ದಯವಿರಲಿ ದಯವಿರಲಿ ದಾಮೋದರ – Dayavirali Damodara

ರಚನೆ : ಗೋಪಾಲದಾಸರು

ದಯವಿರಲಿ ದಯವಿರಲಿ ದಾಮೋದರ ರಚನೆ – ಗೋಪಾಲದಾಸರು ದಯವಿರಲಿ ದಯವಿರಲಿ ದಾಮೋದರ ||ಪಲ್ಲವಿ||

ಸಯವಾಗಿ ಬಿಡದೆನ್ನ ಸಾಕುವ ಶ್ರೀಕೃಷ್ಣ ||ಅನು ಪಲ್ಲವಿ||

ಹೋಗುವ ಹಾದಿಯಲಿ ಹೋದ ಹಾಗೆಲ್ಲ ನಾ ಸಾಗುವವ ನಾನಲ್ಲ ನಿನ್ನ ಸ್ಮರಣೆಯ ಬಿಟ್ಟು ತೂಗಿ ತೊಟ್ಟಿಲು ಕೊನೆಗೆ ಸ್ಥಳದಲ್ಲೆ ನಿಲುವಂತೆ ಹ್ಯಾಂಗೆ ನಡೆಸುವಿ ಹಾಂಗೆ ನಡಕೊಂಬೆ ಸ್ವಾಮಿ ||-೧-||

ಬಂದೆನೊ ನಾನಿಲ್ಲಿ ಬಹುಜನ್ಮದ ಸುಕೃತ- ದಿಂದ ನಿನ್ನ ಬಳಿಗೆ ಇಂದಿರೇಶ ಒಂದು ಮಾತ್ರವು ಬಿಟ್ಟು ಸಕಲವು ಅರ್ಪಿಸಿದೆ ಬಂಧನವ ಕಡಿವ ಭಕುತಿಯು ಜ್ಞಾನ ಭಕುತಿ ಕೊಡು ಸ್ವಾಮಿ ||-೨-||

ಎನಗಾವುದೂ ಒಲ್ಲೆ ಎಲ್ಲೆಲ್ಲಿ ಹೋದರೂ ಕ್ಷಣ ಬಿಡದೆ ನಿನ್ನ ನೋಳ್ಪ ಜ್ಞಾನವ ಕೊಡೊ ಸ್ವಾಮಿ ಚಿನುಮಯ ಮೂರುತಿ ಗೋಪಾಲವಿಠಲ ಘನಕರುಣಿ ಮಧ್ವಮುನಿ ಮನಮಂದಿರವಾಸ ||-೩-||

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಕರುಣಿಸೋ ರಂಗಾ…ಕರುಣಿಸೋಕರುಣಿಸೋ ರಂಗಾ…ಕರುಣಿಸೋ

ರಚನೆ – ಪುರಂದರದಾಸರು ಗಾಯಕ – ಭೀಮಸೇನ ಜೋಷಿ ಹಾಡು ಕೇಳಿ ಕರುಣಿಸೋ ರಂಗಾ ಕರುಣಿಸೋ ಹಗಲು ಇರುಳು ನಿನ್ನ ಸ್ಮರಣೆ ಮರೆಯದಂತೆ ||ಪಲ್ಲವಿ|| ರುಕುಮಾಂಗದನಂತೆ ವ್ರತವ ನಾನರಿಯೆನೊ ಶುಕ ಮುನಿಯಂತೆ ಸ್ತುತಿಸಲು ಅರಿಯೆ ಬಕವೈರಿ*ಯಂತೆ ಧ್ಯಾನವ ಮಾಡಲರಿಯೆ ದೇವಕಿಯಂತೆ ಮುದ್ದಿಸಲರಿಯೆನೊ

ಬಂದದ್ದೆಲ್ಲಾ ಬರಲಿಬಂದದ್ದೆಲ್ಲಾ ಬರಲಿ

ರಚನೆ – ಪುರಂದರದಾಸರು ಗಾಯಕಿಯರು – Bombay sisters ಹಾಡು ಕೇಳಿ ಬಂದದ್ದೆಲ್ಲಾ ಬರಲಿ ಗೋವಿಂದನ ದಯ ನಮಗಿರಲಿ ||ಪ|| ಮಂದರಧರ ಗೋವಿಂದ ಮುಕುಂದನ ಸಂದರುಶನ ಒಂದಿದ್ದರೆ ಸಾಲದೇ ||ಅನು|| ಆರು ಅರಿಯದಿರಲೆನ್ನ – ಮುರಾರಿಯು ವರದ ಪ್ರಸನ್ನ ತೋರುವ ದುರಿತದ

ವಿಜಯ ಕವಚವಿಜಯ ಕವಚ

ರಚನೆ : ವ್ಯಾಸ ವಿಠಲ (ಕಲ್ಲೂರು ಸುಬ್ಬಣ್ಣಾಚಾರ್ಯ) ಪುತ್ತೂರು ನರಸಿಂಹ ನಾಯಕ್ ದನಿಯಲ್ಲಿ – ಸ್ಮರಿಸಿ ಬದುಕಿರೊ ದಿವ್ಯ ಚರಣಕೆರಗಿರೊ ದುರಿತ ತರಿದು ಪೊರೆವ ವಿಜಯ ಗುರುಗಳೆಂಬರಾ ದಾಸರಾಯನ ದಯವ ಸೂಸಿ ಪಡೆದನಾ ದೋಷರಹಿತನಾ ಸಂತೋಷಭರಿತನಾ ||೧|| ಜ್ಞಾನವಂತನ ಬಲು ನಿಧಾನಿ