ಯುಗಾದಿ ಮರಳಿ ಬರುತಿದೆ – ಬೇಂದ್ರೆ

  ಕವನ : ಯುಗಾದಿ ಕವಿ : ಅಂಬಿಕಾತನಯ ದತ್ತ (ದ.ರಾ.ಬೇಂದ್ರೆ) ಹಾಡು ಕೇಳಿ  ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ಹೊಂಗೆ ಹೂವ ತೊಂಗಲಲ್ಲಿ ಭೃಂಗದ ಸಂಗೀತ ಕೇಲಿ ಮತ್ತೆ ಕೇಳಬರುತಿದೆ ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವಕಳೆಯ ತರುತಿದೆ ಕಮ್ಮನೆ Read More

ಒಂದು ಬಾರಿ ಸ್ಮರಣೆ ಸಾಲದೇ?

ರಚನೆ – ವಾದಿರಾಜರು ಗಾಯನ – ಪ೦ಡಿತ್ ವೆಂಕಟೇಶ್ ಕುಮಾರ್ ಹಾಡು ಕೇಳಿ :- ಒಂದು ಬಾರಿ ಸ್ಮರಣೆ ಸಾಲದೇ? ಆನಂದತೀರ್ಥರ, ಪೂರ್ಣಪ್ರಜ್ಞರ, ಸರ್ವಜ್ಞರಾಯರ, ಮಧ್ವರಾಯರ ||ಪ|| ಹಿಂದನೇಕ ಜನ್ಮದಲ್ಲಿ ನೊಂದು ಯೋನಿಯಲ್ಲಿ ಬಂದು ಇಂದಿರೇಶನ ಪಾದವನ್ನು ಹೊಂದಬೇಕೆಂಬುವರಿಗೆ || 1 || ಆರು ಮಂದಿ ವೈರಿಗಳನು ಸೇರಲೀಸದಂತೆ ನೂಕಿ ಧೀರನಾದ ಹರಿಯ ಪಾದ ಸೇರಬೇಕೆಂಬುವರಿಗೆ Read More

ದ್ವಾದಶ ಸ್ತೋತ್ರ – ಪ್ರೀಣಯಾಮೋ ವಾಸುದೇವಂ – Preenayamo Vasudevam – Dwadasha stotra

ವಂದಿತಾಶೇಷ ವಂದ್ಯೋರು ವೃಂದಾರಕಂ ಚಂದನಾ ಚರ್ಚಿತೋದಾರಪೀನಾಂಸಕಮ್ | ಇಂದಿರಾ ಚಂಚಲಾಪಾಂಗನೀರಾಜಿತಂ ಮಂದರೋದ್ಧಾರಿ ವೃತ್ತೋದ್ಭುಜಾಭೋಗಿನಂ | ಪ್ರೀಣಯಾಮೋ ವಾಸುದೇವಂ ದೇವತಾಮಂಡಲಾಖಂಡಮಂಡನಂ ಪ್ರೀಣಯಾಮೋ ವಾಸುದೇವಂ || ೧ || ಸೃಷ್ಟಿ ಸಂಹಾರ ಲೀಲಾವಿಲಾಸಾತತಂ ಪುಷ್ಟಷಾಡ್ಗುಣ್ಯ ಸದ್ವಿಗ್ರಹೋಲ್ಲಾಸಿನಮ್ | ದುಷ್ಟ ನಿಷ್ಯೇಷ ಸಂಹಾರಕರ್ಮೋದ್ಯತಂ ಹೃಷ್ಟಪುಷ್ಟಾತಿಶಿಷ್ಟ ಪ್ರಜಾ ಸಂಶ್ರಯಂ | ಪ್ರೀಣಯಾಮೋ ವಾಸುದೇವಂ ದೇವತಾಮಂಡಲಾಖಂಡಮಂಡನಂ ಪ್ರೀಣಯಾಮೋ ವಾಸುದೇವಂ || ೨ || Read More

ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರ

ಕವಿ : ಅಂಬಿಕಾತನಯದತ್ತ ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರ ಮಿಂಚು ಬಳಗ ತೆರೆತೆರೆಗಳಾಗಿ ಅಲೆಯುವುದು ಪುಟ್ಟಪೂರ ಅದು ನಮ್ಮ ಊರು ಇದು ನಿಮ್ಮ ಊರು ತಂತಮ್ಮ ಊರು ಧೀರ ಅದರೊಳಗೆ ನಾವು ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರ ಕರೆ ಬಂದಿತಣ್ಣ ತೆರೆ ಬಂದಿತಣ್ಣ ನೆರೆ ಬಂದಿತಣ್ಣ ಬಳಿಗೆ ಹರಿತದ ಭಾವ ಬೆರಿತದ Read More

ಆದದ್ದೆಲ್ಲ ಒಳಿತೇ ಆಯಿತು!

ರಚನೆ: ಪುರಂದರದಾಸರು ಆದದ್ದೆಲ್ಲ ಒಳಿತೇ ಆಯಿತು ನಮ್ಮ ಶ್ರೀಧರನ ಸೇವೆ ಮಾಡಲು ಸಾಧನ ಸಂಪತ್ತಾಯಿತು||ಪ|| ದಂಡಿಗೆ ಬೆತ್ತ ಹಿಡಿಯೊದಕ್ಕೆ ಮಂಡೆ ಬಾಗಿ ನಾಚುತಲಿದ್ದೆ ಹೆಂಡತಿ ಸಂತತಿ ಸಾವಿರವಾಗಲಿ ದಂಡಿಗೆ ಬೆತ್ತ ಹಿಡಿಸಿದಳಯ್ಯ || ೧ || ಗೋಪಾಳ ಬುಟ್ಟಿ ಹಿಡಿಯೊದಕ್ಕೆ ಭೂಪತಿಯಂತೆ ಗರ್ವಿಸುತಿದ್ದೆ ಆ ಪತ್ನೀ ಕುಲ ಸಾವಿರವಾಗಲಿ ಗೋಪಾಳ ಬುಟ್ಟಿ ಹಿಡಿಸಿದಳಯ್ಯ || ೨ Read More