸೇರುತ ಕ್ಷೀರಾಬ್ಧಿಶಾಯಿ ಶಾಮಸುಂದರನ ಉಸಿರೊಳಾಡು ನೀ ಅವನುಸಿರಾಗುತ ಬೆಳಕಿಗೊಲಿದು ಬಿರಿದಲರಿನಲರುಬರೆ Read More

ಆರು ಬಾಳಿದರೇನು? ಆರು ಬದುಕಿದರೇನು?

ರಚನೆ : ಕನಕದಾಸರು ಆರು ಬಾಳಿದರೇನು ಆರು ಬದುಕಿದರೇನು ನಾರಾಯಣನ ಸ್ಮರಣೆ ನಮಗಿಲ್ಲದನಕ ||ಪ|| ಉಣ್ಣಬರದವರಲ್ಲಿ ಊರೂಟವಾದರೇನು ಹಣ್ಣು ಬಿಡದ ಮರ ಹಾಳಾದರೇನು ಕಣ್ಣಿಲ್ಲದವಗಿನ್ನು ಕನ್ನಡಿಯಿದ್ದು ಫಲವೇನು ಪುಣ್ಯವಿಲ್ಲದವನ ಪ್ರೌಢಿಮೆ ಮೆರೆದರೇನು ||೧|| ಅಕ್ಕರಿಲ್ಲದವರಿಗೆ ಮಕ್ಕಳಿದ್ದು ಫಲವೇನು ಹೊಕ್ಕು ನಡೆಯದ ನಂಟತನದೊಳೇನು ರೊಕ್ಕವಿಲ್ಲದವಗೆ ಬಂಧುಗಳು ಇದ್ದರೇನು ಮರ್ಕಟನ ಕೈಯೊಳಗೆ ಮಾಣಿಕ್ಯವಿದ್ದರೇನು ||೨|| ಅಲ್ಪದೊರೆಗಳ ಜೀತ ಎಷ್ಟು Read More

ಇಷ್ಟು ದಿನ ಈ ವೈಕುಂಠ

ರಚನೆ : ಕನಕದಾಸರು ವಿದ್ಯಾಭೂಷಣ ಇಷ್ಟು ದಿನ ಈ ವೈಕುಂಠ ಎಷ್ಟು ದೂರವೊ ಎನ್ನುತಲಿದ್ದೆ ದೃಷ್ಟಿಯಿಂದಲಿ ನಾನು ಕಂಡೆ ಸೃಷ್ಟಿಗೀಶನೆ ಶ್ರೀರಂಗಶಾಯಿ ||ಪಲ್ಲವಿ|| ಎಂಟು ಏಳನು ಕಳೆದುದರಿಂದೆ ಭಂಟರೈವರ ತುಳಿದುದರಿಂದೆ ತುಂಟಕನೊಬ್ಬನ ತರಿದುದರಿಂದೆ ಭಂಟನಾಗಿ ಬಂದೆನೋ ರಂಗಶಾಯಿ ||೧|| ವರ್ಜ ವೈಢೂರ್ಯದ ತೊಲೆಗಳ ಕಂಡೆ ಪ್ರಜ್ವಲಿಪ ಮಹಾದ್ವಾರವ ಕಂಡೆ ನಿರ್ಜರಾದಿ ಮುನಿಗಳ ನಾ ಕಂಡೆ ದುರ್ಜನಾಂತಕನೆ Read More