ಲಕ್ಷ್ಮೀಕಾಂತ ಬಾರೊ

ಲಕ್ಷ್ಮೀಕಾಂತ ಬಾರೊ
ಶುಭ ಲಕ್ಷಣವಂತ ಬಾರೊ||ಪಲ್ಲವಿ||
ಪಕ್ಷಿವಾಹನ ಏರಿದವನೆ ಪಾವನಮೂರ್ತಿ ಬಾರೊ ||ಅನು||

ಆದಿಮೂಲ ವಿಗ್ರಹ ವಿನೋದಿ ನೀನೇ ಬಾರೊ
ಸಾಧುಸಜ್ಜನ ಸತ್ಯಯೋನಿ ದಾನಿ ನೀನೇ ಬಾರೊ||-೧-||

ಗಾಡಿಕಾರ ಕೃಷ್ಣ ನಿನ್ನ ಬೇಡಿಕೊಂಬೆ ಬಾರೊ
ರೂಢ ಮಾತನಾಡಿ ಸರ್ವರೂಢಿಗೊಡೆಯ ಬಾರೊ ||-೨-||

ನಿನ್ನ ಪಾದಂಗಳ ನಾನು ಬಣ್ಣಿಸಿ ಕರೆವೆ ಬಾರೊ
ಪನ್ನಗಶಯನ ಪುರಂದರ ವಿಠಲ ನೀ ಬಾರೊ ||-೩-||

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ತಿರುಪತಿ ವೆಂಕಟರಮಣ, ನಿನಗೇತಕೆ ಬಾರದು ಕರುಣ?ತಿರುಪತಿ ವೆಂಕಟರಮಣ, ನಿನಗೇತಕೆ ಬಾರದು ಕರುಣ?

ಪುತ್ತೂರು ನರಸಿಂಹನಾಯಕರ ದನಿಯಲ್ಲಿ ತಿರುಪತಿ ವೆಂಕಟರಮಣ ನಿನಗೇತಕೆ ಬಾರದೊ ಕರುಣ ನಂಬಿದೆ ನಿನ್ನಯ ಚರಣ ಪರಿಪಾಲಿಸಬೇಕೋ ಕರುಣ ಅಳಗಿರಿಯಿಂದಲಿ ಬಂದ ಸ್ವಾಮಿ ಅಂಜನ ಗಿರಿಯಲಿ ನಿಂದ ಕೊಳಲನೂದುವ ಚಂದ ನಮ್ಮ ಕುಂಡಲರಾಯ ಮುಕುಂದ ಬೇಟೆಯಾಡುತ ಬಂದ ಸ್ವಾಮಿ ಬೆಟ್ಟದ ಮೇಲೆ ನಿಂದ

ನಿನ್ನ ಒಲುಮೆಯಿಂದ ನಿಖಿಳ ಜನರು ಬಂದುನಿನ್ನ ಒಲುಮೆಯಿಂದ ನಿಖಿಳ ಜನರು ಬಂದು

ರಚನೆ – ವಿಜಯ ದಾಸರು ಗಾಯಕ – ರಾಯಚೂರ್ ಶೇಷಗಿರಿದಾಸ್ ಸಂಗೀತ – ಪ್ರವೀಣ್ ಗೋಡ್ಕಿಂಡಿ ಹಾಡು ಕೇಳಿ ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು ಮನ್ನಿಸುವರೊ ಮಹರಾಯ ಎನ್ನ ಪುಣ್ಯಗಳಿಂದ ಈ ಪರಿ ಉಂಟೇನೋ ನಿನ್ನದೇ ಸಕಲ ಸಂಪತ್ತು ||ಪಲ್ಲವಿ||

ನಾನೇಕೆ ಬಡವನು? ನಾನೇಕೆ ಪರದೇಶಿ?ನಾನೇಕೆ ಬಡವನು? ನಾನೇಕೆ ಪರದೇಶಿ?

ರಚನೆ – ಪುರಂದರದಾಸರು ವಿದ್ಯಾಭೂಷಣರ ದನಿಯಲ್ಲಿ ನಾನೇಕೆ ಬಡವನೊ ನಾನೇಕೆ ಪರದೇಶಿ ಶ್ರೀನಿಧೇ ಹರಿ ಎನಗೆ ನೀನಿರುವ ತನಕ||ಪ|| ಪುಟ್ಟಿಸಿದ ತಾಯ್ತಂದೆ ಇಷ್ಟಮಿತ್ರನು ನೀನೆ ಅಷ್ಟ ಬಂಧು ಬಳಗ ಸರ್ವ ನೀನೆ ಪೆಟ್ಟಿಗೆಯ ಒಳಗಿನ ಅಷ್ಟಾಭರಣ ನೀನೆ ಶ್ರೇಷ್ಠ ಮೂರುತಿ ಕೃಷ್ಣ