ತಿಳಿಯದೋ ನಿನ್ನಾಟ, ತಿರುಪತಿಯ ವೆಂಕಟ!

ರಚನೆ : ವ್ಯಾಸವಿಠಲ
ಗಾಯಕ : ರಾಯಚೂರು ಶೇಷಗಿರಿದಾಸ್

ಹಾಡು ಕೇಳಿ

ತಿಳಿಯದೋ ನಿನ್ನಾಟ
ತಿರುಪತಿಯ ವೆಂಕಟ ||ಪಲ್ಲವಿ||

ಪೊಳೆವ ನೀರೊಳು ಗೆಲುವ ಮೋರೆಯ
ನೆಲವ ನೋಡುವ ಸುಳಿವ ಕಂಬದಿ
ಇಳೆಯನಳೆಯುವ ಭಳಿರೆ ಭಾರ್ಗವ
ಖಳನ ಛೇಧಿಸಿ ಕೊಳಲ ಧ್ವನಿಗೆ
ನಳಿನಮುಖಿಯರ ನಾಚಿಸುವ ಬಲು
ಹಯದಳದ ಬಹು ಹವಣೆಗಾರನೆ ||ಅನು||

ಆರು ಬಲ್ಲರು ನಿಮ್ಮ ಶ್ರೀ ಲಕುಮಿ ಮನಸಿಗೆ ತೋರುವೆಯೊ ಪರಬೊಮ್ಮ
ಉಳಿದವರು ಬಲ್ಲರೆ ನೀರಜಾಸನ ಬೊಮ್ಮ ಇದು ನಿನ್ನ ಮರ್ಮ
ನೀರೊಳಗೆ ಮನೆ ಭಾರ ಬೆನ್ನಿಲಿ ಕೋರೆದಾಡೆಯ ನಾರಸಿಂಹನೆ
ಧರೆಯ ಬೇಡಿದ ಧೀರಪುರುಷನೆ ವಾರಿಬಂಧನ ಮಾರಜನಕನೆ
ನಾರಿಯರ ವ್ರತವಳಿದು ಕುದುರೆಯನೇರಿ ಮೆರೆಯುವ ಸುಂದರಾಂಗನೆ ||೧||

ಸಕಲಮಾಯವಿದೇನು ವೃಕನ ವಾಯು ಸಖನ ಸಲಹಿದೆ ನೀನು
ಭಕುತಿಯಿಂದಲಿ ತುತಿಪರಿಗೆ ಸುರಧೇನು ಸುರಕಾಮಧೇನು
ನಿಖಿಳ ವೇದೋದ್ಧಾರ ಗಿರಿಧರ ಅಖಿಳ ಭೂಮಿಯ ತಂದ ನರಹರಿ
ಯುಕುತಿಯಲಿ ನೆಲನಳೆದ ಭಾರ್ಗವ ಮುಕುತಿಗೋಸುಗ ಫಲವ ಸವಿದನೆ
ರುಕುಮನನುಜೆಯ ರಮಣ ಬೌದ್ದನೆ ಲಕುಮಿರಮಣನೆ ಕಲ್ಕಿರೂಪಿಯೆ ||೨||

ನಿನ್ನ ರೂಪಿನ ಲೀಲಾ ನೋಡುವ ಜನಕೆ ಕಣ್ಣು ಸಾವಿರವಿಲ್ಲ
ನಾ ಪಾಡಿ ಪೊಗಳಲು ಪನ್ನಗಾಧಿಪನಲ್ಲ ನೀನರಿಯದಿಲ್ಲ
ಕಣ್ಣುಮುಚ್ಚದೆ ಬೆನ್ನು ತೋರುವಿ ಮಣ್ಣು ಕೆದರುವಿ ಚಿಣ್ಣಗೊಲಿದನೆ
ಸಣ್ಣವಾಮನ ಅಣ್ಣರಾಮನೆ ಪುಣ್ಯಪುರುಷನೆ ಬನ್ನ ಬಡಕನೆ
ಹೆಣ್ಣುಗಳ ವ್ರತಕೆಡಿಸಿ ತೇಜಿಯ ಬೆನ್ನನೇರಿದ ವ್ಯಾಸವಿಠಲ||

2 thoughts on “ತಿಳಿಯದೋ ನಿನ್ನಾಟ, ತಿರುಪತಿಯ ವೆಂಕಟ!”

  1. mala says:

    chennaagide..
    banna baDuka aMdarEnu..?

  2. ramesh says:

    tumba chennagide

Leave a Reply to ramesh Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಘಟಿಕಾಚಲದಿ ನಿಂತ ಶ್ರೀ ಹನುಮಂತಘಟಿಕಾಚಲದಿ ನಿಂತ ಶ್ರೀ ಹನುಮಂತ

ರಚನೆ – ಪುರಂದರದಾಸರು ಹಾಡು ಕೇಳಿ ಘಟಿಕಾಚಲದಿ ನಿಂತ ಶ್ರೀ ಹನುಮಂತ ಘಟಿಕಾಚಲದಿ ನಿಂತ ಪಟು ಹನುಮಂತನ ಪಠನೆಯ ಮಾಡಲುತ್ಕಟದಿ ಪೊರೆವೆನೆಂದು ||ಪಲ್ಲವಿ|| ಚತುರ್ಯುಗದಿ ತಾನು ಮುಖ್ಯಪ್ರಾಣನು ಚತುರ್ಮುಖನಯ್ಯನ ಚತುರ ಮೂರುತಿಗಳ ಚತುರತನದಿ ಭಜಿಸಿ ಚತುರ್ಮುಖನಾಗಿ ಜಗಕೆ ಚತುರ್ವಿಧ ಫಲ ಕೊಡುತ

ರಥವೋಗದ ಮುನ್ನ ಗೋಕುಲಕೆರಥವೋಗದ ಮುನ್ನ ಗೋಕುಲಕೆ

ನಿನ್ನೆ ಏನನ್ನೊ ಹುಡುಕುತ್ತಿದ್ದಾಗ ನನಗೊಂದು ರತ್ನವೇ ಸಿಕ್ಕಿತು. “ರಥವೋಗದ ಮುನ್ನ” ದಾಸ ಸಾಹಿತ್ಯದಲ್ಲಿ ಅಪರೂಪವೆನಿಸುವ ಕೃತಿ. ಶ್ರೀದವಿಠಲರಿಂದ ರಚಿತವಾಗಿರುವ ಈ ಕೀರ್ತನೆಯನ್ನು ಹಿಂದೆಯೂ ಕೇಳಿದ್ದೆ. ಆದರೆ ಈ ಬಾರಿ ರಾಗದ ಹಂಗಿಲ್ಲದೆ, ಹಾಗೆಯೇ ಓದಿಕೊಂಡಾಗ ನವಿರಾದ ಭಾವನೆಗಳಿಂದ ತುಂಬಿರುವ ಭಾವಗೀತೆಯನ್ನು ಸ್ಪರ್ಶಿಸಿದಂತಾಯಿತು.

ರಮಾ ಸಮುದ್ರನ ಕುಮಾರಿರಮಾ ಸಮುದ್ರನ ಕುಮಾರಿ

ರಚನೆ : ಕಮಲೇಶ ವಿಠಲ (ರಾಜಾ ಎಸ್. ಗುರುರಾಜಾಚಾರ್) ಗಾಯಕ : ವಿದ್ಯಾಭೂಷಣ ಹಾಡು ಕೇಳಿ:- ರಮಾ ಸಮುದ್ರನ ಕುಮಾರಿ ನಿನ್ನಯ ಸಮಾನರಾರಮ್ಮ||ಪಲ್ಲವಿ|| ಸುಮಾಸ್ತ್ರನಯ್ಯನ ಎದೆಯಲಿ ಸತತವೂ ಅಭಿಮಾನದಲಿ ಮೆರೆವ ಮಹಾಮಹಿಮಳೇ ||ಅನು|| ಕನಕ ಮುಕುಟ ಮಂಡಿತ ಕುಟಿಲಾಳಕಜಾಲೇ | ಶ್ರೀ