ಮೇಲೇರಿದ್ದ ಬೇಳೆಗಳ ಬೆಲೆ ಕೆಳಗಿಳಿಯುತ್ತಾ ಇದೆ. ಈ ಬಾರಿ ಸಮಸ್ಯೆ ಬಿಸಿಬೇಳೆ ಬಾತಿಗೆ ಬೇಕಾದ ತೊಗರಿಬೇಳೆಯದಲ್ಲ. ಹೆಸರುಬೇಳೆಯದು.
ಸುಮ್ಮನೆ ಯೋಚಿಸುತ್ತಿದ್ದೆ .. ಬೇರೆ ಕೆಲಸವಿಲ್ಲದೆ ಅಲ್ಲ 🙂 ಹೆಸರುಬೇಳೆಯ ಹೆಸರು ಮೊದಲು ಹಸಿರುಬೇಳೆ ಎಂದು ಇದ್ದಿರಬಹುದಲ್ಲವೇ? ಏಕೆಂದರೆ ಹೆಸರುಕಾಳಿನ ಬಣ್ಣ ಹಸಿರು. englishನಲ್ಲಿಯೂ green gram ಅಂದರೆ ಹೆಸರುಬೇಳೆ ತಾನೇ? ನಮ್ಮ ತಮಿಳು ಮಿತ್ರರು ಹೆಸರುಬೇಳೆಗೆ “ಪಚ್ಚ ಪರಪು” ,”ಪಯರ್ ಪರಪು” ಎಂದು ಕರೆಯುವುದನ್ನು ಕೇಳಿದ್ದೇನೆ. ತೆಲುಗು,ಮಲೆಯಾಳಂನಲ್ಲಿ , ಬೇರೆ ಬೇರೆ ಭಾಷೆಗಳಲ್ಲಿ ಏನಂತಾರೆ? ಅಲ್ಲೂ ಏನಾದರೂ “ಹಸಿರು” ಸಂಬಂಧಿ ಹೆಸರುಗಳಿವೆಯೇ ಎಂಬ ಕುತೂಹಲ ಅಷ್ಟೇ…
“ಇಗೋ ಕನ್ನಡ” ವೆಂಕಟಸುಬ್ಬಯ್ಯನವರು ಈ ಬಗ್ಗೆ ಎಲ್ಲಾದರೂ ಹೇಳಿರಲೇಬೇಕು. ಗೊತ್ತಿದ್ದರೆ ತಿಳಿಸಿ, ಗೊತ್ತಿರದಿದ್ದರೆ ಬೇಡ ಬಿಡಿ. ತಲೆ ಕೆಡಿಸಿಕೊಳ್ಳಲು ಇದೇನು ತಲೆ ಹೋಗುವ ಸಮಸ್ಯೆ ಅಲ್ಲ. ಹೆಸರುಬೇಳೆ ಹೆಸರು ಕಟ್ಟಿಕೊಂಡು ಏನಾಗಬೇಕಿದೆ? ಹೆಸರುಬೇಳೆ ಸಿಕ್ಕಿದರೆ ಸಾಕು, ಹುಗ್ಗಿಗೆ …ಬರಲಿರುವ ಸಂಕ್ರಾಂತಿಗೆ.. ಅಲ್ವಾ? 🙂
********** ******* ********
ವೇಣಿ,
ತೆಲುಗು, ಮಲಯಾಳಂ ಭಾಷೆಗಳಲ್ಲಿ ಏನನ್ನುತ್ತಾರೋ ಗೊತ್ತಿಲ್ಲ. ನಮ್ಮ ತುಳುವಿನಲ್ಲಿ “ಪದೆಂಗಿ / ಪದೆಂಜಿ” (= ಹಸಿರು ಕಾಳು) ಅನ್ನುತ್ತಾರೆ. ನಮ್ಮ ಅಜ್ಜನ ಮನೆಯಲ್ಲಿ, ಸುಮಾರು ೨೫ – ೩೦ ವರುಷಗಳ ಹಿಂದೆ, ಹೆಸರು, ಹುರುಳಿ, ಉದ್ದುಗಳನ್ನ ಭತ್ತದ ಬೆಳೆಯಾದ ಮೇಲೆ, ಬೆಳೆಸುತ್ತಿದ್ದರು.
ಹೆಸರುಬೇಳೆ ಬಗ್ಗೆ ಗೊತ್ತಿಲ್ಲ.
ಮೈಸೂರ್ ಪಾಕ್ ಬಗ್ಗೆ: ಮಸ್ಸುರು ಅಂದ್ರೆ, ಮರಾಠಿಯಲ್ಲಿ ಕಡಲೆ ಹಿಟ್ಟು 🙂
ನಮ್ಮವರಿಗೆ ಮಸ್ಸುರಿನ ಬದಲು ಮೈಸೂರು ಇಷ್ಟವಾಯಿತೇನೊ, ಮಸ್ಸುರ್ ಪಾಕ್ನಿಂದ ಅದು ಮೈಸೂರ್ ಪಾಕ್ ಆಯ್ತು ಅಂತ ಸುಧದಲ್ಲೊ, ತರಂಗದಲ್ಲೋ ಬಂದಿತ್ತು.
ಇಂತಿ
ಭೂತೇಂದ್ರ
ನಾನು ಬೆಳಗಾವಿ ಮಾತ್ರ Maharashtrakke ಸೇರಿಕೊಳ್ಳೊತ್ತೇನೋ ಅನ್ನೋ ಅಂಜಿಕೆಯಲ್ಲಿದ್ದೆ… ಈಗ ಮೈಸೂರ್ ಪಾಕನ್ನೂ ಬಿಟ್ಟುಕೊಡಬೇಕೆ ? 🙁
తెలుగులొ దీన్ని ‘పెసరు పప్పు’ అంటారు! ‘ప’శబ్దములు తెలుగునుంచి కన్నడంకొస్తే ‘హ’శబ్దాలు అవుతాయి కదు? కాబట్టి ‘పెసరు పప్పు’ కన్నడంలొ ‘హెసరు బేళె’ ఆయింది!
——
ತೆಲುಗಿನಲ್ಲಿ ಇದನ್ನು ‘ಪೆಸರು ಪಪ್ಪು’ ಎನ್ನುತ್ತಾರೆ. ‘ಪ’ ಶಬ್ದಗಳು ತೆಲುಗಿನಿಂದ ಕನ್ನಡಕ್ಕೆ ಬರುವಾಗ ‘ಹ’ ಶಬ್ದಗಳಾಗುತ್ತವಷ್ಟೆ? ಆದ್ದರಿಂದ ‘ಪೆಸರು ಪಪ್ಪು’ ಕನ್ನಡದಲ್ಲಿ ‘ಹೆಸರು ಬೇಳೆ’ ಆಯಿತು. ಅದಕ್ಕೂ ಕನ್ನಡದ ‘ಹೆಸರು’ ಶಬ್ದಕ್ಕೂ ಏನೂ ಸಂಬಂಧವಿಲ್ಲ.
(ಹೆಸರುಬೇಳೆಯಿಂದ ಮಾಡಿದ ದೋಸೆ ‘ಪೆಸರಟ್ಟು’ ಆಂಧ್ರದವರ ಅಚ್ಚುಮೆಚ್ಚಿನ ತಿಂಡಿ. ಪೆಸರಟ್ಟು+ಉಪ್ಮಾ ಒಂದು ಅದ್ಭುತ ಕಾಂಬಿನೇಶನ್ ಆಂಧ್ರಪ್ರದೇಶದವರಿಗೆ!)
ಖಂಡಿತವಾಗಿಯೂ ಇದು ಸತ್ಯ
ಅಂತ ಮೊದಲೇ ಹೇಳುತ್ತೇನೆ.
ಮಲಯಾಳದಲ್ಲಿ ಚೆರು ಪಯರ್ ಅನ್ನುತ್ತಾರೆ ನಮ್ಮ ಹೇಳ ಹೆಸರಿಲ್ಲದ ಬೇಳೆಗೆ.
ಮತ್ತೆ ಭೂತ ಹೇಳಿದ್ದು
ಮೈಸೂರಿನಿಂದ ಪಾಕಿಸ್ತಾನಕ್ಕೆ ಎಕ್ಸ್ಪ್ರೆಸ್ ರೈಲಿನ ಹೆಸರು
ಮೈಸೂರ್-ಪಾಕ್ !
🙂
ಹೆಸರುಬೇಳೆ ಪದ ತೆಲುಗಿನಿಂದ ಕನ್ನಡಕ್ಕೆ ಬಂದಿದೆಯೇ? … ಗೊತ್ತಿರಲಿಲ್ಲ…
ಹಸಿರು – ಈ ದಿಕ್ಕಿನಲ್ಲಿ ಯೋಚಿಸಿದಾಗ, ತುಳು, ತಮಿಳು, ಮಲೆಯಾಳಂ ಭಾಷೆಗಳ ಜೊತೆಗೆ ಹೋಲಿಕೆ ಇರುವ ಹಾಗೆ ಕಾಣುತ್ತಿದೆ.
ಅನ್ವೇಷಿಗಳೇ, ನಿಮ್ಮ ಪಾಡು ಎಲ್ಲಿಗೆ ಬಂತು? “ಖಂಡಿತವಾಗಿಯೂ ಇದು ಸತ್ಯ” ಅಂತ ಪ್ರಮಾಣ ಮಾಡೋ ಗತಿ ತಂದುಕೊಂಡ್ರಲ್ಲಾ..:)
“ಹಸಿರು – ಈ ದಿಕ್ಕಿನಲ್ಲಿ ಯೋಚಿಸಿದಾಗ…” sritri ಉವಾಚ.
ಹಸಿರು ಎಂದು ಒಂದು ದಿಕ್ಕಿದೆಯೇ? ನನಗೆ ಗೊತ್ತಿರುವ ಅಷ್ಟದಿಕ್ಕುಗಳು – ಪೂರ್ವ, ಆಗ್ನೇಯ, ದಕ್ಷಿಣ, ನೈಋತ್ಯ, ಪಶ್ಚಿಮ, ವಾಯವ್ಯ, ಉತ್ತರ ಮತ್ತು ಈಶಾನ್ಯ – ಇವು ಎಂಟು. ಇನ್ನು ಕೆಲವರು ‘ಮೇಲೆ ಮತ್ತು ಕೆಳಗೆ’ ಸಹ ಸೇರಿಸಿ ‘ದಶದಿಕ್ಕು’ಗಳು ಎನ್ನುತ್ತಾರೆ.
ಆದರೆ ‘ಹಸಿರು’?
ಜೋಶಿಯವರು ಯೋಚಿಸುತ್ತಿರುವ ದಿಕ್ಕಂತೂ ಅಲ್ಲವೇ ಅಲ್ಲ 🙂
ಹೆಸರು ಬೇಳೆ…ಬಹುಷ ಹಸಿರು ಇರೋದರಿಂದ ಬಂದಿರಬಹುದೇನೋ..
ಏನೇ ಇರಲಿ..ಬೇಳೆ ಬೆಲೆ ಕಡಿಮೆ ಆದದ್ದು ಒಳ್ಳೆ ಸುದ್ದಿ..
ಓ ಆಗಲೇ ಸಂಕ್ರಾಂತಿ ತಯಾರಿ ಶುರುವಾಯಿತೇ 🙂