ಕತೆಗಾರರು:- sritri, ಶ್ರೀನಿಧಿ.ಡಿ.ಎಸ್ , ಸುನಾಥ, ಮನಸ್ವಿನಿಜಗಲಿ ಭಾಗವತ, ಸುಶ್ರುತ ದೊಡ್ಡೇರಿ, shiv, ಜ್ಯೋತಿ, ಮಾಲಾ, ಶ್ರೀ, poornima

 ———————————————————————–

ಸಂಜೆ ಮನೆಗೆ ವಾಪಸಾಗುವಾಗ ಏನೋ ಯೋಚಿಸುತ್ತಾ ನಡೆಯುತ್ತಿದ್ದವನು ಎದುರಿಗಿದ್ದ ಗುಂಡಿ ನೋಡದೆ ಇನ್ನೇನು ಆಯ ತಪ್ಪಿ ಉರುಳುತ್ತಿದ್ದ.ಎದುರು ಅಂಗಡಿಯ ಶೆಟ್ಟಿ
ಹೋ…ಹುಷಾರು ಮಾರಾಯ…ಏನು ಅಷ್ಟೊಂದು ಯೋಚನೆ…?ಅಂತ ಕೂಗಿದಾಗ ವಾಸ್ತವಕ್ಕೆ ಬಂದು ಬರಿದೇ ನಕ್ಕು ತಲೆ ಆಡಿಸಿದ ಸುದೀಪ.
ಬೆಂಗಳೂರಿನ ರಸ್ತೆಯಲ್ಲಿ ಗುಂಡಿಗಳಲ್ಲದೇ ಹೂವ ಇರುತ್ತಾ ಗುರೂ…’ಎಂದು ಅಂಗಡಿ ಕಟ್ಟೆ ಮೇಲೆ ಕೂತು ಸಿಗರೇಟು ಸುಡುತ್ತಿದ್ದ ಪಡ್ಡೆಯೊಬ್ಬ ನಗುತ್ತಾ ಕೇಳಿದಾಗ –
ಜೀವನಕ್ಕೂ,ಬೆಂಗಳೂರಿನ ರಸ್ತೆಗಳಿಗೂ ಎಷ್ಟೊಂದು ಸಾಮ್ಯತೆ ಇದೆ ಅಲ್ಲಾ ಅಂತ ಅನ್ನಿಸಿ ಒಂಚೂರು ನಗು ಬಂತು

ಶೆಟ್ಟಿ ತನ್ನ ಲಡಕಾಸಿ ರೇಡಿಯೋ ಟ್ಯೂನ್ ಮಾಡುತ್ತಿದ್ದವನು ಕೊನೆಗೊಂದು ಸ್ಟೇಶನ್ನಿಗೆ ರೇಡಿಯೋ ಸ್ಥಾಪನೆ ಮಾಡಿ ಕೆಲಸದ ಹುಡುಗರಿಗೆ ಜೋರು ದನಿಯಲ್ಲಿ ಬೈಯಲಾರಂಭಿಸಿದ.
ಮೆಟ್ಟಿಲು ಹತ್ತುತ್ತಿದ್ದ ಸುದೀಪನಿಗೆ ಶೆಟ್ಟಿಯ ರೇಡಿಯೋದಲ್ಲಿನ ಯೇಸುದಾಸನ ಧ್ವನಿ ಅಲೆ ಅಲೆಯಾಗಿ ತೇಲಿ ಬಂತು `ಸುನಯ್ ನಾ…ಸುನಯ್ ನಾ…’

ಸುನಯನಳ ನೆನಪು ಜಗ್ಗಿ ಕಾಡಿತು.

ಮನೆಗೆ ಬಂದು ಒಂದು ಕಪ್ಪು ಕಾಫಿ ಮಾಡಿಕೊಂಡು ಟಿ.ವಿ ಹಾಕಿಕೊಂಡು ಕೂತ.ಭಾರತ ತಂಡ ವಿಶ್ವ ಕಪ್ ಸೋತಿದ್ದು ಯಾಕೆ ಎಂಬ ಚರ್ಚೆ`ಸೋತಾಯಿತು…ಈಗ ಚರ್ಚೆ ಮಾಡಿದರೆ ಕಪ್ಪು ಬಂದು ಕೈಯಲ್ಲಿ ಕೂತು ಕೊಳ್ಳುತ್ತಾ…’ಅಂತ ಗೊಣಗಿಕೊಳ್ಳುತ್ತಾ ಚಾನಲ್ ಬದಲಿಸಿದ. ಯಾವುದೋ ಕೆಟ್ಟ ಸಿನಿಮಾ ಹಾಡು ಇವರುಗಳಿಗೆ ಅಭಿರುಚಿಯೇ ಇಲ್ಲವೇ ಅಂತ ಪ್ರಶ್ನಿಸಿಕೊಳ್ಳುತ್ತಾ ಚಾನಲ್ ಗಳ ಬದಲಿಸುತ್ತಿರುವಾಗ ಅನುರಾಧ ಪಟೇಲ್ ಕಂಡಳು.
ಹದಿನೈದು ವರ್ಷಗಳ ಹಿಂದಿನ ಜಾಹಿರಾತು! ಸೀತಾಬಾಯಿಯ ಮೆಚ್ಚಿನದ್ದು ಚಿತ್ರಮಂಜರಿಯ ನಡುವೆ ಅನುರಾಧಳನ್ನು ಕಂಡಾಗಲೆಲ್ಲಾ `ಎಷ್ಟು ಚೆನ್ನಾಗಿ ರೇಶ್ಮೆ ಸೀರೆ ಉಟ್ಟು ಕಾಡಿಗೆ ಹಚ್ಕೋತಾ ಇದಾಳೆ ನೋಡೋ…’ ಅಂತ ಪ್ರತಿಸಾರಿ
ಶೃಂಗಾರ್ ಕಾಡಿಗೆಯ ಆ ಜಾಹಿರಾತು ಬಂದಾಗ ಅಮ್ಮ ಮೆಚ್ಚಿಕೊಂಡು ಹೇಳುತ್ತಿದ್ದರಲ್ಲಾ ಅಂತ ನೆನಪಿಸಿಕೊಂಡ ಚಿಕ್ಕಂದಿನಲ್ಲಿ ನಮ್ಮನೆಯ ಕಪ್ಪು -ಬಿಳುಪು ಟಿ.ವಿಯಲ್ಲಿ ಕಂಡಷ್ಟು ಚೆನ್ನಾಗಿ ಈ ಕಲರ್ ಟಿವಿಯಲ್ಲಿ ಅನುರಾಧ ಕಾಣುತ್ತಿಲ್ಲ ಅನ್ನಿಸಿತು `ನೀನ್ಯಾರದಾದ್ರೂ ಮನೆಯ ಕಲರ್ ಟಿವಿಯಲ್ಲಿ ಇದ್ನ ನೋಡಿದರೆ ಅವಳ ಸೀರೆ ಬಣ್ಣ ಯಾವುದೂ ಅಂತ ತಿಳಿದು ಹೇಳೋ ಅಂತ ಅಮ್ಮ ಅವನ ಹತ್ರ ಕೇಳುತ್ತಿದ್ದದ್ದು ನೆನಪಿಗೆ ಬಂತು. ವಾಲ್ಯೂಮ್ ಜೋರು ಮಾಡಿದ ಅನುರಾಧ ಪಟೇಲ್ ತನ್ಮಯಳಾಗಿ ಹಾಡಿಕೊಳ್ಳುತ್ತಾ ಕಾಡಿಗೆ ಬಳಿದುಕೊಳ್ಳುತ್ತಿದ್ದಳು `ನಯನ ಸುನಯನ ತಾವರೆ ಎಸಳು… ಶೃಂಗಾರ್ ಕಾಡಿಗೆಯಿಂದ ತೀಡಿ ತೀಡಿ…’

ಮತ್ತೆ ಸುನಯನಳ ನೆನಪು….
ತಾವರೆ ಎಸಳಿನಂತಾ ಕಣ್ಣು ಹೊಂದಿದ್ದ,ಕಾಡಿಗೆ ಹಚ್ಚಿಕೊಳ್ಳುತ್ತಿದ್ದ,ಸೀರೆ ಉಡುತ್ತಿದ್ದ ಸುನಯನ ಕೂಡಾ ಅಮ್ಮನಿಗೆ ಇಷ್ಟ ಆಗುತ್ತಿದ್ದಳಾ?
ಸುನಯನಳನ್ನು ಸೊಸೆ ಮಾಡಿ ಕೊಳ್ಳಲು ಅಮ್ಮ ಒಪ್ಪಿಕೊಳ್ಳುತ್ತಿದ್ದರಾ?ಅಥವಾ ಕನ್ನಿಕಾಳಲ್ಲದೇ ಇನ್ಯಾರೂ ನನ್ನ ಸೊಸೆ ಆಗಲು ಸಾಧ್ಯವಿಲ್ಲಾ ಅಂತ ಹಟ ಹಿಡಿಯುತ್ತಿದ್ದರಾ? ತಲೆ ಕೊಡವಿಕೊಂಡ.

ಅಮ್ಮ ಒಪ್ಪಿಕೊಳ್ಳುತ್ತಿದ್ದರೋ ಇಲ್ಲವೋ ಸುನಯನ ನನ್ನವಳಾಗುವುದು ವಿಧಿ ಒಪ್ಪಿಕೊಳ್ಳಲಿಲ್ಲವಲ್ಲಾ… ನಿಟ್ಟುಸಿರು ಬಿಟ್ಟ.

ಸುದೀಪನನ್ನು ಕಾಡಲು ತಮಾಶಿಗೆಂದು`ಐಯ್ಯಾಮ್ ಎಂಗೇಜ್ಡ್ ‘ಅಂತ ಯಾವ ಘಳಿಗೆಯಲ್ಲಿ ಸುನಯನ ಹೇಳಿದ್ದಳೋ ಅಸ್ತು ದೇವತೆಗಳು `ಅಸ್ತು ಅಸ್ತು’ ಅಂದು ಬಿಟ್ಟಿದ್ದರು.

ಸುನಯನಳ ಜತೆ ನೀಲಿಕೇರಿಯ ದಿಬ್ಬದ ಮೇಲೆ ಸೂರ್ಯಾಸ್ತ ನೋಡುತ್ತ, ಅದೂ ಇದೂ ಹರಟುತ್ತ ಕುಳಿತಿದ್ದ ಘಳಿಗೆ ನೆನಪಾಯಿತು…
ಇದ್ದಕ್ಕಿದ್ದಂತೆ ಅವಳೇನೋ ಹೇಳಬೇಕು ಅಂದುಕೊಳ್ಳುತ್ತಿದ್ದಾಳೆ ಅನಿಸಿತು ಸುದೀಪನಿಗೆ. ಕೇಳಿಯೇ ಬಿಟ್ಟ, ‘ಏನಾದ್ರೂ ಹೇಳೋದಿತ್ತಾ?’ ‘ಇಲ್ವಲ್ಲಾ’ ಅಂತ ಜಲಪಾತದಂತೆ ನಕ್ಕಳು ಸುನಯನ. ಮತ್ತೆ ತನಗೆ ಯಾಕೆ ಹಾಗನಿಸಿತೋ ಅರ್ಥವಾಗಲಿಲ್ಲ.
ದಿಬ್ಬದಿಂದ ಕೆಳಗೆ ಬರುವ ವೇಳೆಗೆ ಅದೇನೋ ವಿವರಿಸಲಾಗದ ಬಾಂಧವ್ಯ ಇಬ್ಬರಲ್ಲೂ ಬೆಳೆದಿದೆಯೆಂದು ಆತನಿಗನಿಸಿತು. ಇನ್ನೊಮ್ಮೆ ಆಕೆಗೆ ‘ಐ ಲವ್ ಯು’ ಅನ್ನುವುದರಲ್ಲಿ ಅರ್ಥವಿಲ್ಲವೆನಿಸಿತು. ಸುದೀಪನ ಮನಸಲ್ಲಿ ಆಗಲೇ ಕನಸುಗಳು ದಿಬ್ಬಣ ಹೊರಟಿದ್ದವು…
**********
ಮರುದಿನವೇ ಎಲ್ಲಾ ಲೆಕ್ಕಾಚಾರ ತಲೆ ಕೆಳಗಾಗಿತ್ತು. ರಮೇಶ ವಾಪಸ್ ಬಂದಿದ್ದ. ಅವನ ಜತೆ ಸುತ್ತಾಡಿ ಸಂಜೆ ವಾಪಸ್ ಬರುವಾಗ ಸುನಯನಳಿಗೆ ಮದುವೆ ನಿಶ್ಚಯವಾಗಿದೆ, ಹುಡುಗ ಫಾರಿನ್ ನಲ್ಲಿ ಇರುವ ಕಾರಣ ಬೇಗನೆ ಮದುವೆ ಮುಗಿಸಬೇಕು ಅಂತ ಎಲ್ಲರೂ ನಿರ್ಧರಿಸಿ, ಮದುವೆಗೆ ದಿನ ನಿಶ್ಚಯಿಸಿ ಆಗಿತ್ತು.
ಇನ್ನು ಆ ಊರಿನಲ್ಲಿರುವುದು ಬೇಡವೆನಿಸಿ, ಬೆಂಗಳೂರಿಗೆ ವಾಪಸ್ಸಾದ. ಆದರೂ ಯಾಕೋ ಮನಶಾಂತಿಯಿಲ್ಲವೆನಿಸಿ ಮತ್ತಷ್ಟು ದಿನ ರಜಾ ತೆಗೆದುಕೊಂಡು ಊರಿಗೆ ಹೋಗಿ, ಅಮ್ಮನ ಜತೆ ಇದ್ದು, ಸ್ವಲ್ಪ ಮಟ್ಟಿಗೆ ಮನಸು ತಹಬಂದಿಗೆ ಬಂದ ಮೇಲೆ ವಾಪಸ್ ಬೆಂಗಳೂರಿಗೆ ಬಂದು ಬಿಟ್ಟಿದ್ದ ಸುದೀಪ.
***********
ಯಾಮಿನಿಯ ಜತೆ ಹೊಸ ಪ್ರಾಜೆಕ್ಟ್ ಬಗ್ಗೆ ಡಿಸ್ ಕಷನ್ ಮಾಡಬೇಕಿತ್ತು. ಅವಳ ಚೇಂಬರ್ ಗೆ ಫೈಲ್ ತೆಗೆದುಕೊಂಡು ಹೋದ ಸುದೀಪ.
ಅವನು ಒಳಗೆ ಪ್ರವೇಶಿಸುವುದಕ್ಕೂ ಅವಳ ಫೋನ್ ರಿಂಗ್ ಆಗುವುದಕ್ಕೂ ತಾಳೆಯಾಯಿತು.
‘ಎಕ್ಸ್ಕ್ಯೂಸ್ ಮಿ, ಒಂದೇ ನಿಮಿಷ’ ಅನ್ನುತ್ತ ಫೋನ್ ರಿಸೀವ್ ಮಾಡಿದಳು.
ಫೈಲ್ ಟೇಬಲ್ ಮೇಲಿಟ್ಟ ಸುದೀಪ ನೀರು ಜಗ್ ನಿಂದ ಬಗ್ಗಿಸಿ ಕುಡಿಯಹೊರಟ.
ಫೋನ್ ನಲ್ಲಿ ಆಕೆ ಹೇಳುತ್ತಿದ್ದಳು… ‘ಇಲ್ಲ, ಇವತ್ತು ಬ್ಯುಸಿ, ಸಿಗಕ್ಕಾಗಲ್ಲ ಕಣೋ…’
‘ಹಾಗೇನೇ ಅಂದ್ಕೋ. ಸತ್ಯ ಇದ್ರೂ ಇರಬಹುದು’
ಮಾತಾಡುತ್ತ ಕಿಟಿಕಿ ಕಡೆ ನಡೆದಳು… ಬೇಡ-ಬೇಡವೆಂದರೂ ಆಕೆಯ ಮಾತುಗಳು ಸುದೀಪ್ ನ ಕಿವಿಯ ಮೇಲೆ ಬೀಳುತ್ತಿದ್ದವು…
‘ಎರಡು ಕೈ ಸೇರಿದರೆ ಮಾತ್ರ ಚಪ್ಪಾಳೆ ಅಲ್ವಾ?’
‘………………..’
‘ಟ್ರೈನ್ ನಲ್ಲಿ ಹೋಗ್ತಾ ನೂರಾರು ಸ್ಟೇಷನ್ಸ್ ಸಿಗ್ತಾವೆ, ಪ್ರತಿ ಸ್ಟೇಷನ್ ನಲ್ಲೂ ಇಳಿಯಕ್ಕಾಗತ್ತಾ? ಎಷ್ಟೊಂದು ಸಲ ಯಾವುದೋ ಒಂದು ಸ್ಟೇಷನ್ ಚಂದ ಕಂಡ್ರೆ ಅಲ್ಲಿಳೀತೀವಿ, ತಿಂಡಿ ತಿಂದ್ಬಿಟ್ಟು ಮತ್ತೆ ಟ್ರೈನ್ ಹತ್ಕೋತೀವಿ ಅಲ್ವಾ?’
ಸುದೀಪ ಕೇಳುತ್ತಾ ಕುಳಿತಿದ್ದ, ಅವಳ ಎಲ್ಲಾ ಮಾತು ತನಗೆ ಅರ್ಥವಾಗುತ್ತಿವೆಯೆನಿಸಿತು.
‘………………..’
‘ಹುಚ್ಚ ಕಣೋ ನೀನು, ದೇವದಾಸನ ಕಾಲ ಎಂದೋ ಮುಗೀತು’
‘………………..’
‘ಇಲ್ಲ ಕಣೋ, ಬದುಕಿಗೆ ಫುಲ್ ಸ್ಟಾಪ್ ಒಂದೇ ಇರತ್ತೆ, ನಡುವಲ್ಲಿ ಬರುವವೆಲ್ಲಾ ಕೋಮಾಗಳೇ.. ಫುಲ್ ಸ್ಟಾಪ್ ಬರೋತನ್ಕ ಬದುಕಿನ ಗಾಡಿ ಸಾಗ್ತಿರತ್ತೆ, ಸಾಗ್ತಿರಬೇಕು…’
‘………………..’
‘ನೋಡು, ನಾನು ಹೇಳಬೇಕಾದ್ದು ಹೇಳಿದ್ದೀನಿ, ಆಗದೇ ಇರೋದು ಮನ್ಸಲ್ಲಿಟ್ಕೊಂಡು ಈ ಥರ ತಲೆ ತಿನ್ನೋದಾದ್ರೆ ಇವಾಗ್ಲೇ ನಿಂಗೆ ಗುಡ್ ಬೈ…’
‘………………..’
‘ಇಲ್ಲ. ಯಾವತ್ತೂ ಇಲ್ಲ’
‘………………..’
‘ಸುಮ್ಮನೇ ಅದೇ ಮತ್ತೆ ನೆನಪಿಸ್ಕೊಂಡು ಕೊರಗ್ಬೇಡ, ವಿ ಆರ್ ನಾಟ್ ಮೇಡ್ ಫಾರ್ ಈಚ್ ಅದರ್, ನಿನ್ನ ಸ್ಟೇಶನ್ ಬೇರೆ ಇದೆ, ಗುಡ್ ಬೈ’
ಫೋನ್ ಕಟ್ ಮಾಡಿ ಬಂದಳು, ಸುದೀಪ್ ಎದುರಿಗೆ ಕುಳಿತುಕೊಂಡಳು. ಸುಮ್ಮನಿದ್ದಳು.
ಸುದೀಪ್ ಗಂಟಲಲ್ಲಿ ಪ್ರಶ್ನೆಯೊಂದು ಸಿಕ್ಕಿ ಹಾಕಿಕೊಂಡಿತ್ತು… ಎರಡು ಕ್ಷಣ ತೂಕ ಮಾಡಿದ, ಮೂರನೇ ಕ್ಷಣಕ್ಕೆ ಕೇಳಿಯೇ ಬಿಟ್ಟ..
‘ಯಾವುದೋ ಸ್ಟೇಶನ್ ನಮ್ದು ಅನ್ಕೊಂಡು ಇಳಿದು ಬಿಟ್ಟಿರ್ತೀವಲ್ಲ, ನಮ್ದಲ್ಲ ಅಂತ ಗೊತ್ತಾದ್ಮೇಲೆ ಏನ್ಮಾಡೋದು?’
‘ಇನ್ನೊಂದು ಗಾಡಿ ಬಂದೇ ಬರತ್ತೆ, ಹತ್ಕೊಂಡು ಹೋಗೋದು’ ಅನ್ನುತ್ತ ನಕ್ಕಳು ಯಾಮಿನಿ.
ಆ ನಗೆಯ ಹಿಂದಿನ ಭಾವವನ್ನು ಅಳೆಯಲಾಗಲಿಲ್ಲ ಸುದೀಪ್ ಗೆ.
‘ಹೊಸ ಪ್ರಾಜೆಕ್ಟ್ ಡಿಸ್ ಕಷನ್ ಮಾಡಿ ಫೈನಲೈಸ್ ಮಾಡೋಣ ಅಂತ ಬಂದೆ, ಏನ್ಮಾಡೋಣ?’ ಅಂತ ಕೇಳಿದ.
‘ಏನ್ಮಾಡೋಣ ಅಂತ ಕೇಳ್ತಿದೀರಾ? ಥ್ಯಾಂಕ್ಸ್, ಅರ್ಥ ಮಾಡ್ಕೊಂಡಿದ್ದಕ್ಕೆ… ಮಧ್ಯಾಹ್ನ ನಂತ್ರ ಇಟ್ಕೊಳ್ಳೋಣ್ವಾ?’
‘ಸರಿ, ಹಾಗೇ ಮಾಡೋಣ’ ಅನ್ನುತ್ತ ಎದ್ದು ಬಂದ ಸುದೀಪ.
*************
ಸುದೀಪನ ಏನೇನೋ ಫಿಲಾಸಾಫಿಕಲ್ ಪ್ರಶ್ನೆಗಳಿಗೆ, ಯಾಮಿನಿಯ ಪ್ರಾಕ್ಟಿಕಲ್ ಉತ್ತರಗಳು ತಯಾರಿರುತ್ತಿದ್ದವು. ಕಾಲು ನೆಲದ ಮೇಲೆ ಇಟ್ಟುಕೊಂಡು ಪುಟ್ಟ ಪುಟ್ಟ ಸಂತಸಗಳನ್ನು ಅನುಭವಿಸುತ್ತಾ ದೊಡ್ಡ ದೊಡ್ಡ ಗುರಿಗಳ ಜತೆ ನಡೆಯುವ ಯಾಮಿನಿಯ ಬಗ್ಗೆ ಅದೇನೋ ಅಭಿಮಾನ ಬೆಳೆದುಕೊಂಡಿತು ಸುದೀಪ್ ಗೆ. ತನಗಿಂತ ದೊಡ್ಡವಳಾದ ಅವಳು ಫ್ರೆಂಡ್, ಗೈಡ್, ಫಿಲಾಸಫರ್- ಎಲ್ಲವೂ ಆದಳು.
ಅದೊಂದು ದಿನ ಸುದೀಪನನ್ನು ತನ್ನ ಮನೆಗೆ ಆಮಂತ್ರಿಸಿದಳು ಯಾಮಿನಿ. ಸಂಜೆ ಅವಳ ಮನೆಗೆ ಅವಳ ಜತೆಗೇ ಹೋದ.
ಬಾಗಿಲು ಬೆಲ್ ಮಾಡಿದಾಗ ಆಯಾ ಬಾಗಿಲು ತೆಗೆದಳು. ಒಳಗೆ ಕಾಲಿಡುತ್ತಿದ್ದಂತೆಯೇ ೩-೪ ವರ್ಷದ ಮಗುವೊಂದು ಬಂದು ’ಅಮ್ಮಾ ಯಾರಮ್ಮಾ ಈ ಅಂಕಲ್’ ಅನ್ನುತ್ತ ಬಂದಿತು.
’ಇವ್ರು ಸುದೀಪ ಅಂಕಲ್ ಪುಟ್ಟಾ’ ಅನ್ನುತ್ತ ಮಗುವಿನ ಕೈಹಿಡಿದುಕೊಂಡ ಯಾಮಿನಿ, ’ ಇವ್ಳು ನನ್ನ ಮಗಳು- ಸೃಷ್ಟಿ’ ಅಂದಳು.
ಸುದೀಪನಿಗೆ ಇದು ಅನಿರೀಕ್ಷಿತ. ’ಅಂದ್ರೆ ನಿಮಗೆ ಮದುವೆ ಆಗಿದೆಯಾ?’ ಅಂತ ಕೇಳಿದ.
’ಇಲ್ವಲ್ಲಾ..!!’ ಅನ್ನುತ್ತ ನಕ್ಕಳು ಯಾಮಿನಿ…

                      ***

4 thoughts on “ಯಾಮಿನಿ, ಯಾಮಿನಿ..ಹೇಳೆ ಯಾರು ನೀ? – 2”

  1. ಸಂಜೆ ಮನೆಗೆ ವಾಪಸಾಗುವಾಗ ಏನೋ ಯೋಚಿಸುತ್ತಾ ನಡೆಯುತ್ತಿದ್ದವನು ಎದುರಿಗಿದ್ದ ಗುಂಡಿ ನೋಡದೆ ಇನ್ನೇನು ಆಯ ತಪ್ಪಿ ಉರುಳುತ್ತಿದ್ದ.ಎದುರು ಅಂಗಡಿಯ ಶೆಟ್ಟಿ
    ಹೋ…ಹುಷಾರು ಮಾರಾಯ…ಏನು ಅಷ್ಟೊಂದು ಯೋಚನೆ…?ಅಂತ ಕೂಗಿದಾಗ ವಾಸ್ತವಕ್ಕೆ ಬಂದು ಬರಿದೇ ನಕ್ಕು ತಲೆ ಆಡಿಸಿದ ಸುದೀಪ
    ಬೆಂಗಳೂರಿನ ರಸ್ತೆಯಲ್ಲಿ ಗುಂಡಿಗಳಲ್ಲದೇ ಹೂವ ಇರುತ್ತಾ ಗುರೂ…’ಎಂದು ಅಂಗಡಿ ಕಟ್ಟೆ ಮೇಲೆ ಕೂತು ಸಿಗರೇಟು ಸುಡುತ್ತಿದ್ದ ಪಡ್ಡೆಯೊಬ್ಬ ನಗುತ್ತಾ ಕೇಳಿದಾಗ
    ಜೀವನಕ್ಕೂ,ಬೆಂಗಳೂರಿನ ರಸ್ತೆಗಳಿಗೂ ಎಷ್ಟೊಂದು ಸಾಮ್ಯತೆ ಇದೆ ಅಲ್ಲಾ ಅಂತ ಅನ್ನಿಸಿ ಒಂಚೂರು ನಗು ಬಂತು

    ಶೆಟ್ಟಿ ತನ್ನ ಲಡಕಾಸಿ ರೇಡಿಯೋ ಟ್ಯೂನ್ ಮಾಡುತ್ತಿದ್ದವನು ಕೊನೆಗೊಂದು ಸ್ಟೇಶನ್ನಿಗೆ ರೇಡಿಯೋ ಸ್ಥಾಪನೆ ಮಾಡಿ ಕೆಲಸದ ಹುಡುಗರಿಗೆ ಜೋರು ದನಿಯಲ್ಲಿ ಬೈಯಲಾರಂಭಿಸಿದ
    ಮೆಟ್ಟಿಲು ಹತ್ತುತ್ತಿದ್ದ ಸುದೀಪನಿಗೆ ಶೆಟ್ಟಿಯ ರೇಡಿಯೋದಲ್ಲಿನ ಯೇಸುದಾಸನ ಧ್ವನಿ ಅಲೆ ಅಲೆಯಾಗಿ ತೇಲಿ ಬಂತು `ಸುನಯ್ ನಾ…ಸುನಯ್ ನಾ…’

    ಸುನಯನಳ ನೆನಪು ಜಗ್ಗಿ ಕಾಡಿತು

    ಮನೆಗೆ ಬಂದು ಒಂದು ಕಪ್ಪು ಕಾಫಿ ಮಾಡಿಕೊಂಡು ಟಿ.ವಿ ಹಾಕಿಕೊಂಡು ಕೂತ.ಭಾರತ ತಂಡ ವಿಶ್ವ ಕಪ್ ಸೋತಿದ್ದು ಯಾಕೆ ಎಂಬ ಚರ್ಚೆ
    `ಸೋತಾಯಿತು…ಈಗ ಚರ್ಚೆ ಮಾಡಿದರೆ ಕಪ್ಪು ಬಂದು ಕೈಯಲ್ಲಿ ಕೂತು ಕೊಳ್ಳುತ್ತಾ…’ಅಂತ ಗೊಣಗಿಕೊಳ್ಳುತ್ತಾ ಚಾನಲ್ ಬದಲಿಸಿದ
    ಯಾವುದೋ ಕೆಟ್ಟ ಸಿನಿಮಾ ಹಾಡು ಇವರುಗಳಿಗೆ ಅಭಿರುಚಿಯೇ ಇಲ್ಲವೇ ಅಂತ ಪ್ರಶ್ನಿಸಿಕೊಳ್ಳುತ್ತಾ ಚಾನಲ್ ಗಳ ಬದಲಿಸುತ್ತಿರುವಾಗ ಅನುರಾಧ ಪಟೇಲ್ ಕಂಡಳು
    ಹದಿನೈದು ವರ್ಷಗಳ ಹಿಂದಿನ ಜಾಹಿರಾತು! ಸೀತಾಬಾಯಿಯ ಮೆಚ್ಚಿನದ್ದು ಚಿತ್ರಮಂಜರಿಯ ನಡುವೆ ಅನುರಾಧಳನ್ನು ಕಂಡಾಗಲೆಲ್ಲಾ `ಎಷ್ಟು ಚೆನ್ನಾಗಿ ರೇಶ್ಮೆ ಸೀರೆ ಉಟ್ಟು ಕಾಡಿಗೆ ಹಚ್ಕೋತಾ ಇದಾಳೆ ನೋಡೋ…’ ಅಂತ ಪ್ರತಿಸಾರಿ
    ಶೃಂಗಾರ್ ಕಾಡಿಗೆಯ ಆ ಜಾಹಿರಾತು ಬಂದಾಗ ಅಮ್ಮ ಮೆಚ್ಚಿಕೊಂಡು ಹೇಳುತ್ತಿದ್ದರಲ್ಲಾ ಅಂತ ನೆನಪಿಸಿಕೊಂಡ ಚಿಕ್ಕಂದಿನಲ್ಲಿ ನಮ್ಮನೆಯ ಕಪ್ಪು -ಬಿಳುಪು ಟಿ.ವಿಯಲ್ಲಿ ಕಂಡಷ್ಟು ಚೆನ್ನಾಗಿ ಈ ಕಲರ್ ಟಿವಿಯಲ್ಲಿ
    ಅನುರಾಧ ಕಾಣುತ್ತಿಲ್ಲ ಅನ್ನಿಸಿತು `ನೀನ್ಯಾರದಾದ್ರೂ ಮನೆಯ ಕಲರ್ ಟಿವಿಯಲ್ಲಿ ಇದ್ನ ನೋಡಿದರೆ ಅವಳ ಸೀರೆ ಬಣ್ಣ ಯಾವುದೂ ಅಂತ ತಿಳಿದು ಹೇಳೋ ಅಂತ ಅಮ್ಮ ಅವನ ಹತ್ರ ಕೇಳುತ್ತಿದ್ದದ್ದು ನೆನಪಿಗೆ ಬಂತು
    ವಾಲ್ಯೂಮ್ ಜೋರು ಮಾಡಿದ ಅನುರಾಧ ಪಟೇಲ್ ತನ್ಮಯಳಾಗಿ ಹಾಡಿಕೊಳ್ಳುತ್ತಾ ಕಾಡಿಗೆ ಬಳಿದುಕೊಳ್ಳುತ್ತಿದ್ದಳು `ನಯನ ಸುನಯನ ತಾವರೆ ಎಸಳು… ಶೃಂಗಾರ್ ಕಾಡಿಗೆಯಿಂದ ತೀಡಿ ತೀಡಿ…’

    ಮತ್ತೆ ಸುನಯನಳ ನೆನಪು….
    ತಾವರೆ ಎಸಳಿನಂತಾ ಕಣ್ಣು ಹೊಂದಿದ್ದ,ಕಾಡಿಗೆ ಹಚ್ಚಿಕೊಳ್ಳುತ್ತಿದ್ದ,ಸೀರೆ ಉಡುತ್ತಿದ್ದ ಸುನಯನ ಕೂಡಾ ಅಮ್ಮನಿಗೆ ಇಷ್ಟ ಆಗುತ್ತಿದ್ದಳಾ?
    ಸುನಯನಳನ್ನು ಸೊಸೆ ಮಾಡಿ ಕೊಳ್ಳಲು ಅಮ್ಮ ಒಪ್ಪಿಕೊಳ್ಳುತ್ತಿದ್ದರಾ?ಅಥವಾ ಕನ್ನಿಕಾಳಲ್ಲದೇ ಇನ್ಯಾರೂ ನನ್ನ ಸೊಸೆ ಆಗಲು ಸಾಧ್ಯವಿಲ್ಲಾ ಅಂತ ಹಟ ಹಿಡಿಯುತ್ತಿದ್ದರಾ?
    ತಲೆ ಕೊಡವಿಕೊಂಡ

    ಅಮ್ಮ ಒಪ್ಪಿಕೊಳ್ಳುತ್ತಿದ್ದರೋ ಇಲ್ಲವೋ ಸುನಯನ ನನ್ನವಳಾಗುವುದು ವಿಧಿ ಒಪ್ಪಿಕೊಳ್ಳಲಿಲ್ಲವಲ್ಲಾ… ನಿಟ್ಟುಸಿರು ಬಿಟ್ಟ

    ಸುದೀಪನನ್ನು ಕಾಡಲು ತಮಾಶಿಗೆಂದು`ಐಯ್ಯಾಮ್ ಎಂಗೇಜ್ಡ್ ‘ಅಂತ ಯಾವ ಘಳಿಗೆಯಲ್ಲಿ ಸುನಯನ ಹೇಳಿದ್ದಳೋ ಅಸ್ತು ದೇವತೆಗಳು `ಅಸ್ತು ಅಸ್ತು’ ಅಂದು ಬಿಟ್ಟಿದ್ದರು

  2. ಸುನಯನಳ ಜತೆ ನೀಲಿಕೇರಿಯ ದಿಬ್ಬದ ಮೇಲೆ ಸೂರ್ಯಾಸ್ತ ನೋಡುತ್ತ, ಅದೂ ಇದೂ ಹರಟುತ್ತ ಕುಳಿತಿದ್ದ ಘಳಿಗೆ ನೆನಪಾಯಿತು…
    ಇದ್ದಕ್ಕಿದ್ದಂತೆ ಅವಳೇನೋ ಹೇಳಬೇಕು ಅಂದುಕೊಳ್ಳುತ್ತಿದ್ದಾಳೆ ಅನಿಸಿತು ಸುದೀಪನಿಗೆ. ಕೇಳಿಯೇ ಬಿಟ್ಟ, ‘ಏನಾದ್ರೂ ಹೇಳೋದಿತ್ತಾ?’ ‘ಇಲ್ವಲ್ಲಾ’ ಅಂತ ಜಲಪಾತದಂತೆ ನಕ್ಕಳು ಸುನಯನ. ಮತ್ತೆ ತನಗೆ ಯಾಕೆ ಹಾಗನಿಸಿತೋ ಅರ್ಥವಾಗಲಿಲ್ಲ.
    ದಿಬ್ಬದಿಂದ ಕೆಳಗೆ ಬರುವ ವೇಳೆಗೆ ಅದೇನೋ ವಿವರಿಸಲಾಗದ ಬಾಂಧವ್ಯ ಇಬ್ಬರಲ್ಲೂ ಬೆಳೆದಿದೆಯೆಂದು ಆತನಿಗನಿಸಿತು. ಇನ್ನೊಮ್ಮೆ ಆಕೆಗೆ ‘ಐ ಲವ್ ಯು’ ಅನ್ನುವುದರಲ್ಲಿ ಅರ್ಥವಿಲ್ಲವೆನಿಸಿತು. ಸುದೀಪನ ಮನಸಲ್ಲಿ ಆಗಲೇ ಕನಸುಗಳು ದಿಬ್ಬಣ ಹೊರಟಿದ್ದವು…
    **********
    ಮರುದಿನವೇ ಎಲ್ಲಾ ಲೆಕ್ಕಾಚಾರ ತಲೆ ಕೆಳಗಾಗಿತ್ತು. ರಮೇಶ ವಾಪಸ್ ಬಂದಿದ್ದ. ಅವನ ಜತೆ ಸುತ್ತಾಡಿ ಸಂಜೆ ವಾಪಸ್ ಬರುವಾಗ ಸುನಯನಳಿಗೆ ಮದುವೆ ನಿಶ್ಚಯವಾಗಿದೆ, ಹುಡುಗ ಫಾರಿನ್ ನಲ್ಲಿ ಇರುವ ಕಾರಣ ಬೇಗನೆ ಮದುವೆ ಮುಗಿಸಬೇಕು ಅಂತ ಎಲ್ಲರೂ ನಿರ್ಧರಿಸಿ, ಮದುವೆಗೆ ದಿನ ನಿಶ್ಚಯಿಸಿ ಆಗಿತ್ತು.
    ಇನ್ನು ಆ ಊರಿನಲ್ಲಿರುವುದು ಬೇಡವೆನಿಸಿ, ಬೆಂಗಳೂರಿಗೆ ವಾಪಸ್ಸಾದ. ಆದರೂ ಯಾಕೋ ಮನಶಾಂತಿಯಿಲ್ಲವೆನಿಸಿ ಮತ್ತಷ್ಟು ದಿನ ರಜಾ ತೆಗೆದುಕೊಂಡು ಊರಿಗೆ ಹೋಗಿ, ಅಮ್ಮನ ಜತೆ ಇದ್ದು, ಸ್ವಲ್ಪ ಮಟ್ಟಿಗೆ ಮನಸು ತಹಬಂದಿಗೆ ಬಂದ ಮೇಲೆ ವಾಪಸ್ ಬೆಂಗಳೂರಿಗೆ ಬಂದು ಬಿಟ್ಟಿದ್ದ ಸುದೀಪ.
    ***********
    ಯಾಮಿನಿಯ ಜತೆ ಹೊಸ ಪ್ರಾಜೆಕ್ಟ್ ಬಗ್ಗೆ ಡಿಸ್ ಕಷನ್ ಮಾಡಬೇಕಿತ್ತು. ಅವಳ ಚೇಂಬರ್ ಗೆ ಫೈಲ್ ತೆಗೆದುಕೊಂಡು ಹೋದ ಸುದೀಪ.
    ಅವನು ಒಳಗೆ ಪ್ರವೇಶಿಸುವುದಕ್ಕೂ ಅವಳ ಫೋನ್ ರಿಂಗ್ ಆಗುವುದಕ್ಕೂ ತಾಳೆಯಾಯಿತು.
    ‘ಎಕ್ಸ್ಕ್ಯೂಸ್ ಮಿ, ಒಂದೇ ನಿಮಿಷ’ ಅನ್ನುತ್ತ ಫೋನ್ ರಿಸೀವ್ ಮಾಡಿದಳು.
    ಫೈಲ್ ಟೇಬಲ್ ಮೇಲಿಟ್ಟ ಸುದೀಪ ನೀರು ಜಗ್ ನಿಂದ ಬಗ್ಗಿಸಿ ಕುಡಿಯಹೊರಟ.
    ಫೋನ್ ನಲ್ಲಿ ಆಕೆ ಹೇಳುತ್ತಿದ್ದಳು… ‘ಇಲ್ಲ, ಇವತ್ತು ಬ್ಯುಸಿ, ಸಿಗಕ್ಕಾಗಲ್ಲ ಕಣೋ…’
    ‘ಹಾಗೇನೇ ಅಂದ್ಕೋ. ಸತ್ಯ ಇದ್ರೂ ಇರಬಹುದು’
    ಮಾತಾಡುತ್ತ ಕಿಟಿಕಿ ಕಡೆ ನಡೆದಳು… ಬೇಡ-ಬೇಡವೆಂದರೂ ಆಕೆಯ ಮಾತುಗಳು ಸುದೀಪ್ ನ ಕಿವಿಯ ಮೇಲೆ ಬೀಳುತ್ತಿದ್ದವು…
    ‘ಎರಡು ಕೈ ಸೇರಿದರೆ ಮಾತ್ರ ಚಪ್ಪಾಳೆ ಅಲ್ವಾ?’
    ‘………………..’
    ‘ಟ್ರೈನ್ ನಲ್ಲಿ ಹೋಗ್ತಾ ನೂರಾರು ಸ್ಟೇಷನ್ಸ್ ಸಿಗ್ತಾವೆ, ಪ್ರತಿ ಸ್ಟೇಷನ್ ನಲ್ಲೂ ಇಳಿಯಕ್ಕಾಗತ್ತಾ? ಎಷ್ಟೊಂದು ಸಲ ಯಾವುದೋ ಒಂದು ಸ್ಟೇಷನ್ ಚಂದ ಕಂಡ್ರೆ ಅಲ್ಲಿಳೀತೀವಿ, ತಿಂಡಿ ತಿಂದ್ಬಿಟ್ಟು ಮತ್ತೆ ಟ್ರೈನ್ ಹತ್ಕೋತೀವಿ ಅಲ್ವಾ?’
    ಸುದೀಪ ಕೇಳುತ್ತಾ ಕುಳಿತಿದ್ದ, ಅವಳ ಎಲ್ಲಾ ಮಾತು ತನಗೆ ಅರ್ಥವಾಗುತ್ತಿವೆಯೆನಿಸಿತು.
    ‘………………..’
    ‘ಹುಚ್ಚ ಕಣೋ ನೀನು, ದೇವದಾಸನ ಕಾಲ ಎಂದೋ ಮುಗೀತು’
    ‘………………..’
    ‘ಇಲ್ಲ ಕಣೋ, ಬದುಕಿಗೆ ಫುಲ್ ಸ್ಟಾಪ್ ಒಂದೇ ಇರತ್ತೆ, ನಡುವಲ್ಲಿ ಬರುವವೆಲ್ಲಾ ಕೋಮಾಗಳೇ.. ಫುಲ್ ಸ್ಟಾಪ್ ಬರೋತನ್ಕ ಬದುಕಿನ ಗಾಡಿ ಸಾಗ್ತಿರತ್ತೆ, ಸಾಗ್ತಿರಬೇಕು…’
    ‘………………..’
    ‘ನೋಡು, ನಾನು ಹೇಳಬೇಕಾದ್ದು ಹೇಳಿದ್ದೀನಿ, ಆಗದೇ ಇರೋದು ಮನ್ಸಲ್ಲಿಟ್ಕೊಂಡು ಈ ಥರ ತಲೆ ತಿನ್ನೋದಾದ್ರೆ ಇವಾಗ್ಲೇ ನಿಂಗೆ ಗುಡ್ ಬೈ…’
    ‘………………..’
    ‘ಇಲ್ಲ. ಯಾವತ್ತೂ ಇಲ್ಲ’
    ‘………………..’
    ‘ಸುಮ್ಮನೇ ಅದೇ ಮತ್ತೆ ನೆನಪಿಸ್ಕೊಂಡು ಕೊರಗ್ಬೇಡ, ವಿ ಆರ್ ನಾಟ್ ಮೇಡ್ ಫಾರ್ ಈಚ್ ಅದರ್, ನಿನ್ನ ಸ್ಟೇಶನ್ ಬೇರೆ ಇದೆ, ಗುಡ್ ಬೈ’
    ಫೋನ್ ಕಟ್ ಮಾಡಿ ಬಂದಳು, ಸುದೀಪ್ ಎದುರಿಗೆ ಕುಳಿತುಕೊಂಡಳು. ಸುಮ್ಮನಿದ್ದಳು.
    ಸುದೀಪ್ ಗಂಟಲಲ್ಲಿ ಪ್ರಶ್ನೆಯೊಂದು ಸಿಕ್ಕಿ ಹಾಕಿಕೊಂಡಿತ್ತು… ಎರಡು ಕ್ಷಣ ತೂಕ ಮಾಡಿದ, ಮೂರನೇ ಕ್ಷಣಕ್ಕೆ ಕೇಳಿಯೇ ಬಿಟ್ಟ..
    ‘ಯಾವುದೋ ಸ್ಟೇಶನ್ ನಮ್ದು ಅನ್ಕೊಂಡು ಇಳಿದು ಬಿಟ್ಟಿರ್ತೀವಲ್ಲ, ನಮ್ದಲ್ಲ ಅಂತ ಗೊತ್ತಾದ್ಮೇಲೆ ಏನ್ಮಾಡೋದು?’
    ‘ಇನ್ನೊಂದು ಗಾಡಿ ಬಂದೇ ಬರತ್ತೆ, ಹತ್ಕೊಂಡು ಹೋಗೋದು’ ಅನ್ನುತ್ತ ನಕ್ಕಳು ಯಾಮಿನಿ.
    ಆ ನಗೆಯ ಹಿಂದಿನ ಭಾವವನ್ನು ಅಳೆಯಲಾಗಲಿಲ್ಲ ಸುದೀಪ್ ಗೆ.
    ‘ಹೊಸ ಪ್ರಾಜೆಕ್ಟ್ ಡಿಸ್ ಕಷನ್ ಮಾಡಿ ಫೈನಲೈಸ್ ಮಾಡೋಣ ಅಂತ ಬಂದೆ, ಏನ್ಮಾಡೋಣ?’ ಅಂತ ಕೇಳಿದ.
    ‘ಏನ್ಮಾಡೋಣ ಅಂತ ಕೇಳ್ತಿದೀರಾ? ಥ್ಯಾಂಕ್ಸ್, ಅರ್ಥ ಮಾಡ್ಕೊಂಡಿದ್ದಕ್ಕೆ… ಮಧ್ಯಾಹ್ನ ನಂತ್ರ ಇಟ್ಕೊಳ್ಳೋಣ್ವಾ?’
    ‘ಸರಿ, ಹಾಗೇ ಮಾಡೋಣ’ ಅನ್ನುತ್ತ ಎದ್ದು ಬಂದ ಸುದೀಪ.
    *************
    ಸುದೀಪನ ಏನೇನೋ ಫಿಲಾಸಾಫಿಕಲ್ ಪ್ರಶ್ನೆಗಳಿಗೆ, ಯಾಮಿನಿಯ ಪ್ರಾಕ್ಟಿಕಲ್ ಉತ್ತರಗಳು ತಯಾರಿರುತ್ತಿದ್ದವು. ಕಾಲು ನೆಲದ ಮೇಲೆ ಇಟ್ಟುಕೊಂಡು ಪುಟ್ಟ ಪುಟ್ಟ ಸಂತಸಗಳನ್ನು ಅನುಭವಿಸುತ್ತಾ ದೊಡ್ಡ ದೊಡ್ಡ ಗುರಿಗಳ ಜತೆ ನಡೆಯುವ ಯಾಮಿನಿಯ ಬಗ್ಗೆ ಅದೇನೋ ಅಭಿಮಾನ ಬೆಳೆದುಕೊಂಡಿತು ಸುದೀಪ್ ಗೆ. ತನಗಿಂತ ದೊಡ್ಡವಳಾದ ಅವಳು ಫ್ರೆಂಡ್, ಗೈಡ್, ಫಿಲಾಸಫರ್- ಎಲ್ಲವೂ ಆದಳು.
    ಅದೊಂದು ದಿನ ಸುದೀಪನನ್ನು ತನ್ನ ಮನೆಗೆ ಆಮಂತ್ರಿಸಿದಳು ಯಾಮಿನಿ. ಸಂಜೆ ಅವಳ ಮನೆಗೆ ಅವಳ ಜತೆಗೇ ಹೋದ.
    ಬಾಗಿಲು ಬೆಲ್ ಮಾಡಿದಾಗ ಆಯಾ ಬಾಗಿಲು ತೆಗೆದಳು. ಒಳಗೆ ಕಾಲಿಡುತ್ತಿದ್ದಂತೆಯೇ ೩-೪ ವರ್ಷದ ಮಗುವೊಂದು ಬಂದು ’ಅಮ್ಮಾ ಯಾರಮ್ಮಾ ಈ ಅಂಕಲ್’ ಅನ್ನುತ್ತ ಬಂದಿತು.
    ’ಇವ್ರು ಸುದೀಪ ಅಂಕಲ್ ಪುಟ್ಟಾ’ ಅನ್ನುತ್ತ ಮಗುವಿನ ಕೈಹಿಡಿದುಕೊಂಡ ಯಾಮಿನಿ, ’ ಇವ್ಳು ನನ್ನ ಮಗಳು- ಸೃಷ್ಟಿ’ ಅಂದಳು.
    ಸುದೀಪನಿಗೆ ಇದು ಅನಿರೀಕ್ಷಿತ. ’ಅಂದ್ರೆ ನಿಮಗೆ ಮದುವೆ ಆಗಿದೆಯಾ?’ ಅಂತ ಕೇಳಿದ.
    ’ಇಲ್ವಲ್ಲಾ..!!’ ಅನ್ನುತ್ತ ನಕ್ಕಳು ಯಾಮಿನಿ…

  3. ತಪ್ಪಿಸಿಕೊಳ್ಳಲು ಪ್ರಯತ್ನಿಸಿದಷ್ಟೂ ಸುನಯನ ಮತ್ತೆ ಮತ್ತೆ ಕಾಡ ಹತ್ತಿದಳು….

    ***************************
    “ಬನ್ನಿ ಒಳಗೆ” ….ಮನೆಯ ಮುಖ್ಯದ್ವಾರದ ಎರಡೂ ಬದಿಗೆ ಕೈ ಆನಿಸಿ ನಿಂತ ಸುನಯನ. ಹೊಳೆಯುವ ಕಣ್ಣು, ದುಂಡುಮುಖ, ಅರೆಬಿರಿದ ತುಟಿ, ತಿದ್ದಿದ ಹುಬ್ಬು, ಹಣೆಯನ್ನು ಸ್ವಲ್ಪವೇ ಸ್ವಲ್ಪ ಆವರಿಸಿದ್ದ ಮೋಹಕ ಮುಂಗುರುಳು, ಸ್ನಿಗ್ಧನಗು… ಮತ್ತದೆಲ್ಲಕ್ಕೂ ಕಳಶವಿಟ್ಟಂತಿದ್ದ ಆಕೆಯ ಗುಳಿಬಿದ್ದ ಕೆನ್ನೆ….ಸುನಯನಳನ್ನು ಅದೇ ಮೊದಲ ಬಾರಿ ನೊಡುತ್ತಿದ್ದ ಸುದೀಪ ಸ್ತಭ್ದನಾದ…

    “ಏನು ಹಾಗೆ ನೋಡ್ತಿದೀರಾ? ದಾಕ್ಷಿಣ್ಯ ಬೇಡ. ಬನ್ನಿ ಒಳಗೆ”..(ನಂಗೆ ನಿದ್ದೆ ಬರ್ತಿದೆ. ನಾಳೆ ನೋಡ್ತೀನಿ.ಃ-((

  4. ****************
    “ಏನಪ್ಪಾ, ಏನು ಕೆಲಸ ಮಾಡ್ತಾ ಇದೀಯಾ ಅಂತ ನಾನು ಕೇಳಿದ್ದು. ನಿನ್ನ ನೋಡಿದ್ರೆ ಏನೋ ಭಾರಿ ಕನಸು ಕಾಣ್ತಾ ಇರೋ ಹಾಗಿದೆಯಲ್ಲಾ! ”
    ಹಹ್ಹಹ್ಹ…. ಯಾರೋ ಜೋರಾಗಿ ನಕ್ಕಂತಾಗಿ ಸುದೀಪ ಬೆಚ್ಚಿ ಬಿದ್ದ. ಅರೇ, ‘ಇದ್ಯಾರೋ ಹಿರಿಯರು, ಎಲ್ಲಿದ್ದೇನೆಂದು’ ಎಚ್ಚರಗೊಂಡ ಸುದೀಪನಿಗೆ ತನ್ನನ್ನೇ ಪಿಳಿ-ಪಿಳಿ ನೋಡುತ್ತಿದ್ದ ಸೃಷ್ಟಿ ಕಾಣಿಸಿದಳು, ಹೌದು, ಥೇಟ ಸುನಯನನಳ ಕಂಗಳೇ!!! ಆ ಮುದ್ದು ಮರಿಯ ಸುಂದರ ಸಮ್ಮೋಹಕ ಕಣ್ಣುಗಳು, ಸುದೀಪನ ಮನಸ್ಸನ್ನು ನೀಲಿಕೇರಿಯ ನೆನಪಿನಂಗಳಕ್ಕೆ ಜಾರಿಸಿಬಿಟ್ಟಿದ್ದವು.
    “ಇವರು ಸ್ವಲ್ಪ ಹಾಗೇ ಅಪ್ಪಾ, ಸ್ವಲ್ಪ ಕನಸು ಕಾಣೋದು ಜಾಸ್ತಿ” ಯಾಮಿನಿಯ ಮಾತುಗಳಿಂದ, ಆ ಹಿರಿಯರು ಅವಳ ತಂದೆ ಎಂದು ಅರಿವಾಗಿ ‘ನಮಸ್ಕಾರ’ ಹೇಳಿದ.

Leave a Reply to ಶ್ರೀ Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.