ತೆರೆಯೋ ಬ್ಲಾಗಿಲನು!

ಒಂದಾನೊಂದು ಕಾಲದಲ್ಲಿ, ಅಂದರೆ ತುಂಬಾ ಹಿಂದೇನಲ್ಲ. ಅದು ಬ್ಲಾಗುಗಳ ಬಾಗಿಲು ತೆರೆದುಕೊಳ್ಳುತ್ತಿದ್ದ ಕಾಲ. ಒಂದೊಂದಾಗಿ, ಕನ್ನಡ ಬ್ಲಾಗುಗಳು ಶುರುವಾಗುತ್ತಿದ್ದವು. ದಿನ ಬೆಳಗಾದರೆ, ಚಂದಚಂದದ ಕಾವ್ಯತ್ಮಕ ಹೆಸರಿನೊಂದಿಗೆ ಹೊಸದೊಂದು ಬ್ಲಾಗ್ ವೆಬ್ ಅಂಗಳದಲ್ಲಿ ಅಂಬೆಗಾಲಿಡುತ್ತಾ ಅಡಿಯಿಡುತ್ತಿತ್ತು ಅಕ್ಷರಗಳ ತೋರಣ ಕಟ್ಟಿದ್ದ, ಆ ಸುಂದರ ಮನೆಗಳಿಗೆ ಹೋಗಿಬರುವುದೆಂದರೆ ನನಗಂತೂ ಖುಷಿಯೋ ಖುಷಿ. ಚಂದದ ಸೀರೆಯುಟ್ಟು, ಅಂದವಾಗಿ ಅಲಂಕರಿಸಿಕೊಂಡು, ಮನೆಯಿಂದ Read More

ನೆನಪಿನಲ್ಲೊಂದು ಚಿತ್ರ

‘ಪುಟ್ಟಣ್ಣಾ, ಇಲ್ಲೇ ಇರ್ತೀಯಾ? ಅಕ್ಕನ ಜೊತೆ ಹೋಗಿ, ಅಲ್ಲಿ…. ಕಾಣ್ತಾ ಇದೆ ನೋಡು. ಆ ಅಂಗಡಿಗೆ ಹೋಗಿ ಈಗ ಬಂದುಬಿಡ್ತೀವಿ. ಬರ್ತಾ ನಿಂಗೆ ಚಾಕಲೇಟ್ ತರ್ತೀವಿ. ಆಯ್ತಾ?’ ತಾಯಿ ನುಡಿದಾಗ ಗುಂಗುರುಗೂದಲ ಪುಟ್ಟನ ಕಣ್ಣುಗಳಲ್ಲಿ ಚಕ್ಕನೆ ಹರವಿಕೊಂಡ ಆಸೆಯ ಕಾಮನಬಿಲ್ಲು. ತನಗೆ ಸಿಗಲಿದ್ದ ಸಿಹಿತುಣುಕಿನ ಆಸೆಗೆ, ತಾಯಿ ಮತ್ತು ತನಗಿಂತ ಸ್ವಲ್ಪ ದೊಡ್ಡವಳಾದ ಅಕ್ಕನ ಜೊತೆ Read More

ಇಷ್ಟುಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ…

ಕವಿ – ಎಚ್. ಎಸ್. ವೆಂಕಟೇಶಮೂರ್ತಿ ಗಾಯಕಿ – ಪಲ್ಲವಿ ಅರುಣ್ ಹಾಡು ಕೇಳಿ ಇಷ್ಟುಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ ಅರಿತೆವೇನು ನಾವು ನಮ್ಮ ಅಂತರಾಳವ? ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ ನೀರಿನಾಳ ತಿಳಿಯಿತೇನು ಹಾಯಿದೋಣಿಗೆ? ಸದಾಕಾಲ ತಬ್ಬುವಂತೆ ಮೇಲೆ ಬಾಗಿಯೂ ಮಣ್ಣ ಮುತ್ತು ದೊರಕಿತೇನು ನೀಲಿ ಬಾನಿಗೆ? ಸಾವಿರಾರು ಮುಖದ ಚೆಲುವ ಹಿಡಿದು Read More

ಅವಳು ಬಂದಿದ್ದಳು…

ಕೈತೋಟದಲ್ಲಿ ಗಿಡಗಳ ಪಾತಿಯಲ್ಲಿ ಉದುರಿಬಿದ್ದ ಎಲೆಗಳನ್ನು ಹೆಕ್ಕುತ್ತಿದ್ದೆ. ಹಿಂದೇನೋ ಸದ್ದಾದಂತಾಗಿ ತಿರುಗಿದೆ. ಅವಳು ನಿಂತಿದ್ದಳು. ಕಣ್ಣುಗಳಲ್ಲಿ ವರ್ಷಗಳ ನಿದ್ರೆ ಬಾಕಿ ಇದ್ದಷ್ಟು ಆಯಾಸ. ಮುಖಭಾವ ಎಂದಿನಂತಿರಲಿಲ್ಲ. ಯಾವುದೋ ನಾನರಿಯದ ಸಂಕಟ ಅಲ್ಲಿದ್ದಂತಿತ್ತು. ‘ಅಂತೂ ಬಂದೆಯಾ? ಆ ದಿನ ಅದೇನೋ ಅವಸರವಿದ್ದಂತೆ ಇದ್ದಕ್ಕಿದ್ದಂತೆ ಎದ್ದು ಹೋದವಳು. ಈಗ ತಲೆ ಹಾಕುತ್ತಿದ್ದೀಯಲ್ಲ?’ ಎಂದೆ, ದೂರಿನ ದನಿಯಲ್ಲಿ. ಅವಳು ಅಸಹಾಯಕಳಂತೆ Read More

ಯಾವ ಮೋಹನ?

ಮದುವೆಯಾಗಿ ಇಪ್ಪತ್ತೈದು ಕಳೆದರೂ ಆಗೀಗ ಫಂಕ್ಷನ್ನುಗಳಲ್ಲಿ ಹೊರಗೆ ಬಂದು ಉಸಿರೆಳೆದುಕೊಳ್ಳುವ ಅದೇ ಭಾರಿ ದುಬಾರಿ ಧಾರೆ ಸೀರೆಗಳು, ಎಂದೋ ಫ್ಯಾಷನ್ ಆಗಿದ್ದು ಈಗ ಫ್ಯಾಷನ್ ಅಂಗಳದಿಂದ ಒದ್ದಾಚೆ ಹಾಕಿರುವ ಅದೇ ಉದ್ದ ತೋಳಿನ ಅಂಚು ತೊಡಿಸಿದ ರವಿಕೆಗಳಲ್ಲಿ ಬಾಬ್ ಅಲ್ಲದ, ಜಡೆಯೂ ಅಲ್ಲದ ಕರಿ-ಬಿಳಿ ಕೂದಲಿಗೆ ಮೆಹಂದಿ ಸೋಕಿದ ಕೆಂಬಣ್ಣದ ರಂಗು. ಬಂಗಾರ ಈ ಪಾಟಿ Read More