ಗಟ್ಟಿಮೇಳ – ೨೦೦೦
ಸಾಹಿತ್ಯ ಮತ್ತು ಸಂಗೀತ – ಹಂಸಲೇಖ
ಗಾಯಕರು-

೧. ಹೇಮಂತ್

೨. ಸೋನು ನಿಗಮ್, ಚಿತ್ರ

ಹಂಸವೇ ಹಂಸವೇ ಹಾಡು ಬಾ,
ಸೃಷ್ಟಿಯ ಸಂಭ್ರಮ ನೋಡು ಬಾ
ಚಂದಮಾಮ ಅಲ್ಲಿ ನೈದಿಲೆ ಇಲ್ಲಿ
ಮೋಹವಿದೆ ಸ್ನೇಹವಿದೆ
ಪ್ರೀತಿಸುವ ದಾರಿ ಇದೆ

ಹಂಸವೇ ಹಂಸವೇ ಹಾಡು ಬಾ ಹಾಡು ಬಾ ಹಾಡು ಬಾ ||ಪ||

ಚಂದ್ರನ ಬಿಂಬವ ನೀರಲ್ಲಿ ತೋರುವ
ಚುಕ್ಕಿಯ ಹೂಗಳ ತರಲೆಂದು ಕೇಳುವ
ಗಂಡನಿಗೊಂದು ಕಂದ ಬೇಕಾ?
ಎನ್ನುವ ಹೆಂಡತಿ ನೋವು ಸುಖ
ಓಲೆ ಆಗುವ ಒಲವೇ ಆಗುವ
ನೋಟ ನೀ ನೋಡು ಬಾ ||೧||

ಹಂಸವೇ ಹಂಸವೇ ಹಾಡು ಬಾ ಹಾಡು ಬಾ ಹಾಡು ಬಾ |

ಓಲೆಯ ಒಳಗೆ ತಾಯಿಯ ತವಕ
ಕಾತರದೊಳಗೂ ತಂದೆಯ ಪುಳಕ
ಕಂದನ ಬರುವಿಗೆ ಕಾಯೋದಿದೆ
ಸಾವಿರ ಹರಕೆ ತುಂಬೋದಿದೆ
ನವಮಾಸ ಹೊರೆ ಹೊರುತಾಳೆ ಧರೆ
ಹರಸಿ ನೀ ನೋಡು ಬಾ ||೨||

ಹಂಸವೇ ಹಂಸವೇ ಹಾಡು ಬಾ
ಸೃಷ್ಟಿಯ ಸಂಭ್ರಮ ನೋಡು ಬಾ
ಚಂದಮಾಮ ಅಲ್ಲಿ ನೈದಿಲೆ ಇಲ್ಲಿ
ಮೋಹವಿದೆ ಸ್ನೇಹವಿದೆ
ಪ್ರೀತಿಸುವ ದಾರಿ ಇದೆ  ||ಪ||

***

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.