ಅಪ್ಪಾ! ಅಪ್ಪಾ! ನಂಗೆ ನೀನು ಬೇಕಪ್ಪಾ!
ನಾನು ನಮ್ಮ ತಂದೆಯನ್ನು ‘ಅಣ್ಣ’ ಎನ್ನುತ್ತಿದ್ದೆ. ನಾನೇನು, ನಮ್ಮ ಶಾಲೆಯಲ್ಲಿ ಓದುತ್ತಿದ್ದ ಮುಕ್ಕಾಲು ಪಾಲು ಹುಡುಗಿಯರೆಲ್ಲಾ ತಮ್ಮ ತಂದೆಯನ್ನು ‘ಅಣ್ಣಾ’ ಎಂದೇ ಕರೆಯುತ್ತಿದ್ದರು. ಒಬ್ಬಿಬ್ಬರು, ‘ಅಪ್ಪಾಜಿ’ ಅನ್ನುತ್ತಿದ್ದರು. ನನ್ನೊಂದಿಗೆ ಓದುತ್ತಿದ್ದ ಕೆಲವು ಮಾರವಾಡಿ ಮನೆಯ ಹುಡುಗಿಯರು ಮಾತ್ರ ‘ದಾದಾಜಿ’, ‘ಬಾಬೂಜಿ’ ಇತ್ಯಾದಿ ನಾವು ಕೇಳೇ ಇಲ್ಲದ ರೀತಿಯಲ್ಲಿ ತಮ್ಮ ತಂದೆಯರನ್ನು ಸಂಬೋಧಿಸುತ್ತಿದ್ದರು. ಇವರೆಲ್ಲರೂ, ವ್ಯಾಪಾರಕ್ಕೆಂದು ಉತ್ತರಭಾರತದ Read More