ಚಿತ್ರ – AK-47 – (1999)
ಸಾಹಿತ್ಯ ಮತ್ತು ಸಂಗೀತ – ಹಂಸಲೇಖ
ಗಾಯಕರು – ಚಿತ್ರ,ಹರಿಹರನ್
ಕಡಲೋ ಕಡಲೋ ಕಣ್ ಕಡಲೋ
ಮುಗಿಲೋ ಮುಗಿಲೋ ಮನ ಮುಗಿಲೋ
ಕಡಲಲ್ಲೋ ಮುಗಿಲಲ್ಲೋ
ನೀ ನನ್ನ ತೇಲಿಸು
ಕಡಲಲ್ಲೋ ಮುಗಿಲಲ್ಲೋ
ನೀ ನನ್ನ ಬದುಕಿಸು|
ನುಡಿಮುತ್ತುದುರಿಸಬೇಡ
ಪ್ರೇಮಪತ್ರ ರವಾನಿಸಬೇಡ
ನಿನ್ನ ಮುತ್ತಿನ ನಗುವೇ ಸಾಕು
ಆ ನಗುವಲಿ ಒಪ್ಪಿಗೆ ಹಾಕು
ಅರೆ ಸಾಕು ಅರೆ ಸಾಕು
ಆ ನಗುವ ಬಿಸಾಕು|
||ಕಡಲೋ ಕಡಲೋ||
ಮನದ ಬನದ ಒಂಟಿ ಮರದ ಆಸೆ ರೆಂಬೆಗೆ
ಬಿಗಿದೆ ನೀನು ಸ್ನೇಹದ ಸರಪಳಿ ತೂಗುಯ್ಯಾಲೆಗೆ
ಒಳಗೆ ಚಿಗುರು ಹೊರಗೆ ಸಿಬಿರು
ನನ್ನ ಆಸೆಗೆ
ಆತುರ ಕಾಣೆ ಅವಸರ ಕಾಣೆ
ಯಾಕೀ ಪ್ರೀತಿಗೆ
ನಾನೂ ಹೆಣ್ಣೇ ಕಾಣದೇ?
ನನಗೂ ಒಂದು ಮನಸಿದೆ
ತುಟಿಗಳು ಎರಡು ಭಯದಲಿ ನಿಂತು
ಬಿಗಿಯಿತು ಬೀಗಗಳ|
||ನುಡಿಮುತ್ತುದುರಿಸಬೇಡ||
ಇಂದೋ ನಾಳೆ ನಗುವೆ ನೀನು ಅಂತ ಗೊತ್ತಿದೆ
ನಗದೆ ಇದ್ದರೆ ನನ್ನೀ ಪ್ರಾಣ ಕೊಡಲೂ ಗೊತ್ತಿದೆ
ನಕ್ಕರೆ ಲೋಕ ನಗುವುದು ಎಂಬ ಚಿಂತೆ ನಿನ್ನದು
ಎಷ್ಟೇ ಜನುಮ ಆದರೂ ಪಡೆಯೋ ಶಪಥ ನನ್ನದು
ಕಡಲಿಗೆ ಎರಡೂ ತೀರವಿದೆ
ಮುಗಿಲಿಗೆ ಕೊನೆಯೇ ಕಾಣದಿದೆ
ಮನಸಿನ ಮುಗಿಲ ಬೆಳಗಿಸು ಒಮ್ಮೆ
ನನ್ನೀ ಹಂಬಲಕೆ
ಗೆಳತಿಯರನು ಕೇಳಬೇಡ
ಮೇಘದೂತರ ಕಳಿಸಲುಬೇಡ
ನಿನ್ನ ಸಣ್ಣನೆ ನಗುವೇ ಸಾಕು
ಆ ನಗುವಲಿ ಒಪ್ಪಿಗೆ ಹಾಕು
ಅರೆ ಸಾಕು ಅರೆ ಸಾಕು
ಆ ನಗುವ ಬಿಸಾಕು|
||ಕಡಲೋ ಕಡಲೋ||
* * * * * * *
ಆ ನಗುವ ಬಿಸಾಕು,
ಇದೊಂದೇ ಸಾಕು
ಮೆಚ್ಚುಗೆ ಬಿಸಾಕೊಕ್ಕೆ 🙂
ಸಾಹಿತ್ಯದ ಬಗ್ಗೆ ಎರಡು ಮಾತಿಲ್ಲ, *ಚಿಂಚಿ*
ಚಿತ್ರ, *ಚಿಂಚಿ*
ಆದ್ರೆ, ಆ ಕೃತಿ ಲಯ 🙁
*ಹ ನಗುವ ಬಿಸಾಕು* ಅಂತಾನೆ.
*ಹ! ನಗುವ ಬಿಸಾಕು* ಅಂತಲಾದ್ರು ಸಾಹಿತ್ಯ ಇದ್ದಿದ್ರೆ, ಒಪ್ತಿದ್ದೆ, ಇರೋದು *ಆ ನಗುವ ಬಿಸಾಕು* ಎಂದು.
ಅದ್ಯಾಕೊ, ಕುಮರ್ ಶಾನು ಥರಹ ಹಾಡ್ತಾನೆ(ತುಂಬ ಗಾಳಿ)!
ಭಾವನೆ ಎಲ್ಲೊ ಕಳೆದುಹೋಗಿದೆ 🙁
ಇವನ ಬದಲು, ನಮ್ಮವರೇ ಆದ ಹಾಡುಗಾರರಿದ್ದಿದ್ದರೆ, ಭಾವನೆ ಕೂಡ ಅದ್ಭುತವಾಗಿ ಸೇರಿತಿತ್ತು.
ಇಂತಿ
ಅಲ್ಪತೃಪ್ತ
ಭೂತಣ್ಣ
ಹಹಹಹ! ನಗು 🙂
ಅಲ್ಪತೃಪ್ತ ಭೂತಣ್ಣ, ಈ ಹಾಡಿನ ಮಟ್ಟಿಗೆ ಹರಿಹರನ್ ಬಗ್ಗೆ ನನ್ನ ದೂರೇನೂ ಇಲ್ಲ. ಏಕೆಂದರೆ, ಈ ಹಾಡು ಮೊದಲಬಾರಿಗೆ ಕೇಳಿದಾಗ ನನಗೆ ಇದು ಶಿವರಾಜ್ ಕುಮಾರ್ ಹಾಡಿರೋದೇನೋ ಅನ್ನಿಸಿಬಿಟ್ಟಿತ್ತು.(ಆಗ ಹರಿಹರನ್ ಹೆಸರು ಕನ್ನಡಕ್ಕೆ ಇನ್ನೂ ಹೊಸದು) ಅಷ್ಟರ ಮಟ್ಟಿಗೆ ಶಿವಣ್ಣನ ದನಿಗೆ ಹೊಂದಾಣಿಕೆ ಆಗೋ ಹಾಗೆ ಹಾಡಿದ್ದಾರೆ. ಶಿವಣ್ಣನ ಅ-ಹ ಕೂಡ ಅಷ್ಟಕ್ಕಷ್ಟೆ 🙂 ಈ ಹಾಡು 1999ನಲ್ಲಿ ಬಂದಿದ್ದು. ಹರಿಹರನ್ ಕನ್ನಡ ಈಗ ಬಹಳಷ್ಟು ಸುಧಾರಣೆಯಾಗಿದೆ.
ಹೌದು, ನಮ್ಮವರೇ ಹಾಡಿದ್ದರೆ, ಅವರಿಗೆ ಹಾಡಿನ ಸಾಹಿತ್ಯ ಅರ್ಥವಾಗುವುದರಿಂದ ಭಾವ ತುಂಬಿ , ಎದೆ ತುಂಬಿ ಹಾಡುವುದು ಸಾಧ್ಯ. ಆದರೆ ಈಗಿನ ಪರಿಸ್ಥಿತಿಯಲ್ಲಿ ಅದೆಲ್ಲಿ ಸಾಧ್ಯ? ರಾಜೇಶ್ಗಿಂತ ಉತ್ತಮ ಗಾಯಕ ಬೇಕೇ? ಎಷ್ಟೊ ರಾಜೇಶ್ ಹಾಡುಗಳನ್ನು ಕೇಳಿದಾಗ SPB ಅನ್ನಿಸಿಬಿಡುತ್ತದೆ. ಆದರೆ ಆವರು ಹಾಡುವುದು ಕಡಿಮೆಯಾಗಿದೆ. ಅವಕಾಶ ಸಿಕ್ಕರೆ ತಾನೇ?
ಈಚೆಗೆ ಬಂದಿರುವ ಕುನಾಲ್ ಗಾಂಜಾವಾಲ ಎಂಬ ಗಾಯಕನ ಹಾಡುಗಳನ್ನು ಕೇಳಿದಾಗ, ನಮ್ಮ ಕನ್ನಡದ ನಿರ್ಮಾಪಕರ ಪರಭಾಷಾ ವ್ಯಾಮೋಹಕ್ಕೆ ಮಿಗಿಲೇ ಇಲ್ಲ ಅನ್ನಿಸತ್ತೆ. ಈತನ ಉಚ್ಚಾರಣೆ ಪಂಜಾಬಿ ಹಾಡುಗಳಿಗೆ ಸರಿ ಇದೆಯೇ ಹೊರತು ಕನ್ನಡಕ್ಕೆ ಕಿಂಚಿತ್ತೂ ಹೊಂದುವುದಿಲ್ಲ. ಈಗ ಬರುತ್ತಿರುವ ಚಿತ್ರಗಳಿಗೆಲ್ಲ ಕುನಾಲ್ದೇ ಗಾಯನ. ಈ ಗಾಯಕನಿಗೆ ಮಣೆ ಹಾಕುತ್ತಿರುವುದನ್ನು ನೋಡಿದರೆ, ಬೇಸರವಾಗುತ್ತದೆ.
ಈ ಬೇಜಾರಿನ ನಡುವೆಯೂ ಉದಯ ಟಿವಿಯವರು ಕನ್ನಡದ ಗಾಯಕ ಚೇತನ್ಗೆ (ನೆನಪಿರಲಿ) ಉತ್ತಮ ಗಾಯಕ ಪ್ರಶಸ್ತಿ ನೀಡಿದ್ದು ಸಂತೋಷ ತಂದಿತು. 🙂
ಲೀಶ್ಟ್ ಕೊಡ್ತಿನಿ ನೋಡ್ಕೊಳ್ಳಿ (ದೀರೇಂದ್ರ ಗೋಪಾಲ್ ಶೈಲಿ ಲಿ)
೧.ಕುನಾಲ್ ಗಾಂಜವಾಲ
೨. ಹರಿ ಹರನ್
೩. ಉದಿತ್ ನಾರಾಯಣ್ (ಚಿತ್ರ ಹಿಂಸೆ)
೪. ಶ್ರೇಯ ಗೋಶಾಲ್
೫. ಸುನಿಧಿ ಚೌಹಾನ್
೬. ಕುಮಾರ್ ಶಾನು (ಇವನು ಹಿಂದಿಯಲ್ಲೇ ಮೋಸ, ಕನ್ನಡಕ್ಕೆ ಕಂಟಕ)
೭. ಕೆ.ಕೆ. (ಇವ ಮೊನ್ನೆ ಮೊನ್ನೆ ಬಂದು ಸೇರಿದ – ಚೆನ್ನಾಗಿ ಹಾಡ್ತಾನೆ, ಆದ್ರೆ ಉಚ್ಚರಣೆ ರೋಗ)
http://www.musicindiaonline.com/music/kannada/s/movie_name.8657/
ಮೊದಲನೆ ಹಾಡ್ ಕೇಳಿ
೮. ಎಸ್.ಪಿ.ಬಿ.
http://www.musicindiaonline.com/music/kannada/s/movie_name.8612/
ಮನಸೆ ಪ್ರೀತಿಯ ಮನಸೆ ಕೇಳಿ(ಇಷ್ಟ್ ವರುಷವಾದ್ರುವೆ, ಅಭಿಮಾನ, ಅವಮಾನ ಅನ್ನೊಕ್ಕೆ ಬರೋಲ್ಲ ಪುಣ್ಯಾತ್ಮನಿಗೆ)
೯. ಸೋನು ನಿಗಮ್ ( ಇವನದು ಕಾಟ)
೧೦. ಶಂಕರ್ ಮಹದೇವನ್ (ತಾರಕದಲ್ಲಿ ಕಿರುಚೋದೆ ಹಾಡು ಅಂದ್ಕೊಂಡಿದ್ದಾನೆ)
೧೧. ಆರ್.ಪಿ. ಪಟ್ನಾಯಕ್ (:ಓ -ಯಾಕೆ ಯಾಕೆ ಯಾಕೆ)
ಇಂತಿ
ಹ್ಯಾಪ್ಮೋರೆ ಭೂತ
ಭೂತದ ಪಟ್ಟಿ ಯಾವುದರ ಬಗ್ಗೆ ಅಂತ ಗೊತ್ತಾಗಲಿಲ್ಲ. ಇದು ಕಸ್ತೂರಿ ಕನ್ನಡವನ್ನು ತಪ್ಪು ಉಚ್ಚಾರಣೆ ಮಾಡುವ ಗಾಯಕರ ಪಟ್ಟಿಯೋ? ಅಥವಾ ಪರಭಾಷಾ ಗಾಯಕರ ಪಟ್ಟಿಯೋ?
ಬರೀ ಪರಭಾಷಾ ಗಾಯಕರ ಪಟ್ಟಿಯಾಗಿದ್ದರೆ ಮತ್ತೂ ಕೆಲವು ಹೆಸರುಗಳಿವೆ.
1. ಚಿತ್ರ
2. ಮಧು ಬಾಲಕೃಷ್ಣ
3. ಉನ್ನಿ ಕೃಷ್ಣನ್
4. ವಿಜಯ್ ಏಸುದಾಸ್
5. ಅನುರಾಧ ಶ್ರೀರಾಮ್
6. ಮಾಲ್ಗುಡಿ ಶುಭ
7. ರಮೇಶ್ ಚಂದ್ರ
ಭೂತ ಪರಮಾತ್ಮಕೀ ಜೈ ಹೋ…
ನಿಮ್ ಅನಾಲಿಸೀಸ್ ನೋಡಿ ಬಹಳ ಸಂಕಟ ಆಗ್ತಾ ಇದೆಯಲ್ಲಾ ಶಿವನೇ…ಪರಭಾಷಾ ಗಾಯಕರ ಗಂಟಲಿಗೊಂದು ಗೊಟ್ಟಾ ಹಾಕಿ ಕನ್ನಡ ನೀರನ್ನು ಬಿಡೋ ವ್ಯವಸ್ಥೇ ಯಾರ್ ಮಾಡೋರು, ಯಾವಾಗ್ ಮಾಡ್ಯಾರು? ಇಂಥೋರೆಲ್ಲ ಸಂಗೀತ ಕಲಿತ ಮಾತ್ರಕ್ಕೆ ಕನ್ನಡ ಹಾಡುಗಳನ್ನ ಕನ್ನಡದವರ ಥರಾ ಹಾಡೋಕ್ ಬರೋದು ಯಾವ ಜನುಮದಲ್ಲೋ…
ಈ ಹಾಡೂ ಕೇಳಿರ್ಲಿಲ್ಲ, ಈ ಸಾಹಿತ್ಯದ ಬಗ್ಗೆ ಗೊತ್ತೂ ಇರ್ಲಿಲ್ಲ. ಮತ್ತೊಮ್ಮೆ ತಿಳಿಸಿಕೊಟ್ಟಿದ್ದಕ್ಕೆ ವಂದನೆಗಳು.
ತ್ರಿವೇಣಿ,
>ಕಡಲಿಗೆ ಎರಡೂ ತೀರವಿದೆ
ಮುಗಿಲಿಗೆ ಕೊನೆಯೇ ಕಾಣದಿದೆ
ಮನಸಿನ ಮುಗಿಲ ಬೆಳಗಿಸು ಒಮ್ಮೆ
ನನ್ನೀ ಹಂಬಲಕೆ
ಒಂದೊಂದು ಸಲ ಅನಿಸುತ್ತೆ ಕನ್ನಡದಲ್ಲಿ ‘ನೋಡಮ್ಮ ಹುಡುಗಿ ಕೇಳಮ್ಮ ಸರಿಯಾಗಿ’, ‘ಕಾಮಾನ್ ಡಾರ್ಲಿಂಗ್’ ಮುಂತಾದ ಕಂಗ್ಲೀಷ್ ಹಾಡುಗಳ ಜಾತ್ರೆ ಶುರುಮಾಡಿದ ಹಂಸ್ ಇಂತ ಸುಂದರ ಸಾಲು ನೀಡಿದ್ದ ಅಂತಾ !
ನಾನು ನಿಮ್ಮ ಮಾತು ಒಪ್ಪತೀನಿ..ತೇಟ್ ಶಿವಣ್ಣ ಹಾಡಿದಂತೆ ಹಾಡಿದಾರೆ ಹರಿಹರನ್..
ಇನ್ನೂ ಅನ್ಯಭಾಷಾ ಗಾಯಕರ ಬಗ್ಗೆ..
ಇಲ್ಲಿನ ನೆಲದ ಸೊಗಡು-ಭಾಷೆಯ ಗಂಧ ಗೊತ್ತಿಲ್ಲದೆ ಹಾಡೋ ಹಾಡು ಎಷ್ಟೇ ಚೆನ್ನಾಗಿ ಬಂದರೂ ಅದು ಆತ್ಮವಿಲ್ಲದ ದೇಹದಂತನೇ…
ಪುನೀತ್ ಹಾಡುಗಳಿಗೆ ಉದಿತ್ ಖಾಯಂ ಗಿರಾಕಿನಾ??
ಶಿವು, ನೀವಂದಂತೆ, ಹಂಸ್ ಸಾಹಿತ್ಯ ೫೦/೫೦. ಕೆಲವು ಅತ್ಯುತ್ತಮ, ಕೆಲವು ಸಾಧಾರಣ .
ಪುನೀತ್ ಹಾಡುಗಳಿಗೆ ಉದಿತ್ ಖಾಯಂ ಗಿರಾಕಿನಾ?? –
ಇಲ್ಲ, ಈಚೆಗೆ ಪುನೀತ್ ಚಿತ್ರಗಳಿಗೂ ಗಾಂಜಾವಾಲಾನದೇ ಗಾಯನ 🙂